Home Posts tagged #kundapura

ಕುಂದಾಪುರ: ಶ್ರೀ ಸಾಯಿ ಆಸ್ಪತ್ರೆಯಲ್ಲಿ24 ಗಂಟೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಉದ್ಘಾಟನೆ ಸಮಾರಂಭ

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಕು೦ದಾಪುರದ೦ತಹ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಗೆ ತುರ್ತು ಮತ್ತು ಅಪಘಾತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವುದು ಜೀವ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯ ಕುಂದಾಪುರ ವಕೀಲರಿಂದ ಪತ್ರ ಚಳವಳಿ

ಕುಂದಾಪುರ: ಕರಾವಳಿಯಲ್ಲಿ ಹೈಕೋರ್ಟ್ ಸ್ಥಾಪನೆಗೆ ಒತ್ತಾಯಿಸಿ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಂದ ನಡೆಯುತ್ತಿರುವ ಅಂಚೆ ಕಾರ್ಡ್ ಚಳವಳಿಯ ಭಾಗವಾಗಿ ಕುಂದಾಪುರದಲ್ಲೂ ಪತ್ರ ಚಳವಳಿ ಶುಕ್ರವಾರ ನಡೆಯಿತು. ಬಹುಕಾಲದ ಬೇಡಿಕೆಗೆ ಎಲ್ಲಾ ಪಕ್ಷಗಳ ನಾಯಕರೂ ಬೆಂಬಲ ನೀಡಿದ್ದಾರೆ. ಈ ಭಾಗದಿಂದ ಬಹಳಷ್ಟು ವ್ಯಾಜ್ಯಗಳು ಕೋರ್ಟ್‌ಗೆ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳುವುದರಿಂದ ಖರ್ಚು ವೆಚ್ಚಗಳು

ಹೆಮ್ಮಾಡಿ: ಜನತಾ ನವನೀತ 2.0 ಕಾರ್ಯಕ್ರಮ

ಹೆಮ್ಮಾಡಿ ಕಿರಿಮಂಜೇಶ್ವರದ ಸುಳ್ಳೆಯಲ್ಲಿರುವ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜನತಾ ನವನೀತ 2.0 ಕಾರ್ಯಕ್ರಮ ಸಂಭ್ರಮವು ಜಯಶ್ರೀ ಸಭಾಭವನದಲ್ಲಿ ನಡೆಯಿತು. ಕಲರ್ಸ್ ಕನ್ನಡ ಗಿಜ್ಜಿ ಗಿಲಿ ಗಿಲಿ ಖ್ಯಾತಿಯ ನಟಿ ದೀಕ್ಷಾ ಬ್ರಹ್ಮಾವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕುಗ್ಗದೆ ಸಕರಾತ್ಮಕ ಯೋಚನೆಯನ್ನು ಮೈಗೂಡಿಸಿಕೊಂಡು ಆ ಮೂಲಕ ಉತ್ತಮ ವ್ಯಕ್ತಿಗಳಾಗಿ ಬದುಕಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ,ಜನತಾ ಸಂಸ್ಥೆ

ಉರ್ವ ಸ್ಟೋರ್ ಅಂಬೇಡ್ಕರ್ ಭವನ ಮಂಗಳೂರಿನಲ್ಲಿ ಆಗಸ್ಟ್ 3 ಭಾನುವಾರದಂದು “ಕುಂದಾಪುರ ಕನ್ನಡ ಹಬ್ಬ -2025”

ಕುಂದಗನ್ನಡದ ನೆಲದಲ್ಲಿ ಹುಟ್ಟಿ, ಬದುಕಿಗೊಂದು ನೆಲೆಯರಸಿ ಮಂಗಳೂರಿಗೆ ಬಂದು ಸೇರಿ, ಇಲ್ಲಿಯವರಾದವರೆಲ್ಲರೂ ಸೇರಿ, ತಮ್ಮ ಮೂಲ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ “ಕುಡ್ಲದಗಿಪ್ಪ ಕುಂದಾಪ್ರದರ್” ಎಂಬ ವಾಟ್ಸಾಪ್ ಬಳಗವನ್ನು ರಚಿಸಿಕೊಂಡಿದ್ದಾರೆ. ಈಗ ಈ ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆ 650ನ್ನು ಮೀರಿದೆ.ಈ ವಾಟ್ಸಾಪ್ ಬಳಗದ ಸದಸ್ಯರೆಲ್ಲರೂ ಸೇರಿ , ಕಳೆದ ಐದು ವರ್ಷಗಳಿಂದ, ಆಷಾಢ ಮಾಸದ ಒಂದು

ಬೈಂದೂರು: ಆಗಸ್ಟ್‌ 3ರಂದು “ಕೆಸರಲ್ಲೊಂದಿನ ಗಮ್ಮತ್‌” ಕಾರ್ಯಕ್ರಮ

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಬೈಂದೂರು ನೇತ್ರತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ “ಕೆಸರಲ್ಲೊಂದಿನ ಗಮ್ಮತ್‌”ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರನ್ನು ಒಂದೇ ಸೂರಿನಡಿ ಸೇರಿಸಿ, ಹೆಸರೇ ತಿಳಿಸುವಂತೆ ಗಡ್ಜ್‌ ಗಮ್ಮತ್‌ ಮಾಡುವ ಪರಿಕಲ್ಪನೆ ಆಯೋಜಕರದ್ದಾಗಿದೆ. ಇದೇ ಬರುವ ಆಗಸ್ಟ್‌ 3 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನೈಲಾಡಿ ಬೈಲ್‌ ಹಾಗೂ

ಸಿದ್ದಾಪುರ: ಜೂ.15ರಂದು ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್(ರಿ).ಬೆಚ್ಚಳ್ಳಿ, ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ

ಸಿದ್ದಾಪುರದ ಸಾವಯವ ಕೃಷಿ ಪರ ಹಾಗೂ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ರಾಜೇಂದ್ರ ಪೂಜಾರಿ ಸಾರಥ್ಯದಲ್ಲಿ ಸಾರ್ವಜನಿಕ ಕಳಾಕಳಿಯ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್. (ರಿ)ಬೆಚ್ಚಳ್ಳಿ ಹೊಸಂಗಡಿಯ ನೋಂದಾಯಿತ ಪ್ರಥಮ ಸಾಲಿನಲ್ಲೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟ್ರಸ್ಟ್ ಆಗಿದೆ. ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ:15-06-2025ನೇ ಆದಿತ್ಯವಾರ ಬೆಳಿಗ್ಗೆ ಘಂಟೆ 09.00ಕ್ಕೆ ಶ್ರೀ

ಬೈಂದೂರು:; ತ್ರಾಸಿ ಬೀಚಿನಲ್ಲಿ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಸಮುದ್ರದಲ್ಲಿ ನಾಪತ್ತೆ!

ಬೈಂದೂರು: ಬೇಲುಗ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಶನಿವಾರ ಸಂಜೆಯ ವೇಳೆ ಪ್ರವಾಸಿಗರನ್ನು ಸಮುದ್ರದಲ್ಲಿ ರೈಡಿಗೆ ಕರೆದುಕೊಂಡು ಹೋದಾಗ ಅಬ್ಬರದ ಸಮುದ್ರದ ಅಲೆಗೆ ಜಸ್ಕಿ ಪಲ್ಟಿ ಪಡೆದ ಪರಿಣಾಮ ಜಸ್ಕಿ ರೈಡರ್ ರವಿ ಎಂಬ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣ ನಡೆದಿದೆ. ಸಮುದ್ರದಲ್ಲಿ ಜಸ್ಕಿ ರೈಡಿಗೆ ಹೋದ ಪ್ರವಾಸಿಗ ಪ್ರಾಣಅಪಾಯದಿಂದ ಪಾರಾಗಿ ಬಂದಿದ್ದಾರೆ, ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್

ಕುಂದಾಪುರದ ಗೇರುಕಟ್ಟೆ ಸಮೀಪ ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿ

ಕುಂದಾಪುರ: ನಿನ್ನೆ ರಾತ್ರಿ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗೇರುಕಟ್ಟೆ ಸಮೀಪ ನಡೆದಿದೆ. ಗೇರುಕಟ್ಟೆ ನಿವಾಸಿ ಫಕೀರ ಸಾಹೇಬರ ವಠಾರದ ಅಬ್ದುಲ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಚಾವಣಿ, ವಿದ್ಯುತ್ ಪರಿಕರಗಳು ಹಾಗೂ ಮನೆಯ ಕೆಲವು ಸಾಮಾಗ್ರಿಗಳು ಭಾಗಶಃ ಹಾನಿಯಾಗಿದೆ. ಈ ಘಟನೆಯ ವೇಳೆ ಅಬ್ದುಲ್ ದಂಪತಿಗಳು ತಮ್ಮ ಮಗನ ಮನೆಯಲ್ಲಿ ಇದ್ದುದರಿಂದ ಅಪಾಯದಿಂದ

ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು – ನವರಾತ್ರಿ ಉತ್ಸವ ಕಾರ್ಯಕ್ರಮ

ಕುಂದಾಪುರ: ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ಅಕ್ಟೋಬರ್ 3 ರಿಂದ ಆರಂಭಗೊಂಡು ಅಕ್ಟೋಬರ್ 12 ರ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಚಂಡಿಕಾ ಹೋಮ, ದುರ್ಗಾ ಹೋಮ ಮತ್ತು ವಿಶೇಷ ಪೂಜೆ ಜರುಗಲಿದೆ. ಸಂಜೆ 5 ರಿಂದ ಶ್ರೀ ದೇವಿಯ

ಕುಂದಾಪುರ: ಗಾಳ ಹಾಕಿ ಮೀನು ಹಿಡಿದ ಖ್ಯಾತ ನಟ ರಿಷಬ್ ಶೆಟ್ಟಿ

ಕುಂದಾಪುರ:ಕಾಂತಾರ ಸಿನೆಮಾದ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ ಅವರು ಕುಂದಾಪುರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದರ ಮುಖೇನ ಗಮನ ಸೆಳೆದಿದ್ದಾರೆ.ಕುರುಡಿ,ಕೆಂಬೇರಿ,ಕಲ್ಲ್ ಪೊಟರಿ,ಹೊಳೆ ಬೈಗಿ ಸೇರಿದಂತೆ ಇನ್ನಿತರ ಜಾತಿಯ ಮೀನುಗಳು ಅವರ ಗಾಳಕ್ಕೆ ಬಿದ್ದಿದ್ದು. ಗಾಳ ಹಾಕಿ ಮೀನು ಹಿಡಿಯುವುದರಲ್ಲಿಯೂ ಪಂಟರ್ ಎನಿಸಿಕೊಂಡಿದ್ದಾರೆ.ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದರ ಮುಖೇನ ಗ್ರಾಮೀಣ ಬದುಕನ್ನು ಆಸ್ವಾಧಿಸುವುದರ ಮೂಲಕ ತಾನೊಬ್ಬ