Manipal, 9th Oct 2022: World Hospice and Palliative Care Day is celebrated on the second Saturday of October. Voices for Hospices Day is also celebrated on the same day every two years. Observing the World Hospice and Palliative Care Day is to share the vision of increasing access to hospice
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ದಂಪತಿಯ ಮೃತದೇಹಗಳು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿವೆ. ಮೃತರನ್ನು ಮಲ್ಲಿಕಾರ್ಜುನ್ ಬಸವರಾಜ್(35) ಮತ್ತು ಸೌಮ್ಯಾ ನಾಯಕ್(34) ಎಂದು ಗುರುತಿಸಲಾಗಿದೆ. ಈ ದಂಪತಿಯ ಮೃತದೇಹ ಅವರು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು
ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಬಹುಕಾಲದಿಂದ ಇದ್ದ ದೇವರ ಮೊಸಳೆ ಎಂದು ಪ್ರತೀತಿ ಪಡೆದಿದ್ದ ಬಬಿಯಾ ಎಂಬ ಹೆಸರಿನ ಮೊಸಳೆ ಮೃತಪಟ್ಟಿದೆ. ದೇವಸ್ಥಾನದ ನಿತ್ಯದ ಮಧ್ಯಾಹ್ನದ ಪೂಜೆಯ ಬಳಿಕ ಅನ್ನ ನೈವೇದ್ಯವನ್ನು ಮೊಸಳೆಗೆ ಬಡಿಸಲಾಗುತ್ತಿತ್ತು. ದೇವಸ್ಥಾನದ ನೈವೇದ್ಯವನ್ನು ತಿಂದು ಬದುಕುತ್ತಿದ್ದ ಈ ಬಬಿಯಾ ಹೆಸರಿನ ಮೊಸಳೆ ಯಾವತ್ತಿಗೂ ಜನರಿಗೆ ತೊಂದರೆ ಮಾಡಿದ್ದೆ ಇಲ್ಲ. ಕೆಲವೊಮ್ಮೆ ದೇವಸ್ಥಾನದ ಕೆರೆಯಿಂದ ಸಮೀಪದ
ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಮೊರಂಕಲ ನಿವಾಸಿ ಶೆಬಿನ್ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ಕೆಲವು ವರ್ಷಗಳಿಂದ ನೆಲ್ಯಾಡಿ ಯಲ್ಲಿ ಪ್ರೊಫೆಷನಲ್ ಕೊರಿಯರನ್ನು ನಡೆಸುತ್ತಿದ್ದ ಇವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಹಾಗೂ ಪೋಲಿಸ್
ಪುತ್ತೂರು: ವರ್ಷದ ಹಿಂದೆ ಪಾಟ್ರಕೋಡಿಯಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಪತ್ತೆ ಮಾಡಿದ ಪೆÇಲೀಸರು ಅರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ ನಿವಾಸಿ ಮಹಮ್ಮದ್ ಶಫೀಕ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ
ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಕಂಚಿನಡ್ಕದಿಂದ ಆರಂಭಗೊಂಡ ಜಾಥದಲ್ಲಿ ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದು, ದ್ವಿಚಕ್ರ ವಾಹನ ಸಹಿತ ಅಟೋ ರಿಕ್ಷಾಗಳು ಈ ಜಾಥದಲ್ಲಿ ಪಾಲ್ಗೊಂಡಿದ್ದವು. ಈ ಬಗ್ಗೆ ಮಾಹಿತಿ ನೀಡಿದ ಉರ್ದು ಶಾಲಾ ಮುಖ್ಯ ಶಿಕ್ಷಕ ಶಫಿಯುಲ್ಲಾ ಎಂಬವರು, ಲೋಕಕ್ಕೆ ಒಳ್ಳೆಯ ವಿಚಾರಗಳನ್ನು ಸಾರಿದ ಪ್ರವಾದಿಯವರ ಜನ್ಮ ದಿನಾಚರಣೆಯನ್ನು ಪಡುಬಿದ್ರಿ ಜಮಾತ್ ಮುಖಾಂತರ ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ದಿನವೂ ಕಂಚಿನಡ್ಕದಿಂದ
ಮಂಗಳೂರು: ತಲಾತಲಾಂತರದಿಂದ ಜಾರಿಯಲ್ಲಿರುವ ಹಲವಾರು ವರ್ಷಗಳ ಇತಿಹಾಸ ಇರುವ ದಸರಾ ಹಬ್ಬವನ್ನು ಸಂಘಪರಿವಾರವು ದುರುಪಯೋಗ ಪಡಿಸಿಕೊಂಡು ತಮ್ಮ ಕೋಮು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಎಸ್‍ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ. ಹಲವಾರು ವರ್ಷಗಳ ಇತಿಹಾಸ ಇರುವ ನಾಡ ಹಬ್ಬವಾಗಿರುವ ದಸರಾ ಹಬ್ಬವನ್ನು ಸಂಘಪರಿವಾರವೂ ದ್ವೇಷ ಹಬ್ಬಿಸುವ ಹಬ್ಬವಾಗಿ ಮಾರ್ಪಡಿಸುತ್ತಿದೆ.ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿದ ಉತ್ತರ ಪ್ರದೇಶ
ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾದ ನವ ವಿವಾಹಿತೆಯ ಶವ ಮನೆಯ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆಮೃತ ನವವಿವಾಹಿತೆ ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ(24), ಈಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬುವರನ್ನು ಅಂತರ್ ಜಾತಿ ವಿವಾಹವಾಗಿದ್ದ ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸ ವಿದ್ದಳು, ಕಾಪುವಿನ ಮಹಾಬಲ ಮಾರ್ಲ್ ಕಟ್ಟಡದ ಪ್ಯಾನ್ಸಿ
ಬೆಂಗಳೂರು,ಅ,8: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಇಂದು ಜೊತೆಯಾದರು. ತುಮಕೂರು ಜಿಲ್ಲೆಯ ಮಾಯಸಂದ್ರದಿಂದ ಬಾನಸಂದ್ರ ವರೆಗೆ ಮೂರು ಗಂಟೆಗಳ ಕಾಲ 12 ಕಿಲೋಮೀಟರ್ ದೂರ ಸಾಗಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ಯಶಸ್ವಿಯಾಗುತ್ತಿರುವ ಬಗ್ಗೆ ಎಂ.ಆರ್. ಸೀತಾರಾಂ ಸಂತಸ ಹಂಚಿಕೊಂಡರು. ಪಕ್ಷ ಸಂಘಟನೆ ಕುರಿತಂತೆಯೂ ಚರ್ಚಿಸಿದರು. ಬಳಿಕ
ಎಸ್ಸಿ, ಎಸ್‍ಟಿ ಮೀಸಲಾತಿ ಪ್ರಮಾಣ ಹಳ್ಳಕ್ಕೆ ರಾಜ್ಯ ಸರ್ಕಾರ ಸಂಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಲಭಿಸಿದ್ದು, ಇದಕ್ಕಾಗಿ ಸದನದ ಅನುಮೋದನೆ ಪಡೆಯುವುದಕ್ಕೆ ಸದ್ಯಕ್ಕೆ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. ನ್ಯಾಯಾಧೀಶ ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಎಸ್‍ಸಿ ಸಮುದಾಯದ ಮೀಸಲಾತಿ ಪ್ರಮಾಣ 15-17ಕ್ಕೆ




























