Home Posts tagged #mangalore (Page 367)

ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾಪುವಿನ ಉದ್ಯಾವರದಲ್ಲಿ ತೆರೆದ ಬಾವಿಗೆ ಬಿದ್ದ ದನವನ್ನು ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಉದ್ಯಾವರದ ಕೆಮ್ ತೂರು ಶಾರದಾ ಭಜನಾ ಮಂಡಳಿಯ ಸಮೀಪ ತೆರೆದ ಬಾವಿಗೆ ಈ ದನ ಬಿದ್ದಿತ್ತು.ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ,ಬಾವಿಗೆ ಹಗ್ಗ ಇಳಿಸಿ ಉಪಾಯದಿಂದ

ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ ಯಾರು ಮಾಡಿದ್ದಾರೆ ಗೊತ್ತಾಗಿದೆ : ಎಡಿಜಿಪಿ ಅಲೋಕ್ ಕುಮಾರ್

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಹತ್ಯೆ ನಡೆಸಿದವರು ಯಾರೆಂದು ಗೊತ್ತಾಗಿದೆ. ಅವರನ್ನು ಹಿಡಿದೇ ಹಿಡಿಯುತ್ತೇವೆ. ಜೊತೆಗೆ ಅದರ ಹಿಂದಿರುವ ತಂಡದ ಬಗ್ಗೆಯೂ ಮಾಹಿತಿ ಇದೆ, ನಾವು ಟ್ರೇಸ್ ಮಾಡ್ತೀವಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾವು ಮೂವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರಮುಖ ಮಾಹಿತಿಗಳು ಸಿಕ್ಕಿವೆ. ಅಮಾಯಕರನ್ನು ನಾವು ಬಂಧನ ಮಾಡಲ್ಲ. ಯಾರು ಶಾಮೀಲಾತಿ ಹೊಂದಿದ್ದಾರೋ

ಮಂಗಳೂರು : ದ್ವಿಚಕ್ರ ವಾಹನ ಪುರುಷ ಹಿಂಬದಿ ಸವಾರಿ ನಿಷೇಧ

ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ ತಪ್ಪಿಸಲು ಜಿಲ್ಲೆಯಾದ್ಯಂತ ತುರ್ತಾಗಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಾಗಿ ಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿಸುತ್ತಿದ್ದಾರೆ ಎಂಬ ಮಾಹಿತಿ ನೆಲೆಯಲ್ಲಿ ಪುರುಷ ವ್ಯಕ್ತಿಗಳು ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗುವುದು. ಹೊಸ ನಿಯಮ ಆಗಸ್ಟ್ 5ರಿಂದಲೇ ಜಾರಿಗೆ ಬರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಮಂಗಳೂರಿನ ಕಮಿಷನರ್

ಕೊಯನಾಡು ಬಳಿಯ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಬಿರುಕು

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯೆ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಮಾಣಿ-ಮೈಸೂರು ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಠಿಯಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಸದ್ಯ ಮುಂಜಾಗರೂಕತೆಯ ಕ್ರಮವಾಗಿ ಈ ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು ಪರಿಶೀಲನೆ

ಮೂಡುಬಿದರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕೀರ್ತಿನಗರದ ನಿವಾಸಿ ಅಲ್ಫೋನ್ಸ್ ( 68) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಅಲ್ಫೋನ್ಸ್ ಅವರು ಕಳೆದ ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಮನೆಯವರು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಬಾವಿಗೆ ಹಾರಿದ್ದು ಬೆಳಿಗ್ಗೆ ಹುಡುಕಾಡಿದಾಗ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ

ಜಿಲ್ಲಾ ಕಾರಾಗೃಹಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಮಂಗಳೂರು ಜೈಲ್ ನಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿತ್ತು.ಇದೀಗ ದಕ್ಷಿಣ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದಿದೆ, ಮಸೂದ್, ಫಾಝಿಲ್, ಪ್ರವೀಣ್ ಹತ್ಯಾ ಅರೋಪಿಗಳನ್ನು ಬಂಧಿಸಿಲಾಗಿದೆ. ಬಂಧಿತರೆಲ್ಲಾ ಮಂಗಳೂರು ಜೈಲ್ ನಲ್ಲಿದ್ದಾರೆ ಈ ಹಿಂದೆ ಹಲವು ಘಟನೆಗಳು ಮಂಗಳೂರು ಜೈಲ್ ನಲ್ಲಿ ನಡೆದಿದ್ದು.ಇದೀಗ ಎಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳ

ಬೆಳಪು : ಸಾವಿನಲ್ಲೂ ಒಂದಾದ ದಂಪತಿ

ಮದುವೆಯಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಸಿಹಿ ಕಹಿ, ನೋವು ನಲಿವು ಸವಾಲುಗಳನ್ನು ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪುವಿನ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು ಮಕ್ಕಳು

 ಕುಲಶೇಖರದ:   ಶ್ರೀ ವೀರನಾರಾಯಣ  ದೇವಸ್ಥಾನದಲ್ಲಿ ಜೀರ್ಣೋದ್ಧಾರ  ಪ್ರಯುಕ್ತಉತ್ತರಾರೋಹಣ ಪೂಜೆ

ಮಂಗಳೂರು: ಕುಲಶೇಖರದ ಪರಿಸರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರದ ಕಾರ್ಯದ ಪ್ರಯುಕ್ತ ಇಂದು ಉತ್ತರಾರೋಹಣ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ತಂತ್ರಿಗಳಾದ ವಾಮಂಜೂರು ಅನಂತ ಉಪಧ್ಯಾಯ ಅವರ ಮಾರ್ಗದರ್ಶನದಲ್ಲಿ  ಪ್ರಧಾನ ಅರ್ಚಕ ಜನಾರ್ಧನ್ ಭಟ್ ಅವರ ಪೌರೋಹಿತ್ಯದಲ್ಲಿ ದಾರು ಶಿಲ್ಪಿ ಸುಂದರ್ ಆಚಾರ್ಯ ಕೋಟೆಕಾರು ಅವರು ಗರ್ಭಗುಡಿಯ ಮೇಲ್ಚಾವಡಿಯ ಮಾಡಿನ ಕೆಲಸ

ತಲವಾರು ದಾಳಿ ವದಂತಿ ಪ್ರಕರಣ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯುವಂತೆ ಎಸ್ಡಿಪಿಐ ಒತ್ತಾಯ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತ ಕಿಶೋರ್ ಯಾನೆ ಕಿಚ್ಚು ಎಂಬಾತ ಇಂದು ತನ್ನ ಮೇಲೆ ಮೂರು ಜನ ವ್ಯಕ್ತಿಗಳು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಆತಂಕ ಸೃಷ್ಟಿಸಲು ಕಾರಣನಾಗಿದ್ದು ಈತ ವದಂತಿ ಹರಡಿರುವುದರ ಹಿಂದೆ ನಿಗೂಢ ಉದ್ದೇಶಗಳು ಇರುವ ಸಾಧ್ಯತೆಗಳಿದ್ದು ಇದರ ಹಿಂದೆ ಈತನಿಗೆ ಕೆಲವರು ಪ್ರೇರೇಪಣೆ ನೀಡಿ ಪ್ರದೇಶದಲ್ಲಿ