Home Posts tagged #mangalore (Page 388)

ಜೆಸಿಐ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ

ಜೆಸಿಐನ ವಲಯ ಎಕ್ಸ್‍ವಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು,ಜೇಸಿಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಮಾತ್ರವಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿಐ ಇಂಡಿಯಾ ಫೌಂಡೇಶನ್ ಗೆ ನೀಡುವುದರ ಮೂಲಕ,ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್

ಕರ್ನಾಟಕ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮ

ಎಸ್‍ಸಿಎಸ್ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಅಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ವತಿಯಿಂದ ವೈದ್ಯರ ದಿನಾಚರಣೆ ಹಮ್ಮಿಕೊಂಡರು. ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲರಾದ ಡಾ.ರವಿರಾವ್ ಎಸ್. ವೈದ್ಯರ ದಿನದ ಮಹತ್ವ ವಿವರಿಸಿದರು. ಎಸ್.ಸಿಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಿದ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ

ಪಡುಬಿದ್ರಿ ಜಂಕ್ಷನ್‍ ಮೋಪೆಡ್ ಸವಾರನ ಮೇಲೆ ಮುಗುಚಿ ಬಿದ್ದ ಲಾರಿ : ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು

ಲಾರಿಯೊಂದು ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಜಂಕ್ಷನ್ ನಲ್ಲಿ ನಡೆದಿದೆ.ಮೃತರನ್ನು ಕಂಚಿನಡ್ಕ ನಿವಾಸಿ ಶಂಸುದ್ದೀನ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ಪಡುಬಿದ್ರಿ ಜಂಕ್ಷನ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಮೇಲೆ ಮಗುಚಿಬಿತ್ತು. ಸ್ಥಳದಲ್ಲೇ ಮೃತಪಟ್ಟ ಶಂಶುದ್ದೀನ್ ಅವರ ಮೃತದೇಹವನ್ನು ಪೋಲಿಸರು ಸ್ಥಳೀಯರ

ಬೈಂದೂರಿನ ನಾವುಂದಲ್ಲಿ ಅಪಘಾತದಲ್ಲಿ ಮೂವರಿಗೆ ಗಾಯ ಒರ್ವನ ಸ್ಥಿತಿ ಗಂಭೀರ

ಬೈಂದೂರು: ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಬಸ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. ಕಾರು ಕುಂದಾಪುರದಿಂದ ಭಟ್ಕಳ ಕಡೆಗೆ ಸಾಗುತ್ತಿತ್ತು. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್

ಕನ್ನಯ್ಯನನ್ನು ಹತ್ಯೆ ಮಾಡಿದವರಿಗೆ ಶರೀಯತ್ ಪ್ರಕಾರ ಶಿಕ್ಷೆ ನೀಡಿ : ಹಿಂಜಾವೇ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಆಗ್ರಹ

ಮೂಡುಬಿದಿರೆ: ಶರೀಯಾ ಬೇಕೆಂದು ಕೇಳುವ ನಿಮಗೆ ಸಿವಿಲ್ ಕೋಡ್, ಹಿಂದೂಗಳಿಗೆ ಕ್ರಿಮಿನಲ್ ಕೋಡ್ ಎಂದು ಹೇಳುವ ನೀವು ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್, ಅಮರಾವತಿಯಲ್ಲಿ ಮುಕೇಶ್‍ರನ್ನು ಹತ್ಯೆ ಮಾಡಿರುವ ಪಾತಕಿಗಳನ್ನು ಗಲ್ಲಿಗೇರಿಸಬೇಡಿ. ಅವರ ಕೈ-ಕಾಲುಗಳನ್ನು ಕತ್ತರಿಸಿ ಹಾಕಿ ಶರೀಯತ್ ಪ್ರಕಾರ ಶಿಕ್ಷೆ ನೀಡಿ ಇದು ಹಿಂದೂ ಸಮಾಜದ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಇತ್ತೀಚೆಗೆ ರಾಜಸ್ತಾನ,

ತಂದೂರ್ ರೆಸ್ಟೋರೆಂಟ್‍ ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ನಿಧನ

ಮಂಗಳೂರಿನ ಪ್ರಸಿದ್ಧ ತಂದೂರ್ ರೆಸ್ಟೋರೆಂಟ್‍ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮಂಗಳೂರಿನ ಗುರುಪುರದವರಾದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದರು. ಇವರು ಪತ್ನಿ ಸುಜಾತ ಆನಂದ ರಾಯಿ, ಪುತ್ರ ವರದರಾಜ್ ಶೆಣೈ, ಪುತ್ರಿ ಶಾರದಾ ದಿಲೀಪ್ ಆಚಾರ್ಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಯುವಕನನ್ನು ಕತ್ತಿಯಿಂದ ಕಡಿದು ಕೊಲೆ : ಕೈಕಂಬದ ತಲಪಾಡಿಯಲ್ಲಿ ನಡೆದ ಘಟನೆ

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ. ಅತನ ಸ್ನೇಹಿತ ನೌಫಾಲ್ ಮತ್ತು ಇನ್ನೊಬ್ಬ ನ ಹೆಸರು ಸಿಕ್ಕಿಲ್ಲ ಇಬ್ಬರು ಸೇರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.ಇವರು ಗಾಂಜ ಗಿರಾಕಿಗಳಾಗಿದ್ದು , ತಲಪಾಡಿ ರಾಷ್ಟ್ರೀಯ ಹೆದ್ದಾರಿ

ಕುಡ್ತಮುಗೇರು ರಸ್ತೆ ಸಂಪೂರ್ಣ ಜಲಾವೃತ: ರಸ್ತೆ ಸಂಚಾರ ಸ್ಥಗಿತ

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ರಂದು ನಡೆದಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರು ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ