Home Posts tagged #mangaluru (Page 10)

ಕಟೀಲು ಶಿಕ್ಷಣ ಸಂಸ್ಥೆಯಿಂದ ಭ್ರಮರ ಇಂಚರ ಕಾರ್ಯಕ್ರಮ

ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು ಎಂದು ಸಿನೆಮಾ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಶಿಕ್ಷಣ ಸಂಸ್ಧೆಗಳ ವತಿಯಿಂದ ನಡೆದ ಭ್ರಮರ ಇಂಚರ ಕಾರ್ಯಕ್ರಮದ ಸಿನೆಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಅವಕಾಶ ಸಿಕ್ಕಾಗ

ಮಂಗಳೂರು ಸಿಸಿಬಿ ಡಿವೈಎಸ್‌ಪಿ ಪರಮೇಶ್ವರ ಉಡುಪಿಗೆ ಬಡ್ತಿ

ಪರಮೇಶ್ವರ ಅನಂತ ಹೆಗ್ಡೆ ಅವರನ್ನು ಉಡುಪಿಯ ಎರಡನೆಯ ಹೆಚ್ಚುವರಿ ಪೋಲೀಸು ಆಯುಕ್ತರಾಗಿ ನೇಮಕ ಮಾಡಲಾಗಿದೆ.ಮಂಗಳೂರಿನ ಸಿಸಿಬಿ- ಅಪರಾಧ ಪತ್ತೆ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಪರಮೇಶ್ವರ ಅವರಿಗೆ ಬಡ್ತಿ ಸಿಕ್ಕಿದೆ.1994ರಲ್ಲಿ ಎಸ್‌ಐ ಆಗಿ ಪರಮೇಶ್ವರ ಅವರು ಪೋಲೀಸು ಇಲಾಖೆಗೆ ಸೇರಿದ್ದರು. ಉಡುಪಿಯಲ್ಲಿ ಈಗಾಗಲೇ ಒಬ್ಬರು ಹೆಚ್ಚುವರಿ ಪೋಲೀಸು ಕಮಿಶನರ್ ಇದ್ದು, ಎರಡನೆಯ ಹೆಚ್ಚುವರಿ ಪೋಲೀಸು ಕಮಿಶನರ್ ಆಗಿ ಪರಮೇಶ್ವರ ಅವರು ಸೇರ್ಪಡೆ ಆಗಿದ್ದಾರೆ.

ಕರಾವಳಿ ಜಿಲ್ಲೆಯಾದ್ಯಂತ “ರಾಪಟ” ಅದ್ಧೂರಿ ಬಿಡುಗಡೆ

ಮಂಗಳೂರು: ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಶುಕ್ರವಾರ ಮುಂಜಾನೆ ಕರಾಳಿಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಡಾ. ದೇವದಾಸ್ ಕಾಪಿಕಾಡ್ ಅವರು, “ತುಳು ಭಾಷೆಯಲ್ಲಿ ಬರುವ ಎಲ್ಲಾ ಸಿನಿಮಾಗಳಿಗೂ ತುಳುವರು

Mangaluru ; ಪಂಚಾಯತ್ ಮಟ್ಟದ ಪುಸ್ತಕ ದಾಖಲೆ ಇಡುವವರಿಂದ ಪ್ರತಿಭಟನೆ

ಮಂಗಳೂರಿನ ಗಡಿಯಾರ ಗೋಪುರದ ಎದುರು ಪಂಚಾಯತ್ ಮಟ್ಟದ ಬುಕ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯರು ಸಿಪಿಎಂ ಸಂಘಟನೆಯ ಮೂಲಕ ಪ್ರತಿಭಟನೆ ಮಾಡಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟದ ಅಗತ್ಯದ ಬಗೆಗೆ ಮಾತನಾಡಿದರು. ಬುಕ್ ಕೀಪಿಂಗ್ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಮೂರರಿಂದ ಐದು ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ. ಇದು ಕೆಲವರ ಸಾರಿಗೆ ವೆಚ್ಚ ಕೂಡ ಆಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡತಕ್ಕದ್ದು ಎಂದು ಪ್ರತಿಭಟನಾಕಾರರು ಒತ್ತಾಯ

ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು. ನಗರದ ಹೋಲಿ ರೋಜರಿ ಕೆಥೆಡ್ರಲ್‍ನಲ್ಲಿ `ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ

ಕೊಟ್ಟಾರಚೌಕಿ ಸರ್ಕಲ್‍ಗೆ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್‍ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್

ಮಂಗಳೂರು: ಕಾವೂರಿನಲ್ಲಿ ಮಾರುಕಟ್ಟೆ ಸಂಕೀರ್ಣ ಖಾಲಿ: ಅಂಗಡಿ ಪಡೆದ ವ್ಯಾಪಾರಸ್ಥರು ವಾರದೊಳಗೆ ಸ್ಥಳಾಂತರಗೊಳ್ಳಬೇಕು: ಮೇಯರ್ ಸುಧೀರ್

ಕಾವೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಿಂದ ನಿರ್ಮಿಸಲಾದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾರುಕಟ್ಟೆಯ ಸಂಕೀರ್ಣ ಖಾಲಿ ಬಿದ್ದಿದ್ದು, ಅಂಗಡಿ ಪಡೆದ ವ್ಯಾಪಾರಸ್ಥರು ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ. ಕಾವೂರಿನಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ ಸಂಕೀರ್ಣವನ್ನು ಅವರು ವೀಕ್ಷಿಸಿ, ಮಾಧ್ಯಮದೊಂದಿಗೆ ಮಾತನಾಡಿದರು. ಉತ್ತಮವಾದಂತ ಮೀನು ಮಾರುಕಟ್ಟೆ

ಮಂಗಳೂರು: ಡಿಕೆಶಿ ಕೇಸ್ ವಾಪಸ್ ಹಿಂಪಡೆದಿರುವುದು ಖಂಡನೀಯ: ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೇಳಿಕೊಳ್ಳಲು ಆಶ್ಚರ್ಯ ಎನಿಸುವಂತಹ ಬಹಳ ನೋವಿನ ಸಂಗತಿ ನಡೆದಿದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಬಿಐ ತನಿಖೆ ಮಾಡುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟ ಸಿಬಿಐ ತನಿಖೆಗೆ ಕೊಟ್ಟ ಅನುಮತಿ ವಾಪಾಸು ತೆಗೆದುಕೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಿಜೆಪಿ ಮಂಗಳೂರು ಮಂಡಲ ಕಚೇರಿಯಲ್ಲಿ

ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ

19ನೇ ರಾಷ್ಟ್ರೀಯ ಹಿರಿಯರ ಈಜುಸ್ಪರ್ಧೆಯ ಆರಂಭದೊಂದಿಗೆ ನಗರದ ಎಮ್ಮೆಕೆರೆ ಪ್ರದೇಶದಲ್ಲಿ ಒಲಂಪಿಕ್ಸ್ ಮಾನದಂಡದ ಪ್ರಕಾರ ನಿರ್ಮಿಸಿರುವ ಅತ್ಯಾಧುನಿಕ ಈಜುಕೊಳ ಉದ್ಘಾಟನೆಗೊಂಡಿದೆ. ಈಜುಕೊಳ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಮಾತನಾಡಿ, ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆದಾಯ ಸೃಷ್ಟಿಸುವ ಯೋಜನೆಗಿಂತ ಹೆಚ್ಚಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಮುಂದೆಯಾದರೂ ಮಹಾನಗರ ಪಾಲಿಕೆಯ ಯಾವುದಾದರೂ ಯೋಜನೆಯಡಿ ಆದಾಯ ವೃದ್ಧಿಸುವ

ಕರಾವಳಿಯಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗದ ಕೆಲವು ಕಡೆಗಳಲ್ಲಿ ಅಲಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವಣವಿದ್ದು, ಮಾಧ್ಯಹ್ನಾದ ಸಮಯದಲ್ಲಿ ಮಳೆ ಸುರಿದಿದೆ. ಕರಾವಳಿಯಲ್ಲಿ ಹಿಂಗಾರು ಕ್ಷೀಣಿಸುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಅಲಲ್ಲಿ ಮೋಡ ಮತ್ತು ಸಾಧಾರಣ ಮಳೆಯ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಯಾವುದೇ ಅಲರ್ಟ್ ಘೋಷಿಸಿಲ್ಲ.