Home Posts tagged #mangaluru (Page 6)

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಶ್ರೀ ಸುಂದರ ಗೌಡ ಅವರಿಗೆ ಎವಿಜಿ ಶಾಲೆಯಲ್ಲಿ ಅಭಿನಂದನೆ

ಪುತ್ತೂರು: ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಶ್ರೀ ಸುಂದರ ಗೌಡ ಅವರು ಪಧೋನ್ನತಿ ಹೊಂದಿ ರಾಮನಗರ ಜಿಲ್ಲೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ತೆರಳುತ್ತಿರುವ ಈ ಸಂದರ್ಭದಲ್ಲಿ ಪುತ್ತೂರು ಬನ್ನೂರು ಕೃಷ್ಣನಗರದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಭಿನಂದಿಸಿ

ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿದೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ

ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ’ಕೆಸರ್ದ ಕಂಡೊಡೊಂಜಿ ದಿನ’ ಆಟೋಟ ಸ್ಪರ್ಧೆ

ಪ್ರಕೃತಿಯೇ ವಿಶ್ವವಿದ್ಯಾನಿಲಯ. ಮರ, ನದಿ ಕೂಡಾ ಪರೋಪಕಾರ ಮನೋಭಾವವನ್ನು ಬೆಳೆಸುತ್ತದೆ. ಪ್ರಕೃತಿ ನಾಶವಾಗಬಾರದು. ಅದರ ಜತೆಗೆ ಬದುಕು ಸಾಗಬೇಕು. ಪ್ರಕೃತಿ ಸಮತೋಲನ ಕಾಪಾಡುತ್ತದೆ. ಪ್ರಕೃತಿಯನ್ನು ಸ್ವಚ್ಛವಾಗಿಡುವುದು ಕರ್ತವ್ಯ ಮತ್ತು ಪರಿಣಾಮವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆಧ್ಯಾತ್ಮದ ಚಿಂತನೆ ಮೂಲಕ ಜೀವನ ಪಾವನವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಅವರು ಒಡಿಯೂರು ಶ್ರೀಗಳ

ಡಿಸೇಲ್ ಬೆಲೆ ಏರಿಕೆಯಿಂದ ಲಾರಿ ಉದ್ಯಮಕ್ಕೆ ಸಂಕಷ್ಟ

ಮಂಗಳೂರು : ರಾಜ್ಯ ಸರಕಾರ ಡಿಸೇಲ್ ಬೆಲೆ ಏರಿಸಿರುವುದರಿಂದ ಲಾರಿ ಉದ್ಯಮಕ್ಕೆ ಅತ್ಯಂತ ಹೆಚ್ಚು ನಷ್ಟವಾಗಲಿದ್ದು, ಮಾಲಕರು ಸಂಕಷ್ಟಕ್ಕೆ ಒಳಗಾಗುತ್ತಾರೆ’ ಎಂದು ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಹೇಳಿದ್ದಾರೆ. ಡಿಸೇಲ್ ಬೆಲೆ ಏರಿಕೆಯಾದರೂ ಲಾರಿ ಬಾಡಿಗೆ ದರ ಏರಿಸಲಾಗುತ್ತಿಲ್ಲ. ಸರಕಾರ ಸ್ವಾಮ್ಯದ ಬಂದರು, ಕಚ್ಚಾ ತೈಲ, ಆಹಾರ ಸಾಮಾಗ್ರಿ ಸರಕು ನಿರ್ವಹಣೆಗೆ ಬಳಸಲಾಗುವ ಲಾರಿಗಳ ಬಾಡಿಗೆಯನ್ನು ಸರಕಾರ ನಿಯಂತ್ರಿಸುತ್ತಿಲ್ಲ. ಲಾರಿಗಳಿಗೆ ಟನ್ /

ಬಜ್ಪೆಯ ಸಮ್ಯತಾಳ ಕೈಚಳಕಕ್ಕೆ ಬೇಷ್ ಎಂದ ಸಂಸದ ಕೋಟ

ಬ್ರಹ್ಮಾವರ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 96.5 ಅಂಕ ಪಡೆದು ಶಿಕ್ಷಣದಲ್ಲಿ ಟೋಪರ್ ಆಗಿ ಚಿತ್ರ ರಚನೆ ಕಲೆಯಲ್ಲಿ ಸೂಪರ್ ಎನಿಸಿಕೊಂಡ ಬಜ್ಪೆಯ ಸಮ್ಯತ ಆಚಾರ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಚಿತ್ರವನ್ನು ರಚಿಸಿ ಕಾರ್ಯಕ್ರಮವೊಂದರಲ್ಲಿ ನೀಡಿ ಬೇಷ್ ಎನಿಸಿಕೊಂಡಿದ್ದಾಳೆ. ಕೋಟೇಶ್ವರದ ಕಾರ್ಯಕ್ರಮವೊಂದರಲ್ಲಿ ಪ್ರತಿಭಾಪುರಸ್ಕಾರಕ್ಕೆ ಬಂದ ಸಮ್ಯತ ಆಚಾರ್ಯ ಉದ್ಘಾಟಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ

ರಸ್ತೆ ವಿಭಜಕವೇರಿ ಮಗುಚಿ ಬಿದ್ದ ಗೂಡ್ಸ್ ಟೆಂಪೊ

ಎರ್ಮಾಳು-ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ ೬೬ರ ಕಿರು ಸೇತುವೆ ಬಳಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ. ಸೋಮವಾರ ರಾತ್ರಿ ಗೂಡ್ಸ್ ಟೆಂಪೊವೊಂದು ಹೆದ್ದಾರಿಯಲ್ಲಿ ಶೇಕರಣೆಗೊಂಡಿರುವ ನೀರಿನ ಮೇಲಿಂದ ಚಲಿಸಿ ರಸ್ತೆ ವಿಭಜಕವೇರಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಕಾರೊಂದು ಅದೇ ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಾಣಾಪಾಯದಿಂದ ಪಾರದ ಘಟನೆ ಹಚ್ಚ ಹಸುರಾಗಿರುವಾಗಲೇ ಮತ್ತೆ ಅಪಘಾತ ನಡೆದಿದೆ. ಈ ಅಪಘಾತಕ್ಕೆ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಸನ್ಮಾನ

ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ ಐವನ್ ಡಿಸೋಜ ಅವರಿಗೆ ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ. ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ

ಮಂಗಳೂರು: “ಜುಲೈ ೯ರಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುಎಸ್‌ಎ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾದ ೨೦ ರಾಜ್ಯಗಳ ಮುಖ್ಯ ನಗರಗಳಲ್ಲಿ ನಿಶ್ಚಯಿಸಿರುತ್ತಾರೆ” ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಬಿ.ಸಿ. ರೋಡ್‌ನಲ್ಲಿ ರಕ್ತನಿಧಿ ಸೆಂಟರ್ ಲೋಕಾರ್ಪಣೆ

ಬಂಟ್ವಾಳ: ರೋಟರಿಕ್ಲಬ್ ಬಂಟ್ವಾಳ ಬಿ.ಸಿ.ರೋಡಿಗೆ ಸಮೀಪದ ಗೂಡಿನಬಳಿಯಲ್ಲಿರುವ ಕ್ಲಬ್‌ನ ಕಟ್ಟಡದಲ್ಲಿ ಸುಮಾರು ೮೫ ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ರಕ್ತನಿಧಿ ಸೆಂಟರ್ ಲೋಕಾರ್ಪಣೆ ಗೊಂಡಿತು.ಬಂಟ್ವಾಳ ತಾಲೂಕಿನ ಬಹು ಕಾಲದ ಬೇಡಿಕೆಯೊಂದು ಈಡೇರಿದೆ. ರೋಟರಿ ಜಿಲ್ಲಾ ೩೧೮೧ ರ ಗವರ್ನರ್ ಎಚ್. ಆರ್.ಕೇಶವ ಅವರು ಉದ್ಘಾಟಿಸಿ, ಬಂಟ್ವಾಳ ರೋಟರಿ ಕ್ಲಬ್‌ನ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಈ ಕ್ಲಬ್‌ನ ಸದಸ್ಯರ ಸಾಮರ್ಥ ಹಾಗೂ ಬದ್ದತೆ ಅಭಿನಂದನೀಯ ಎಂದರು.

ಸೂಜಿಕಲ್‌ಗುಡ್ಡೆ ಬಳಿ ಅಪಾಯದಲ್ಲಿರುವ ಮನೆಗಳು

ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.ಅವರು ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ