Home Posts tagged #moodabidre (Page 18)

ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ, ಹತ್ಯೆ ಖಂಡಿಸಿ : ಮೂಡಬಿದ್ರೆಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಮೂಡಬಿದ್ರೆಯಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು,ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಕ್ತಾಯಗೊಳಿಸಿ ಆರೋಪಿಗಳಿಗೆ ಮರಣದಂಡನೆ

ಆನೆಯ ಸೀನಿಗೆ ಹೆದರಿ ಓಡಿದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತ್ಯು

ಮೂಡುಬಿದಿರೆ : ಆನೆ ಸೀನಿದ ಶಬ್ದಕ್ಕೆ ಹೆದರಿ ಓಡಿ ಹೋಗುವಾಗ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಡ್ಯಡ್ಕ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದಿದೆ. ಕೊಡ್ಯಡ್ಕ ದೇವಸ್ಥಾನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಕಳ ಇಂಡಸ್ಟ್ರಿಯಲ್ ಬಳಿಯ ನಿವಾಸಿ ವಿಶ್ವನಾಥ ದೇವಾಡಿಗ (58ವ) ಮೃತಪಟ್ಟ ವ್ಯಕ್ತಿ. ಇವರು ದೇವಸ್ಥಾನದ ಆನೆಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಆನೆ ಸೀನಿದ್ದು ಈ ಸಂದರ್ಭ ಹೆದರಿ ಓಡಿ ಹೋಗುವಾಗ ಬಿದ್ದು ತಲೆಗೆ ಏಟು ಬಿದ್ದು ಗಂಭೀರ

ಉದ್ಯಮಿ ಕಜಂಗೆ ಸುದರ್ಶನ್ ಜೈನ್ ನಿಧನ

ಮೂಡುಬಿದರೆ ಎಸ್‌ಜೆಆರ್ ಟಿಂಬರ್ಸ್ ಮಾಲಕ, ರಿಯಲ್ ಎಸ್ಟೇಟ್ ಉದ್ಯಮಿ ಕಜಂಗೆ ಸುದರ್ಶನ್ ಜೈನ್(56) ಅವರು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದರೆ ರೋಟರಿ ಮಾಜಿ ಕಾರ್ಯದರ್ಶಿ, ಜೈನ್ ಮಿಲನ್ ಉಪಾಧ್ಯಕ್ಷರಾಗಿ, ಧಾರ್ಮಿಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೂಡುಬಿದರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದರ್ಶನ್ ಅವರಿಗೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಸಕ ಉಮಾನಾಥ

ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ : ಮೂಡುಬಿದರೆಯಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ

ಮೂಡುಬಿದಿರೆ: ತಾಲೂಕಿನ ವಿವಿಧ ಕಡೆ ಕೋವಿಡ್ ಲಸಿಕೆ ಕೊಡುವಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಶಾಸಕರು, ಬಿಜೆಪಿ ಮುಖಂಡರು ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರಿ ಆರೋಗ್ಯ ಕೇಂದ್ರಗಳು, ಪಂಚಾಯಿತಿ ಕಾರ್ಯಾಲಯ ಅಥವಾ ಶಾಲೆಗಳಲ್ಲಿ ಕೋವಿಡ್

ಮೂಡುಬಿದಿರೆಯ ಪುರಸಭೆ- ಗ್ರಾ.ಪಂ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಪುರಸಭೆ ಮತ್ತು ಗ್ರಾ.ಪಂಚಾಯತ್ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ  ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಆಧಾರ ಕಾರ್ಯಕರ್ತರು. ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಮತ್ತು ವಿಚಾರವಂತರಾಗಿ ಸಾಗಬೇಕೆನ್ನುವ ದೃಷ್ಠಿಕೋನದಿಂದ ಪ್ರಶಿಕ್ಷಣ ವರ್ಗ ರೂಪುಗೊಂಡಿದೆ. ಹಲವು ವರ್ಷಗಳ ನಂತರ ಜನರು

ಕಾಫಿ ಪುಡಿಯಿಂದ ಅರಳಿದ ಕಟೀಲಿನ ಭ್ರಮರಾಂಭೆ

ಪೈಂಟಿಂಗ್, ಕ್ಯಾನ್ ವಾಸ್, ಅಶ್ವತ್ಥದ ಎಲೆ ಹಾಗೂ ಮೊಳೆಗಳನ್ನು ಬಳಸಿ ಚಿತ್ರಗಳನ್ನು ಬಿಡಿಸಿ ಹಲವಾರು ಕಲಾವಿದರು ಈಗ ಗಮನ ಸೆಳೆಯುತ್ತಿರುವ ಮಧ್ಯೆಯೇ ಇದೀಗ ಕಾಲೇಜು ವಿದ್ಯಾರ್ಥಿ ಶ್ರವಣ್ ಪೂಜಾರಿ ಮಾರ್ನಾಡು ಕಾಫಿ ಹುಡಿಯನ್ನು ಬಳಸಿ ಹಲವು ಗಣ್ಯರ ಚಿತ್ರ ಬಿಡಿಸಿದ್ದಲ್ಲದೆ, ನೆನೆದವರ ಮನದಲ್ಲಿ ನೆಲೆಯಾಗಿ, ನಂಬಿರುವ ಭಕ್ತರ ರಕ್ಷೆಯಾಗಿ, ಸಹಸ್ರಾರು ಭಕ್ತರ ಪೂಜೆ ಹಾಗೂ ಹರಕೆಗಳನ್ನು ಪಡೆದು, ಪರಿಮಳ ಭರಿತ ಮಲ್ಲಿಗೆ ಹೂವಿನಲ್ಲಿ ಸಿಂಗಾರಗೊಂಡು, ತುಳುನಾಡ ತಮೆರಿ ಎಂದೆ

ಕೌಟುಂಬಿಕ ಕಲಹ : ದರೆಗುಡ್ಡೆಯಲ್ಲಿ ಪತ್ನಿಯನ್ನು ಕೊಂದ ಪತಿ

ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿ ಪತ್ನಿಯನ್ನು ಕೊಂದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುನೀತಾ(30 ) ಸಾವನ್ನಪ್ಪಿದಾಕೆ. ಪತಿ ಮೂಡುಬಿದಿರೆಯ ದಿನ್ ರಾಜ್ ನನ್ನು ಇಂದು ಮುಂಜಾನೆ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಗಂಡ- ಹೆಂಡತಿಯ ಮಧ್ಯೆ ಜಗಳ ನಡೆದಿದ್ದು ಈ ಸಂದರ್ಭ ದಿನ್ ರಾಜ್ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಆಗ ರಕ್ತ ಸೋರುತ್ತಿರುವುದನ್ನು ಕಂಡ ದಿನ್ ರಾಜ್ ಸುನೀತಾ ಅವರ ಸಹೋದರ

ಕಬಕ ಪ್ರಕರಣ: ಮೂಲ್ಕಿ-ಮೂಡುಬಿದಿರೆ ಬಿಜೆಪಿ ಖಂಡನೆ

ಮೂಡುಬಿದಿರೆ: ಪುತ್ತೂರಿನ ಕಬಕದಲ್ಲಿ ನಡೆದ ಪ್ರಕರಣವನ್ನು ಮೂಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಖಂಡಿಸಿದೆ. ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾವರ್ಕರ್ ಬಗ್ಗೆ ವಿವಾದ ಎಬ್ಬಿಸಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗ ಸಂಘಟನೆಗಳ ನಿಷೇಧಕ್ಕಾಗಿ ಮತ್ತು ಕಬಕ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಟಿಪ್ಪು ಸುಲ್ತಾನ್ ನೈಜ್ಯ ಸ್ವಾತಂತ್ರ್ಯ

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಮೂಡುಬಿದಿರೆ : ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿ ಗಣೇಶ್ ಹನುಮಂತಪ್ಪ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಳ್ವಾಸ್ ಪ್ರೌಢಶಾಲೆಯಿಂದ 499 ಮಂದಿ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. 13 ಮಂದಿ ವಿದ್ಯಾರ್ಥಿಗಳು 620ಕ್ಕಿಂತ

ಮೂಡುಬಿದಿರೆ: ರಂಗಸ್ಥಳದಲ್ಲಿ ಕುಸಿದುಬಿದ್ದ ಕಲಾವಿದ

ಮೂಡುಬಿದಿರೆಯ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಬಳಿಕ ಚೇತರಿಸಿಕೊಂಡು ಬಳಿಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಅಮ್ಮುಂಜೆ ಅವರು ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು