Home Posts tagged #moodabidre (Page 19)

ನಿವೃತ್ತ ವೀರಯೋಧ ಲಾರೆನ್ಸ್ ಡಿಸೋಜ ನಿಧನ: ನಿವೃತ್ತ ಸೈನಿಕರ ಸಂಘದಿಂದ ಅಂತಿಮ ಗೌರವ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರಯೋಧ (ನಿವೃತ್ತ) ಲಾರೆನ್ಸ್ ಡಿಸೋಜ ಪಣಪಿಲ ಇವರು ನಿಧನರಾಗಿದ್ದು ನಿವೃತ್ತ ಸೈನಿಕರ ಸಂಘ ಮೂಡುಬಿದಿರೆ ಇವರಿಂದ ಅಂತಿಮ ಗೌರವ ಸಲ್ಲಿಸಲಾಯಿತು. ದೇಶದ ತ್ರಿವರ್ಣ ಧ್ವಜವನ್ನು ಮೃತದೇಹದ ಮೇಲೆ ಹೊದಿಸಿ ಸರ್ಕಾರಿ ಸಮಾನ ಗೌರವ ಅರ್ಪಿಸಲಾಯಿತು. ಮೃತ ಯೋಧ ಲಾರೆನ್ಸ್ ಡಿಸೋಜರವರು ಭಾರತೀಯ ಭೂಸೇನೆಯಲ್ಲಿ ಸುಮಾರು ೨೭ ವರ್ಷಗಳ ಕಾಲ

ಮೂಡುಬಿದಿರೆ ಪುರಸಭಾ ಅಧಿವೇಶನ : ಎಸ್‍ಎಫ್‍ಸಿ ನಿಧಿ ಕಾಮಗಾರಿ ಟೆಂಡರ್ ತಡೆ ಹಿಡಿಯಲು ಆಗ್ರಹ

 ಪುರಸಭೆಯ ಬೀದಿದೀಪ, ವಿದ್ಯುತ್ ದಾರಿದೀಪ ದುರಸ್ತಿ ಮತ್ತು ನಿರ್ವಹಣೆ ಮತ್ತು ಕೊಳವೆ ಬಾವಿಗಳಿಗೆ ಜೋಡಿಸಿದ ಎಲ್ಲಾ ರೀತಿಯ ಪಂಪುಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಜೋಡಿಸಿ ದುರಸ್ತಿಪಡಿಸುವ ಕಾಮಗಾರಿಯ ಟೆಂಡರ್ ಮತ್ತು ಪುರಸಭಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಎಸ್‌ಎಫ್‌ಸಿ 2019-20ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ನಡೆಸಲು ಟೆಂಡರ್‌ಗೆ ಅನುಮೋದನೆ ನೀಡುವಿಕೆಯಲ್ಲಿ ಗಂಭೀರ ಲೋಪದೋಷಗಳಾಗಿವೆ. ಹೀಗಾಗಿ ಈ ಟೆಂಡರ್‌ಗೆ ಅನುಮೋದನೆಯನ್ನು

ಕಂಬಳದ ದಾಖಲೆಯ ಓಟಗಾರನಿಗೆ ನಿಂದನೆ: ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಕಂಬಳಾಭಿಮಾನಿಗಳಿಂದ ಮನವಿ

ಮೂಡುಬಿದಿರೆ : ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ” ಕರ್ನಾಟಕ ಕ್ರೀಡಾರತ್ನ” ಪ್ರಶಸ್ತಿಯನ್ನು ಪಡೆದಿರುವ, ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಂಬಳ ಕೋಣಗಳ ಯಜಮಾನರು ಹಾಗೂ ಶ್ರೀನಿವಾಸ ಗೌಡ ಅವರ ಅಭಿಮಾನಿಗಳು ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಯ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಶಾಸಕ

ಸ್ಟ್ಯಾನ್ ಸ್ವಾಮಿಗೆ ನ್ಯಾಯ ಒದಗಿಸುವಂತೆ ವಿನೋದ್ ವಾಲ್ಟರ್ ಪಿಂಟೊ ಒತ್ತಾಯ

ಮೂಡುಬಿದಿರೆ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಜೈಲು ಸೇರಿ ಕಾನೂನು ಹೋರಾಟ ನಡೆಸುತ್ತಿರುವಾಗಲೇ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಧರ್ಮಗುರು, ಸಾಮಾಜಿಕ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರಿಗೆ ಇನ್ನಾದರು ಸರ್ಕಾರ ನ್ಯಾಯ ಒದಗಿಸಬೇಕೆಂದು ವಿನೋದ್ ವಾಲ್ಟರ್ ಪಿಂಟೊ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಸ್ಟ್ಯಾನ್ ಸ್ವಾಮಿ ಅವರ ಆರೋಪವನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಸಾದ್ಯವಾಗಿಲ್ಲ. ತೀವ್ರ

ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನ ಲೋಕಾರ್ಪಣೆ

ಮೂಡುಬಿದಿರೆ: ಆನೆಗಳ ಆಹಾರವಾಗುವ ಬಿದಿರಿನ ತಳಿಗಳನ್ನು ಕಾಡಿನಂಚಿನಲ್ಲಿ ನೆಟ್ಟರೆ ಆನೆಗಳು ನಾಡಿಗೆ ಬರುವ ಪ್ರಮೇಯ ತಪ್ಪುತ್ತದೆ. ಅಂತಹ ಬಿದಿರಿನ ತಳಿಗಳನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಒಂಟಿಕಟ್ಟೆಯ ಕಡಲ ಕೆರೆ ನಿಸರ್ಗಧಾಮದ ಸಾಲುಮರ ತಿಮ್ಮಕ್ಕ ಸಸ್ಯೋದ್ಯಾನವನ ಆವರಣದಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನವನ್ನು ಶುಕ್ರವಾರ ಸಾಯಂಕಾಲ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪರಿಸರವನ್ನು ನಾವು ಸಂರಕ್ಷಿಸಿದಲ್ಲಿ

ಮೂಡುಬಿದರೆಯಲ್ಲಿ ಎರಡು ತಿಂಗಳ ಬಳಿಕ ಬಸ್ ಸಂಚಾರ

ಎರಡು ತಿಂಗಳ ಲಾಕ್ ಡೌನ್ ಮುಗಿದು ಮೂಡುಬಿದಿರೆಯಲ್ಲಿ ಸೋಮವಾರದಂದು ಶೇ ೫೦ರಷ್ಟು ಖಾಸಗಿ ಬಸ್ಸುಗಳು ರಸ್ತೆಗಿಳಿದು ಓಡಾಟ ಆರಂಭಿಸಿದವು.ಖಾಸಗಿ ಬಸ್ಸುಗಳು ರಸ್ತೆಗಿಳಿದುದರಿಂದ ಜನರು ತಾವು ಹೋಗಬೇಕಾದ ಸ್ಥಳಗಳಿಗೆ ಬೆಳಗಿನಿಂದಲೇ ಬಸ್ಸುಗಳನ್ನು ಆಶ್ರಯಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ಬಸ್ಸು ತಂಗುದಾಣದ ಆವರಣದಲ್ಲಿ ಇತರ ವಾಹನಗಳು ಬಂದು ನಿಲ್ಲುತ್ತಿದ್ದವು. ಅದರಂತೆ ಸೋಮವಾರವು ಕೂಡಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಸ್ಸು ನಿಲ್ದಾಣದ

ಲಾಕ್ ಡೌನ್ ನಿಯಮ ಉಲ್ಲಂಘನೆ : 31 ವಾಹನಗಳ ಜಫ್ತಿ, 70 ಕೇಸು ದಾಖಲು

ಮೂಡುಬಿದಿರೆ : ಕಳೆದ ಮೂರು ದಿನಗಳಿಂದ ಬೆಳಿಗ್ಗೆ 6-10 ಗಂಟೆಯ ನಂತರ ಸುಮ್ಮನೆ ಕಾಲ ಕಳೆಯಲು ಮೂಡುಬಿದಿರೆ ಪೇಟೆಯಲ್ಲಿ ಅಡ್ಡಾದಿಡ್ಡಿ ಓಡಾಟ ಮಾಡಿ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದ 31 ವಾಹನಗಳನ್ನು ಮೂಡುಬಿದಿರೆ ಪೊಲೀಸರು ಜಫ್ತಿ ಮಾಡಿದ್ದು ಅಲ್ಲದೆ ಮಾಸ್ಕ್ ಧರಿಸದಿದ್ದ 70 ಜನರ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾರ್ಯಚರಣೆಯನ್ನು ಬಿಗಿಗೊಳಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಯ ಸಂದರ್ಭ ಬೆಳಿಗ್ಗೆ ಮೂಡುಬಿದಿರೆಯ ಪೇಟೆಯಲ್ಲಿ ಮತ್ತು