Home Posts tagged #padubidre (Page 2)

ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ

ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ.

ಪುರಸಭೆಯ ನಿರ್ಲಕ್ಷ್ಯ ಕೃಷಿ ಚಟುವಟಿಕೆಗಳಿಗೆ ಅಡ್ಡಿ: ಮಾಹಿತಿ ನೀಡಿದರೂ ಮೌನವಾದ ಅಧಿಕಾರಿಗಳು

ಕೃಷಿ ಚಟುವಟಿಕೆ ನಡೆಸಲು ಉತ್ತೇಜನ ನೀಡಬೇಕಾಗಿದ್ದ ಕಾಪು ಪುರಸಭೆಯಿಂದಲೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರ, ಅವರು ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ಕಾಪುವಿನ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಪು-ಮಲ್ಲಾರು ಮುಖ್ಯ ರಸ್ತೆ ಇಕ್ಕೆಲುಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಗಿಡಗಂಟಿಗಳನ್ನು, ಮಣ್ಣ ದಿಬ್ಬಗಳನ್ನು ತೆಗೆದ್ದರೂ ಅಲ್ಲಿಂದ ತೆರವು ಮಾಡದೆ ರಸ್ತೆ ಅಂಚಿನಲ್ಲೇ ಬಿಟ್ಟು ಹೋದ ಪರಿಣಾಮ,

ಪಡುಬಿದ್ರಿ ವಿಷ್ಣು ಮೂರ್ತಿ ದೇವಳದ ಹೊಳೆದಂಡೆ ಕುಸಿತ : ಅವೈಜ್ಞಾನಿಕ ಕಾಮಗಾರಿ 33ಲಕ್ಷ ರೂಪಾಯಿ ಕಾಮಗಾರಿ ನೀರುಪಾಲು

ಸಣ್ಣ ನೀರಾವರಿ ಇಲಾಖೆಯ 33ಲಕ್ಷ ರೂಪಾಯಿ ವೆಚ್ಚದ ಹೊಳೆದಂಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾದ ಫಲವಾಗಿ ಕುಸಿದಿದ್ದು, ಜನರ ತೆರಿಗೆಯ ಹಣ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ನೀರು ಪಾಲಾಗಿದೆ. ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯ ಪಾದೆಬೆಟ್ಟು ವಿಷ್ಣುಮೂರ್ತಿ ದೇವಳದ ಬಳಿಯಲ್ಲಿ ಹರಿಯುತ್ತಿರುವ ಕಾಮಿನಿ ಹೊಳೆಗೆ ದಂಡೆ ನಿರ್ಮಾಣ ನಡೆಸುವ ಜನ ಬೇಡಿಕೆ ಇಂದು ನಿನ್ನೆಯದಲ್ಲ. ಕಳೆದ ಸುಮಾರು ಆರು ತಿಂಗಳ ಹಿಂದೆ ಈ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಗ್ರಾಮದಲ್ಲಿ

ಪಡುಬಿದ್ರಿಯ ದೇವಳದ ಅಂಗಣಕ್ಕೆ ನುಗ್ಗಿದ ನೀರು

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ಹೋಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಪಡುಬಿದ್ರಿಯ ಕೆಳಗಿನ ಪೇಟೆ ರಸ್ತೆ ಕೆರೆಯ ರೂಪತಾಳಿದೆ. ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ಗ್ರಾಮ ದೇಗುಲದ ಅಂಗಣದ ಒಳಗೂ ಕೆಸರು ನೀರು ನುಗ್ಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ಬಂಟರ ಭವನದ ಬಳಿ ತೀರ ಸಪೂರವಾದ ಪೈಪ್ ಹಾಕಿದ ಪರಿಣಾಮ ಹಾಗೂ ಪಕ್ಕದ

ಹೆಜಮಾಡಿಯಲ್ಲಿ ಕ್ಯಾಂಟೀನ್‍ನ ಕೆಲಸಗಾರನಿಗೆ ಐವರ ತಂಡದಿಂದ ಥಳಿತ

ಬಿಲ್ ವಿಚಾರದಲ್ಲಿ ಹೆಜಮಾಡಿ ಟೋಲ್ ಬಳಿಯ ಹೈವೇ ಕ್ಯಾಂಟೀನ್‍ನಲ್ಲಿ ಕಾರ್ಮಿಕರೊರ್ವರಿಗೆ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಥಳಿಸಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಳೆದ ಮೂರು ವರ್ಷಗಳಿಂದ ಇದೇ ಕ್ಯಾಂಟೀನ್ ನಲ್ಲಿ ದುಡಿಯುತ್ತಿದ್ದ ಎರ್ಮಾಳು ನಿವಾಸಿ ಸಂತೋಷ್ ಕುಮಾರ್ ಎಂಬವರೇ ಹಲ್ಲೆಗೊಳಗಾದವರು. ತಡರಾತ್ರಿ ಐವರ ತಂಡವೊಂದು ಬಿಯಾರ್ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಬಂದು ಉಪಹಾರ ಸೇವಿಸಿದ ಬಳಿಕ ಬಿಲ್ ವಿಚಾರದಲ್ಲಿ ತಗಾದೆ ತೆಗೆದು

ಪಡುಬಿದ್ರಿ : “ಪಿಸು ಮಾತು” ಮ್ಯೂಸಿಕ್ ವಿಡಿಯೋ ಬಿಡುಗಡೆ ಕಾರ್ಯಕ್ರಮ

ಶುಭಾ ಶೆಟ್ಟಿ ಪ್ರೋಡಕ್ಷನ್ಸ್ ಬ್ಯಾನರ್‍ನಲ್ಲಿ ತಯಾರಾದ ಉಮೇಶ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ನಿರ್ಮಾಣದ “ಪಿಸುಮಾತು” ಕನ್ನಡ ಮ್ಯೂಸಿಕ್ ವಿಡಿಯೋದ ಬಿಡುಗಡೆ ಕಾರ್ಯಕ್ರಮವು ಪಡುಬಿದ್ರಿಯ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನಡೆಯಿತು. ಈ ವಿನೂತನ ಕಥಾ ಹಂದರವನ್ನು ಹೊಂದಿರುವ ಮ್ಯೂಸಿಕ್ ವಿಡಿಯೋವನ್ನು ಕಾಪುವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಭವಾನಿ ಶಂಕರ್ ಹೆಗ್ಡೆ, ಸಂಜಯ್ ಕುಮಾರ್ ಶೆಟ್ಟಿ

ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿ

ಅದೆಷ್ಟೋ ವರ್ಷಗಳಿಂದ ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿಯ ಈ ಜಟಿಲ ಸಮಸ್ಯೆಗೆ ಮುಕ್ತಿಯಾರಿಂದ ಯಾವಾಗ ಎಂಬ ಪ್ರಶ್ನೆಗೆ ಎಲ್ಲೂ ಉತ್ತರವೇ ಸಿಗುತ್ತಿಲ್ಲ, ಪರಿಣಾಮ ಪಡುಬಿದ್ರಿ ಗ್ರಾ.ಪಂ. ಕಛೇರಿಯ ಮುಂಭಾಗದಲ್ಲೇ ರಾಶಿ ರಾಶಿ ದುರ್ನಾತ ಪ್ಲಾಸ್ಟಿಕ್ ತ್ಯಾಜ್ಯರಾಶಿ. ಬೃಹತ್ ಕಂಪನಿಗಳಿಗೆ ಸಾಹಸ್ರಾರು ಎಕ್ರೆ ಭೂಮಿ ನೀಡುವಾಗ, ಯಾವ ಅಧಿಕಾರಿ ಸಹಿತ ಯಾವೊಬ್ಬ ಜನಪ್ರತಿನಿಧಿಗೂ ಗ್ರಾಮದ ಉಪಯೋಗಕ್ಕೆ ಒಂದಿಷ್ಟು ಭೂಮಿಯನ್ನು ಉಳಿಸ ಬೇಕೆಂಬ ಅಲೋಚನೆಯೇ ಬಂದಿಲ್ಲ,

ಕಾಪುವಿನಲ್ಲಿ ಎಲ್‍ಇಡಿ ಸ್ಕ್ರೀನ್‍ನಲ್ಲಿ ಪ್ರಮಾಣ ವಚನದ ನೇರಪ್ರಸಾರ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕಾರ ಮಾಡಿರುವ ದೃಶ್ಯವನ್ನು ಕಾಪು ಕಾಂಗ್ರೆಸ್ ಎಲ್‍ಇಡಿ ಸ್ಕ್ರೀನ್ ಮೂಲಕ ಕಾಪು ಪೇಟೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಟ್ಟು ಸಂಭ್ರಮಾಚರಣೆ ನಡೆಸಿದ್ದಾರೆ.ಸಿದ್ಧರಾಮಯ್ಯ ಹಾಗೂ ಅವರ ತಂಡ ಪ್ರಮಾಣವಚನ ಸ್ವೀಕರಿಸುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸುಡುಮದ್ದು ಸಿಡಿಸಿ…ಸಾರ್ವಜನಿಕರಿಗೆ ಸಿಹಿ ಹಂಚಿ ಸಿದ್ದರಾಮಯ್ಯ ಹಾಗೂ ವಿನಯ ಕುಮಾರ್ ಸೊರಕೆ ಪರ ಘೋಷಣೆಯನ್ನು ಕೂಗಿ

ಪಡುಬಿದ್ರಿ : ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಅನಾಹುತ

ಬೀಸಿದ ಬಾರೀ ಗಾಳಿಗೆ ಪಡುಬಿದ್ರಿ ಬೇಂಗ್ರೆಯಲ್ಲಿ ಮರವೊಂದು ವಿದ್ಯುತ್ ಕಂಬವೊಂದಕ್ಕೆ ಬಿದ್ದ ಪರಿಣಾಮ ಸುಮಾರು ಹತ್ತು ವಿದ್ಯುತ್ ಕಂಬಗಳು ಸಹಿತ ಒಂದು ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಬೇಂಗ್ರೆಯ ಪ್ರಮುಖ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಆ ವೇಳೆಯಲ್ಲಿ ಯಾವುದೇ ವಾಹನಗಳಾಗಲೀ ಸಾರ್ವಜನಿಕ ಸಂಚಾರವಾಗಲಿ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ, ವಿಷಯ ತಿಳಿದ ತಕ್ಷಣ

ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪಡುಬಿದ್ರೆಯ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಪಡುಬಿದ್ರೆಯ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ವೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.ಬಳಿಕ ಅವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ರು. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ರು. ಈ ವೇಳೆ ಕಾರ್ಯಕರ್ತರು ಸುರೇಶ್ ಶೆಟ್ಟಿ ಜೊತೆಗಿದ್ದರು. ಇದಕ್ಕೂ ಅವರು ಮೊದಲು ಎರ್ಮಾಳ್ ಪರಿಸರ