Home Posts tagged #padubidri (Page 6)

ಪಡುಬಿದ್ರಿಯ ಕಾಡಿಪಟ್ಣ ಪ್ರದೇಶದಲ್ಲಿ ತೀವೃಗೊಂಡ ಕಡಲ್ಕೊರೆತ

ಬೀಸಿದ ಭಾರೀ ಗಾಳಿ ಮಳೆಗೆ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು 50 ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದ್ದು, ಸೊತ್ತು ಇನ್ನಷ್ಟು ಕಡಲು ಪಾಲಾಗುವ ಸಾಧ್ಯತೆ ಇದೆ. ಕಡಲಿ ತಡಿಗೆ ಅಪ್ಪಳಿಸುತ್ತಿರುವ ಅಬ್ಬರದ ತೆರೆಗಳಿಗೆ ಈಗಾಗಲೇ 4 ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ಬೃಹತ್ ವಿದ್ಯುತ್

ಉಡುಪಿ : ವಿದ್ಯಾರ್ಥಿನಿ ನಿಖಿತ ಸಾವು ಪ್ರಕರಣ : ಆಸ್ಪತ್ರೆಯ ಮುಂಭಾಗದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲಿನ ನಿಖಿತ ಎಂಬ ವಿದ್ಯಾರ್ಥಿನಿಯ ಸಾವಿಗೆ ಉಡುಪಿಯ ಸಿಟಿ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಿಖಿತ ವಿಪರೀತ ವಾಂತಿಯಿಂದ ಬಳಲಿ ಅಸ್ವಸ್ಥಗೊಂಡು ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ನಿಖಿತ ಮೃತ ಪಟ್ಟಿದ್ದಾರೆ. ನಿಖಿತ ಸಾವು ಪ್ರಕರಣ ವಿಚಾರವಾಗಿ ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ

ಪಡುಬಿದ್ರಿ: ಉಪಯೋಗವಿಲ್ಲದ ವಿದ್ಯುತ್ ಕಂಬ ತೆರವಿಗೆ ಆಗ್ರಹ

ಕಳೆದ ಎರಡು ವರ್ಷಗಳಿಂದ ಕಲ್ಲಟ್ಟೆ ಬ್ರಹ್ಮಸ್ಥಾನ ರಸ್ತೆಯ ತೀರ ಅಂಚಿನಲ್ಲಿರುವ ಉಪಯೋಗವಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಹಿಂದೆ ಪಕ್ಕದ ದೂರವಾಣಿ ಕೇಂದ್ರಕ್ಕೆ ಸಂಪರ್ಕವಿದ್ದು ಇದೀಗ ಅವರು ಬೇರೆಡೆಯಿಂದ ಅವರು ವಿದ್ಯುತ್ ಸಂಪರ್ಕ ಪಡೆದ ಕಾರಣ ಈ ಕಂಬಗಳು ಹಾಗೆಯೇ ಇದೆ. ಸಂಚಾರಕ್ಕೆ ತೊಡಕುಂಟು ಮಾಡುತ್ತಾ ರಸ್ತೆಗೆ ಅಂಟಿಕೊಂಡು ನಿಂತುಕೊಂಡಿದೆ. ಗ್ರಾಹಕರ ಸಮಸ್ಯೆಗಳಿಗೆ

ಎರ್ಮಾಳ್ : ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆ ವಿಭಾಜಕಕ್ಕೆ ಢಿಕ್ಕಿ

ಕಾಂಜರಕಟ್ಟೆಯಿಂದ ಜಲ್ಲಿಕಲ್ಲು ಹೇರಿಕೊಂಡು ಉಡುಪಿ ಕಡೆಗೆ ಹೋಗುತ್ತಿದ್ದ ಟಿಪ್ಪರೊಂದು ಬಡ ಎರ್ಮಾಳು ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ತಡೆಬೇಲಿಗಳನ್ನು ತುಂಡರಿಸಿಕೊಂಡು ಸಾಗಿ ಮಧ್ಯದಲ್ಲೇ ಸಿಲುಕಿಕೊಂಡಿದೆ. ಯಾವುದೋ ವಾಹನವೊಂದು ಅಡ್ಡ ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಟಿಪ್ಪರ್ ಚಾಲಕ, ಅದೃಷ್ಟವಶಾತ್ ಯಾವುದೇ ವಾಹನಗಳಾಗಲೀ ಪಾದಚಾರಿಗಳಾಗಲೀ ಆ ಭಾಗದಲ್ಲಿ ಸಂಚರಿಸದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಜಲ್ಲಿಕಲ್ಲುಗಳು ಹೆದ್ದಾರಿ ಎಲ್ಲೆಡೆ

ಪಡುಬಿದ್ರಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಉಚಿತ ಪ್ರದರ್ಶನ

ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ಡಾ! ಬಿ ಅರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಓಂಕಾರ್ ಕಲಾ ಸಂಗಮದಲ್ಲಿ ನಡೆಯಿತು.ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ವಂದನಾ ರೈ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾರಾರ್ಪಣಿ ಮಾಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಲಿತ ಚಿಂತಕ, ಸಮಾಜಿಕ ಹೋರಾಟಗಾರ ಶೇಖರ್ ಹೆಜಮಾಡಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಮಾತನಾಡಿ ಅಂಬೇಡ್ಕರ್ ರವರ ಆದರ್ಶ ವನ್ನು

ಪಡುಬಿದ್ರಿಯಲ್ಲಿ 62 ಬಗೆ ವಿವಿಧ ತಳಿಯ ಮಾವು : ನಿರುದ್ಯೋಗ ನಿವಾರಣೆಗೆ ಯುವಕರು ಕಂಡುಕೊಂಡ ಮಾರ್ಗ

ನಿರುದ್ಯೋಗ ಎಂದಾಕ್ಷಣ ಯುವಕರು ವಾಲುವುದು ದುಶ್ಚಟಗಳಿಗೆ…ಈ ಅಪವಾದಗಳನ್ನು ಮೆಟ್ಟಿನಿಂತ ಪಡುಬಿದ್ರಿಯ ಯುವಕರ ತಂಡವೊಂದು ದಿನವೊಂದಕ್ಕೆ ಸಹಸ್ರಾರು ರೂಪಾಯಿ ಸಂಪಾದಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಕಷ್ಟ ಪಟ್ಟರೆ ನಿರುದ್ಯೋಗ ನಿವಾರಣೆ ನಮ್ಮಿಂದಲೇ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಮಾವು ಎಂದರೆ ಯಾರ ಬಾಯಲ್ಲಿ ನೀರೂರದೆ ಇರಲು ಸಾಧ್ಯಹೇಳಿ..? ಅದೂ ಕೂಡ ಬರೋಬ್ಬರಿ 62ಬಗೆಯ ಮಾವಿನ ಹಣ್ಣುಗಳನ್ನು ದೂರದ ಊರುಗಳಿಂದ ತಂದು ಪಡುಬಿದ್ರಿ ಯ ಬಾಡಿಗೆ ಕಟ್ಟಡದಲ್ಲಿ

ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್‍ನಿಂದ, ನಿಟ್ಟೂರು ಅನಾಥ ಧಾಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ

ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್ ತನ್ನ ಸದಸ್ಯರೊಡಗೂಡಿ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ನಿಟ್ಟೂರಿನ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖಾ ಆಶ್ರಯದ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಡೆಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ .ಉಡುಪಿಯ ಮಹಿಳಾ ನಿಲಯಕ್ಕೆ ಭೇಟಿ ನೀಡಿದ ಇನ್ನರ್ ವ್ಹೀಲ್ ಸದಸ್ಯರು, ಸರಳ ಕಾರ್ಯಕ್ರಮ ನಡೆಸಿ ಮಕ್ಕಳ

ರಸ್ತೆ ದಾಟಲು ನಿಂತಿದ್ದ ಬಾಲಕಿ ಮೇಲೆ ಹರಿದ ಖಾಸಗಿ ಬಸ್ – ಬಾಲಕಿ ಮೃತ್ಯು

ಬಹಳಷ್ಟು ಅಮಾಯಕರ ಬಲಿ ಪಡೆದ ರಾಷ್ಟ್ರೀಯ ಹೆದ್ದಾರಿ ಇದೀಗ ರಸ್ತೆ ದಾಟಲು ನಿಂತಿದ್ದ, ಬಾಲಕಿ ಮೇಲೆ ತಡೆರಹಿತ ಖಾಸಗಿ ಬಸ್ ಹರಿದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ದಂಢತೀರ್ಥ ಶಾಲಾ ಎಂಟನೇ ತರಗತಿ ಬಾಲಕಿ ವರ್ಷೀತಾ ಶೇರ್ವೇಗಾರ್(13) ಎಂಬಾಕೆ ಮೃತಪಟ್ಟ ಬಾಲಕಿ. ಗಂಭೀರ ಗಾಯಗೊಂಡ ಬಾಲಕಿಯನ್ನು ಉಡುಪಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಬಾಲಕಿ ಮೃತ ಪಟ್ಟಿದ್ದಾಳೆ. ರಾಷ್ಟ್ರೀಯ ಹೆದ್ದಾರಿ ಅಗೆದು ಹಾಕಿ ನಿರ್ಲಕ್ಷ್ಯದಿಂದ ಆಮೆಗತಿಯ ಕಾಮಗಾರಿ ನಡೆಸುತ್ತಿದ್ದರಿಂದ

ನಶಿಸಿ ಹೋಗುತ್ತಿರುವ ಕಂಗೀಲು ಧಾರ್ಮಿಕ ಆಚರಣೆ ಹೆಜಮಾಡಿಯಲ್ಲಿ ಇಂದಿಗೂ ಜೀವಂತ

ತೆರೆಮರೆಯ ಕಡೆ ವಾಲುತ್ತಿರುವ ಧಾರ್ಮಿಕ ಆಚರಣೆಯಲ್ಲಿ ಕಂಗೀಲು ಕೂಡಾ ಒಂದು..ಬಹುತೇಕ ಕಡೆ ಇಲ್ಲವಾಗಿರುವ ಕಂಗೀಲು ಹೆಜಮಾಡಿಯಲ್ಲಿ ಇಂದೂ ಜೀವಂತ ಎಂಬುದು ಸಂತೋಷ.. ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಮೂಲಕ ಹತ್ತು ಸಮಸ್ತರನ್ನು ಸೇರಿಸಿ ವರ್ಷಂಪ್ರತಿಯಂತೆ ಹೆಜಮಾಡಿ ಆಲಡೆ ಜಾತ್ರೆಯ ಮರುದಿನ ಮಾಯಿ ಹುಣ್ಣುಮೆ ದಿನದಂದ್ದು, ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಮಂದಿ ಸೇರಿ ಹಿರಿಯರು ನಡೆದು ಕೊಂಡು ಬಂದ ಧಾರ್ಮಿಕ ವಿಧಿವಿಧಾನಗಳಂತೆ ಹತ್ತು ಸಮಸ್ತರನ್ನು