ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ
ವಿದ್ಯಾರ್ಥಿ ನಿಲಯದಿಂದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಕಾಣೆಯಾದ ಬಗ್ಗೆ ನಿನ್ನೆ ವರದಿಯಾಗಿತ್ತು, ಇಂದು ಆತ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ನಿನ್ನೆ ಕಡಬದ ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಮ್ ಎಂಬ ಅಪ್ರಾಪ್ತ ಬಾಲಕ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು, ನಂತರ ಮಧ್ಯಾಹ್ನ 12.40 ಕ್ಕೆ ಕಾಲೇಜು
ಪುತ್ತೂರು : ಕಳೆದ 20 ವರ್ಷಗಳಿಂದ ಅತೀ ಕಡಿಮೆ ಸಂಬಳದಲ್ಲಿ ಕನಿಷ್ಟ ವೇತನವೂ ಸಿಗದೆ ಶಾಲಾ ಮಕ್ಕಳಿಗೆ ಪ್ರೀತಿಯಿಂದ ಅಡುಗೆ ತಯಾರಿಸಿ ಬಡಿಸುತ್ತಿರುವ ಬಿಸಿಯೂಟ ನೌಕರರ ಬಗ್ಗೆ ಸರಕಾರದ ನಿರ್ಲಕ್ಷ ಕೂಡ ಸರಕಾರದ ಮಹಿಳಾ ದೌರ್ಜನ್ಯ ಆಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡರಾದ ಬಿ.ಎಂ.ಭಟ್ ಹೇಳಿದರು. ಅವರು ಸೆ.20 ರಂದು ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಸಮಾವೇಶವನ್ನುದ್ದೇಶಿಸಿ ಮಾತಾಡಿ ಕೆಲವು ಅಸಂಘಟಿತ ಕಾರ್ಮಿಕರಿಗೆ ಕೊರೋನಾ ಪ್ಯಾಕೇಜು ನೀಡಿದ ಸರಕಾರ
ಪಕೋಡಾ ಮಾರಿಯೂ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬಹುದು ಎಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆ, ವ್ಯಂಗ್ಯ ಪ್ರದರ್ಶನಗಳು ಕಂಡು ಬಂದಿತ್ತು. ಅದೇ ರೀತಿ ಪ್ರಧಾನಿಯ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವುದನ್ನು ತೋರಿಸಿಕೊಟ್ಟ ಹಲವು ವಿಚಾರಗಳೂ ದೇಶದ ಜನರ ಗಮನಕ್ಕೂ ಬಂದಿತ್ತು. ಈ ನಡುವೆ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಭಿಯಾಗಿ ಬದುಕು ಸಾಗಿಸುತ್ತಿರುವ ಸಾವಿರಾರು ಯುವಪಡೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ
ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯೂರಿನ ಚೆನ್ನಪ್ಪ ಅಜಿಲಾಯ ಎಂಬವರ ಮೇಲೆ ಸ್ಥಳೀಯ ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಹೆಸರಿನಲ್ಲಿ ಅವರ ನಕಲಿ ಸಹಿ ಬಳಸಿ ಸುಳ್ಳು ದೂರು ನೀಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದ್ದಾರೆ. ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚೆನ್ನಪ್ಪ ಅಜಿಲಾಯ
ಪುತ್ತೂರು: ಶುಕ್ರವಾರ ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 76 ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದ್ದು, ನಗರಸಭೆ ವ್ಯಾಪ್ತಿಯೊಳಗೆ ಆರು ಕಡೆ ನಡೆಯಲಿದೆ. ಈ ಮೂಲಕ ನಗರಸಭಾ ವ್ಯಾಪ್ತಿಯನ್ನು ಲಸಿಕೆ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಪಡೆಯದ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆದು ಸಹಕರಿಸುವಂತೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ. ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ರಾಜ್ಯದಲ್ಲಿ ದೇವಸ್ಥಾನಗಳ ತೆರವುಗೊಳಿಸುವ ಸರಿಯಲ್ಲ ರಾಜ್ಯ ಸರಕಾರದಲ್ಲಿ ತಾಲೀಬಾನ್ ಪ್ರೇರಿತ ಅಧಿಕಾರಿಗಳ ಕೃತ್ಯ ನಡೆಯುತ್ತಿದೆ ಎಂದು ಭಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ತಕ್ಷಣವೇ ಅಧಿಕಾರಿಗಳನ್ನು ವಜಾಗೊಳಿಸಬೇಕು. ತೆರವುಗೊಳಿಸಲು ಉದ್ಧೇಶಿಸಿರುವ ದೇವಸ್ಥಾನಗಳ ಪಟ್ಟಿಯನ್ನು ಹಿಂಪಡೆಯಬೇಕು. ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಮತ್ತೆ ಮರು ನಿರ್ಮಿಸಬೇಕು. ಸೆಪ್ಟೆಂಬರ್ ೧೬ ರಂದು ದಕ್ಷಿಣಕನ್ನಡ, ಉಡುಪಿ
ಪುತ್ತೂರು:ಪುತ್ತೂರಿನಲ್ಲಿ ಅಪ್ರಾಪ್ತರನ್ನು ಭಿಕ್ಷಾಟನೆಗೆ ಕಳುಹಿಸುವ ಮೂಲಕ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆಂಬ ದೂರಿನ ಮೇರೆಗೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯ ಅಧಿಕಾರಿಗಳು ನೆಲ್ಲಿಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸಂಗೀತ ಎಂಬ ಮಹಿಳೆಯು ಇತ್ತೀಚೆಗೆ ಬಿಸಿ ರೋಡ್‌ನಲ್ಲಿ ಮಗುವೊಂದಕ್ಕೆ ಹಲ್ಲೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದು ಅಲ್ಲಿ ದಾಳಿ
ಪುತ್ತೂರು: ಆಟೋ ರಿಕ್ಷಾ ಮತ್ತು ಕಾರು ನಡುವೆ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಅಪಘಾತದಿಂದ ರಿಕ್ಷಾ ಚಾಲಕ ಸಹಿತ ಅದರಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.ಗಾಯಾಳು ರಿಕ್ಷಾ ಚಾಲಕ ಕಂಬಳಬೆಟ್ಟು ನಿವಾಸಿ ಪಕೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣೆಯ ಯಸ್. ಐ. ರಾಮ ನಾಯ್ಕ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಪುತ್ತೂರು ಕಮ್ಯುನಿಟಿ ಸೆಂಟರ್ ಹಮ್ಮಿಕೊಂಡಿದ್ದ ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವು ಇಂದು ಪುತ್ತೂರಿನಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯ ಆಡಳಿತ ನಿರ್ದೇಶಕ ಉಮರ್ ಯು.ಹೆಚ್. ಮಾತನಾಡಿ ಸಿಇಟಿ/ನೀಟ್ ಆನ್’ಲೈನ್ ಕೌನ್ಸಿಲಿಂಗ್ ವಿಧಾನ ಮತ್ತು ಹಂತಗಳು, ದಾಖಲೆಗಳ ಪರಿಶೀಲನೆ, ಲಭ್ಯವಿರುವ ವಿವಿಧ ವಿಭಾಗದ ಸೀಟುಗಳು ಹಾಗೂ ಕರಿಯರ್ ಆಯ್ಕೆಯ ಅಗತ್ಯತೆ


















