ಪುತ್ತೂರು: ಬೆಂಗಳೂರಿನ ಭಟ್ ಬಯೋಟೆಕ್ ಹಾಗೂ ತಾಲೂಕಿನ ಶಾಂತಿಗೋಡು ಗ್ರಾಮದ ನವಚೇತನ ರಿಟೈರ್ಮೆಂಟ್ ಟೌನ್ಶಿಪ್ ವತಿಯಿಂದ ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಐದು ಆಮ್ಲಜನಕ ಕಾನ್ಸಂಟ್ರೇಟರ್ ಹಾಗೂ ಎರಡು ಸಾವಿರ ವಿಟಿಎಂ ಕಿಟ್ಗಳನ್ನು ಕೊಡುಗೆಯಾಗಿ ನೀಡಲಾಯಿತು.ಸರಳ ಕಾರ್ಯಕ್ರಮದಲ್ಲಿ ಭಟ್ ಬಯೋಟೆಕ್ ಸಂಸ್ಥೆಯ ಡಾ.ಶ್ಯಾಮ್ ಭಟ್ ಶಾಸಕ ಸಂಜೀವ ಮಠಂದೂರು ಅವರಿಗೆ
ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿರುವ ಘಟನೆ ಜು.೧ರಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಇಟ್ಟು ಹಾಗೂ ಪ್ರತಿಮೆಯ ತಲೆಗೆ ಟೀ ಶರ್ಟ್ನ್ನು ಇಟ್ಟು ಗಾಂಧೀಜಿಯನ್ನು ಅವಮಾನಗೊಳಿಸಿದ್ದಾರೆ. ಪುತ್ತೂರಿನ ಗಾಂಧಿ ಕಟ್ಟೆ ಸಮಿತಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ದ.ಕ. ಸಂಸದ ನಳಿನ್ ಕುಮಾರ್ ಕಟಿಲ್ ರವರ ಸಹೋದರ, ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನವಿನ್ ಕುಮಾರ್(57 ) ಜೂ.28 ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ಇವರು ಕೃಷಿಕರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು.ಮೃತರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್ ಕುಮಾರ್ ಕಟೀಲ್, ಸಹೋದರಿ ನಂದಿನಿರವರನ್ನು ಅಗಲಿದ್ದಾರೆ.
ಪುತ್ತೂರು: ನಾಡಪ್ರಭು ಕೆಂಪೇಗೌಡರ ಹೆಸರಿನ ಜೊತೆಗೆ ಅವರ ಸಾಧನೆಗೂ ಬಹಳ ಮಹತ್ವವಿದ್ದು, ಅವರ ದೂರದೃಷ್ಟಿ, ಜನಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿದ ಕೆಂಪೇ ಗೌಡರು ಕರ್ನಾಟಕವನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದ್ದಾರೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಹೇಳಿದರು.ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ
ಪುತ್ತೂರು: ಕುಡಿಯುವ ನೀರು ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ದಿನದ ೨೪ ಗಂಟೆಗಳ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಭಿಗಳಾಲು ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ ನಡೆಯಲಿರುವ ನೂತನ ಕಚೇರಿ ಕಟ್ಟಡ ಮತ್ತು ಮಳೆ ನೀರು ಕೊಯ್ಲು ಅಳವಡಿಕೆಯ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ
ಪುತ್ತೂರು: ೨ ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಅನಾರೋಗ್ಯದಿಂದಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೃಷ್ಣನಗರದಲ್ಲಿ ನಡೆದಿದೆ. ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಬ್ಬಂದಿಯಾಗಿರುವ ದಿಲೀಪ್ ಅವರ ಪತ್ನಿ ಅಕ್ಷತಾ ನಾಯ್ಕ್ ಮೃತಪಟ್ಟವರು. ಅಕ್ಷತಾ ಅವರು ಪುತ್ತೂರು ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಬಂಧಿಸಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪುತ್ತೂರು: ದೇಶದಲ್ಲಿ ಸೊಳ್ಳೆಗಳ ಮೂಲಕ ಹರಡುವ ಹಲವು ರೋಗಗಳಿದ್ದು, ಈ ಪೈಕಿ ಮಲೇರಿಯಾ ರೋಗವೂ ಒಂದಾಗಿದೆ. ನಮ್ಮ ಸುತ್ತ ಮುತ್ತ ನೀರು ನಿಲ್ಲದಂತೆ ಮಾಡಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವುದರಿಂದ ಮಲೇರಿಯಾ ನಿಯಂತ್ರಣದಲ್ಲಿ ನಾವು ಯಶಸ್ವು ಕಾಣಲು ಸಾಧ್ಯ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ಅವರು ದ.ಕ.ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು ಇದರ ವತಿಯಿಂದ ಮಲೇರಿಯಾ
ರಾಜ್ಯದಾದ್ಯಂತ ಇಂದಿನಿಂದ ಎರಡು ದಿನಗಳ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಇಂದು ಮತ್ತೆ ನಾಳೆ ಸಂಪೂರ್ಣ ಬಂದ್ ಇರಲಿದೆ, ದಕ್ಷಿಣಕನ್ನಡ ಜಿಲ್ಲೆಯಲ್ಲೂ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಹಾಲು, ಪೇವರ್ ಅಂಗಡಿ,ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅಗಿದೆ. ಅನಗತ್ಯ ತೆರಳುವ ವಾಹನಗಳಿಗೆ ಪೋಲೀಸರಿಂದ ದಂಡ ವಿಧಿಸಿದ್ದಾರೆ. ಪುತ್ತೂರಿನಲ್ಲಿ ಪೋಲೀಸರ ಬಿಗಿ ಕಾವಲು ಏರ್ಪಡಿಸಿದ್ದಾರೆ. ವೀಕೆಂಡ್ ಕರ್ಫೂವನ್ನು ಪೊಲೀಸರು ಕಟ್ಟು ನಿಟ್ಟಾಗಿ
ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು. ಜೂ.19ರಂದು ಬೆಳಿಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಇದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ವಿನೂತನ ಯೋಜನೆಯ ಅಂಗವಾಗಿ ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಕುರಿಯ ನೇತೃತ್ವದಲ್ಲಿ ಹಡಿಲು ಗದ್ದೆಯನ್ನು ಬೇಸಾಯ ಮಾಡಬೇಕು ಎನ್ನುವ ಕೋರಿಕೆಯ ಮೇರೆಗೆ ಕುರಿಯ ಗ್ರಾಮದ ಮುಳಿಯ ಶ್ಯಾಮ ಭಟ್ ಅವರ ಕುಟುಂಬದ ಗದ್ದೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಕೃಷಿ ಆಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ


















