ರಕ್ಷಣೆಗೆ ಎಲ್ಲಾ ತಂಡಗಳು ಸನ್ನದ್ಧವಾಗಿವೆ : ಉಡುಪಿ ಡಿಸಿ ಎಂ. ಕೂರ್ಮ ರಾವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು ಅರೆಂಜ್ ಅಲೆರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಸ್ಥಳಾಂತರ ನಡೆಸಲು ಅಗ್ನಿಶಾಮಕ ದಳ ಸಿದ್ದವಾಗಿದೆ. ಉಡುಪಿಯ 9 ಪ್ರದೇಶಗಳಿಗೆ ಈಗಾಗಲೇ ಬೋಟ್ ವ್ಯವಸ್ಥೆ ಮಾಡಲಾಗಿದೆ. ಉಡುಪಿ ನಗರದ ತಗ್ಗು ಪ್ರದೇಶಗಳಲ್ಲಿ ಕೂಡಾ ನೀರು ಮನೆಗೆ ನುಗ್ಗಿದೆ. ಆದ್ದರಿಂದ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದೇವೆ. ರಕ್ಷಣೆಗೆ ಎಲ್ಲಾ ತಂಡಗಳು ಸನ್ನದ್ಧವಾಗಿವೆ. ಉಸ್ತುವಾರಿ ಸಚಿವರು ಕೂಡಾ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಕಂಟ್ರೋಲ್‌ ರೂಂ ಕೂಡಾ ನಿರಂತರವಾಗಿ ಕಾರ್ಯ‌ನಿರ್ವಹಿಸುತ್ತಿದೆ. ಸಾರ್ವಜನಿಕರು ಯಾವಾಗ ಬೇಕಾದರೂ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ನದಿ, ಹಳ್ಳ ಪ್ರದೇಶಗಳಲ್ಲಿ ಎಚ್ಚರ ವಹಿಸಿ, ಸಮುದ್ರ ತೀರದಲ್ಲಿ ಹೆಚ್ಚಿನ ಅಲೆಗಳು ಬರುತ್ತಿವೆ ಅಲ್ಲಿಗೆ ಯಾರೂ ಕೂಡಾ ಹೋಗಬಾರದು. ಈ ಕುರಿತು ವಾರ್ಡ್ ಮಟ್ಟದಲ್ಲಿ ಕೂಡಾ ಜಾಗೃತಿ ಮಾಡುತ್ತಿದ್ದೇವೆ. ಹಾನಿಗೆ ತಹಶಿಲ್ದಾರರ ಮಟ್ಟದಲ್ಲಿಯೇ ಪರಿಹಾರ ನೀಡಲಾಗುತ್ತಿದೆ. ಎಸ್ ಡಿ ಅರ್ ಎಫ್, ಎನ್ ಡಿ ಅರ್ ಎಫ್ ಮಂಗಳೂರಿನಲ್ಲಿ ಸಿದ್ದವಿದೆ ಹಾಗೂ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾಧ್ಯಮದೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

Related Posts

Leave a Reply

Your email address will not be published.