ಉಡುಪಿ, ಎ.20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಎ.20ರಂದು ಬೆಳಗ್ಗೆ ನಿಧನರಾದರು. ಇವರು ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ ಮಾ.29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪಡುಬಿದ್ರಿಯ ಹೆಜಮಾಡಿ ಬೇಬಿ ಐಸ್ ಪ್ಲ್ಯಾಂಟ್ ಸಮೀಪದಲ್ಲಿ ಸುಪ್ರ ಮಿನರಲ್ ವಾಟರ್ ಘಟಕ ಶುಭಾರಂಭಗೊಂಡಿತು. ನೂತನ ಘಟಕವನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಇದೇ ವೇಳೆ ಮಾತನಾಡಿದ ಅವರು, ನೀರಿನ ವಿಚಾರದಲ್ಲಿ ಉಡುಪಿ ಜಿಲ್ಲೆಯ ಜನತೆ ಅತ್ಯಂತ ಭಾಗ್ಯಶಾಲಿಗಳು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಶುದ್ಧ ನೀರು ಉತ್ಪಾದನಾ ಘಟಕ ಸುಪ್ರ ಉದ್ಘಾಟನೆಗೊಂಡಿರುವುದು ಹೆಮ್ಮೆಯ ವಿಚಾರ
ಮುನಿಯಾಲಿನ ಅಪ್ತಿ ಆಚಾರ್ಯ ಕಳೆದ ಮಾರ್ಚ್ 01 ರಂದು ಜಿಮ್ನಾಸ್ಟಿಕ್ ನ ಮಾದರಿಯಲ್ಲೊಂದಾದ ಹೆಡ್ರೋಲ್ ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡ್ ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ಮುನಿಯಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್. ಆರ್ ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ರ ವರಿಂದ
ಮಂಗಳೂರು: ಮಂಗಳೂರಿನ ಅಳಕೆಯಲ್ಲಿರುವ ಮುದ್ರಾ ಪ್ರಿಂಟರ್ಸ್‌ನಲ್ಲಿ ನವ ನವೀನ ಮಾದರಿಯ ಉತ್ಕೃಷ್ಟ ಗುಣಮಟ್ಟದ ಪ್ರಪಂಚದಲ್ಲೇ ಪ್ರಸಿದ್ಧಿ ಮತ್ತು ಪ್ರಖ್ಯಾತಿಯನ್ನು ಹೊಂದಿರುವ ಫ್ಲೆಕ್ಸ್ ಪ್ರಿಂಟಿಂಗ್ ಪ್ರೀಮಿಯಂ ಆಲ್ವಿನ್ ಬ್ರಾಂಡ್‌ನ ಹೊಸ ನೂತನ ಮಿಷಿನ ಉದ್ಘಾಟನೆ ಸಮಾರಂಭ ನಡೆಯಿತು. ಕಳೆದ ೩೦ ವರ್ಷಗಳಿಂದ ಮುದ್ರಣ ಕ್ಷೇತ್ರದಲ್ಲಿ ಮನೆ ಮಾತಾಗಿರುವ ನಗರದ ಕುದ್ರೋಳಿ ಅಳಕೆಯಲ್ಲಿರುವ ಮುದ್ರ ಪ್ರಿಂಟರ್ಸ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ
ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ (ರಿ.) ಎಸ್.ಕೋಡಿ, ತೋಕೂರು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ- ಇವರ ಸಹಭಾಗಿತ್ವದಲ್ಲಿ ಉಚಿತ ಬೇಸಿಗೆ ಶಿಬಿರ ಚಿಣ್ಣರ ಹಬ್ಬ 2025 ನಡೆಯಲಿದೆ. ಈ ಶಿಬಿರದಲ್ಲಿ ಯೋಗ/ಧ್ಯಾನ,ಶ್ಲೋಕ/ ಭಗವದ್ಗೀತಾ,ಭಜನೆ,ಸಂಗೀತ,ನೃತ್ಯ,ನೀತಿ ಕಥೆಗಳು, ಪೇಪರ್ ಕ್ರಾಫ್ಟ್,ಚಿತ್ರಕಲೆ/ ವರ್ಣ ಕಲೆ,ವ್ಯಕ್ತಿತ್ವ ವಿಕಸನಕಸದಿಂದ ರಸ,ಆವೆ ಮಣ್ಣಿನ ಕಲಾಕೃತಿ ಹಾಗೂ ಗುಂಪು ಚರ್ಚೆ ಮುಂತಾದ ಹಲವಾರು
ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಮಾ.12 ರಂದು ಮಣಿಪಾಲ ಠಾಣಾ ಪೋಲಿಸ್ ನಿರೀಕ್ಷಕ ದೇವರಾಜ್ ಅವರಿಂದ ಕಾಲಿಗೆ ಗುಂಡೇಟು ತಿಂದಿದ್ದ ಗರುಡ ಗ್ಯಾಂಗಿನ ಆರೋಪಿ ಇಸಾಕ್‌ನನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎ.1 ರವರೆಗೆ ಒಟ್ಟು 9 ದಿನ ಪೋಲಿಸ್ ಕಸ್ಟಡಿಗೆ ನೀಡಿದೆ.ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೆಂಗಳೂರಿನ ನೆಲಮಂಗಲ ಪೋಲಿಸರಿಂದ ತಪ್ಪಿಸಿಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕ್‌ಗೆ ಗುದ್ದಿದ ಪ್ರಕರಣದಲ್ಲಿ ಆರೋಪಿಯನ್ನು
ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರರ ಬಂಧನ ವಿರೋಧಿಸಿ ಮಾ 22ರಂದು ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಮಂಜುಕೊಳ ವಿರುದ್ಧ ಸುಮೊಟೋ ಪ್ರಕರಣ ದಾಖಲಾಗಿದೆ. ದಯಮಾಡಿ ಬಂಧಿತ ನಾಲ್ಕು ಮಹಿಳೆಯರನ್ನು ಬಿಡಬೇಕು ಎಂದ ವೇದಿಕೆ ಮಂಜು ಕೊಳ ಭಾಷಣ ಮಾಡುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟುವ ಮಾತನಾಡುತ್ತಾ ಸಾರ್ವಜನಿಕರಿಂದ ಇಂತಹ ಅಪರಾಧ ಮಾಡಿಸಲು
ಪಡುಬಿದ್ರಿ ರಾಗ್ ರಾಂಗ್ ಕಲ್ಚರಲ್ ಕ್ಲಬ್ (ರಿ) ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20 ನೇ ವರ್ಷದ ” ಸ್ಟಾರ್ ನೃೆಟ್” ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ.ಅಮೀನ್ ಸಾರಥ್ಯದಲ್ಲಿ ಮಾರ್ಚ್ 21 ರಂದು ರಾತ್ರಿ 8:00 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಅದ್ದೂರಿ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಣ್ಯಾತೀ ಗಣ್ಯರು ಹಾಗು ಕನ್ನಡ ಮತ್ತು ತುಳು ಚಿತ್ರರಂಗದ ಖ್ಯಾತ ನಟ ನಟಿಯರು ಭಾಗವಹಿಸಲಿದ್ದು, ವಿವಿಧ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಾಟೆ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಹೆಮ್ಮಾಡಿ ಹೇಮಾಪುರ ಮಠದ ಸಮಿಪ ಅದೆ ಮಾರ್ಗದಲ್ಲಿಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದು ಕೊಂಡ ಸ್ಕೂಟಿ ಪಲ್ಟಿಯಾಗಿ ಹೆದ್ದಾರಿ ಬದಿಯಲ್ಲಿ ನಿಂತು ಕೊಂಡಿದ್ದ ಲಾರಿ ಅಡಿಗೆ ಸಿಲುಕಿದ ಘಟನೆ ನಡೆದಿದೆ. ಅಪಘಾತದಲ್ಲಿ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಸಹಿತ ಮಕ್ಕಳಿಬ್ಬರಿಗೆ ಗಾಯವಾಗಿದ್ದು ಪಾರಾಗಿದ್ದಾರೆ.
ಖ್ಯಾತ ನಟ ನೆನಪಿರಲಿ ಖ್ಯಾತಿಯ ಪ್ರೇಮ್ ಹಾಗೂ ನಟಿ ಶರಣ್ಯಶೆಟ್ಟಿ ಅವರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಪ್ರಾತ:ಕಾಲದಿ ಉಡುಪಿ ಶ್ರೀ ಕೃಷ್ಣನ ವಿಶ್ವರೂಪದರ್ಶನ ಪಡೆದು ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥರಿಂದ ಕೋಟಿಗೀತಾಲೇಖನ ಯಜ್ಞ ದೀಕ್ಷೆ ಸ್ವೀಕರಿಸಿ ತೆರಳಿದರು.