ಬ್ರಹ್ಮಾವರದ ಹಾನಸ ಅರೆಮಾದನಹಳ್ಳಿ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 41 ನೇ ಆರಾಧನಾ ಮಹೋತ್ಸವ ನಡೆಯಿತು. ಉಡುಪಿ ಜಿಲ್ಲೆಯ ಕೊಕ್ಕರ್ಣೆಬಳಿಯ ಶಾಖಾ ಮಠ ಕಜ್ಕೆಯಲ್ಲಿ ಗುರುಪರಂಪರೆಯ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆಚರಣೆಯ ಸಂದರ್ಭ ಜರುಗಿತು. ಈ ಸಂದರ್ಭ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಇತಿಹಾಸ ಇರುವ ಗುರು ಪರಂಪರೆಯಲ್ಲಿ,
ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ಯಶಸ್ವೀಗೆ ದೇಶಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಚಂದ್ರಯಾನ-3 ಯಶಸ್ವಿಗೆ ಶುಭ ಹಾರೈಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ.
ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ವಂಡ್ಸೆ ಗ್ರಾಮ ಪಂಚಾಯಿತಿ ಸದ್ಯ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ಪ್ರಶಸ್ತಿಯಿಂದ ಪಂಚಾಯತ್ ಗುರುತಿಸಿಕೊಳ್ಳುತ್ತಿಲ್ಲ ಬದಲಿಗೆ ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ತ್ಯಾಜ್ಯ ವಿಲೇವಾರಿ ಮಾಡಿದ್ದ ವಂಡ್ಸೆ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ನಿರ್ವಹಣೆಯ ಲೋಪದ ಕುರಿತು ಆರೋಪ ಕೇಳಿ ಬಂದಿದೆ. ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ
ಬ್ರಹ್ಮಾವರ: ಹಿಂದಿನ ಬಿಜೆಪಿ ರಾಜ್ಯ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ “ಅಗ್ನಿ ಪಥ್” ಸೇನಾಪೂರ್ವ ತರಬೇತಿಯ ಮರು ಚಾಲನೆಗೆ ಕಾಂಗ್ರೆಸ್ ರಾಜ್ಯ ಸರಕಾರ ಅಸ್ತು ಎಂದಿದೆ. ರಾಜ್ಯದ ಕರಾವಳಿಯ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಕಳೆದ ವರ್ಷ “ಅಗ್ನಿ ಪಥ್” ಸೇನಾ ಪೂರ್ವ ತರಬೇತಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ 2 ತಂಡ ತರಬೇತಿ ಮುಗಿಸಿ ಅವರಲ್ಲಿ ಅನೇಕರು ಸೇನೆ
ಬ್ರಹ್ಮಾವರ : ಕಮಾಂಡರ್ ಸ್ಪೋರ್ಡ್ಸ್ ಮತ್ತು ಆರ್ಟ್ ಕ್ಲಬ್ ಉಗ್ಗೇಲ್ ಬೆಟ್ಟು ಮತ್ತು ಸಹೋದರ ಸಂಘಟನೆಗಳ ವತಿಯಿಂದ ಕೆಸರ್ಡ್ ಕುಸಲ್ ಎಂಬ ಕಾರ್ಯಕ್ರಮವವು ಉಗ್ಗೆಲ್ ಬೆಟ್ಟು ಗರಡಿಬಳಿಯ ಗದ್ದೆಯಲ್ಲಿ ಜರುಗಿತು. ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂಪ್ರದಾಯಕವಾಗಿ ಕಳಸೆಗೆÀ ಭತ್ತವನ್ನು ಸುರಿದು ಹಣತೆ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗದ ಮಕ್ಕಳಿಗೆ ಮಣ್ಣು, ಕೃಷಿ ಇದನ್ನು ಪರಿಚಯಿಸಲು ಇಂತಹ
ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು. ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಹಾಲು ಖರೀದಿಸಿದರು. ನಾಗರ ಪಂಚಮಿ
ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಸತತ 3 ನೆ ಬಾರಿ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ ದಿನಾಂಕ. 19-08-2023 ರಂದು ನಡೆದ SCDCC ಬ್ಯಾಂಕ್ ನ ಮಹಾಸಬೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಕರ್. ಕೆ ಹಾಗೂ ಸಿ.ಇ.ಒ ಪದ್ಮನಾಭ್ .ಎಂ ಇವರನ್ನು ಸನ್ಮಾನಿಸಿ scdcc ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು .ಸೊಸೈಟಿಯು ಕಳೆದ 3 ವರ್ಷದಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.
ಬಾರಕೂರು ಬಳಿಯ ಬಂಡೀಮಠದಲ್ಲಿರುವ ಕುಂಬಾರ ಸಮಾಜದವರ ದೈವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಕುಂಬಾರಿಕೆ ಮಾಡುವ ಕುಲಾಲ ಸಮುದಾಯದವರಿಗೆ ಮೂಲ ಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿ ತಲತಲಾಂತರದಿಂದ ಇಲ್ಲಿ ಅರ್ಚನೆ, ಪೂಜೆ ಮತ್ತು ದರ್ಶನ ಕುಲಾಲ ಸಮುದಾಯದವರಿಂದ ನಡೆಯುತ್ತಾ ಬರುತ್ತಿದೆ. ಇಲ್ಲಿ ಪ್ರಧಾನ ದೈವ ಹಾೈಗುಳಿ ಜೊತೆ ಹಲವಾರು ಪರಿವಾರ ಶಕ್ತಿಗಳ ಸಾನಿಧ್ಯವಿದೆ. ಸುತ್ತ ಕಾನನದ ನಡುವೆ ಮುಳಿ ಹುಲ್ಲಿನ ಚಿಕ್ಕ ಗುಡಿಯೊಂದು ಇದ್ದು
ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಲ್ಲಿ ಅಶಕ್ತರ ಚಿಕಿತ್ಸಾ ಸಹಾಯಾರ್ಥವಾಗಿ ಹಣ ಸಂಗ್ರಹಿಸುವ ಮೂಲಕ ಅಶಕ್ತಿರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು ಅವರು. ಬೆಂಕಿ ಮಣಿ ಸಂತು ಅಶಕ್ತರ ಚಿಕಿತ್ಸಾ ಸಹಾಯರ್ಥ ವಿಶೇಷ ವೇಷ ಧರಿಸಿ ಹಣಸಂಗ್ರಹಣೆ ಮಾಡುತ್ತಿರುವುದು ಇದೆ ಮೊದಲೇನಲ್ಲ… ಅದೆಷ್ಟೋ ಅನಾರೋಗ್ಯ ಪೀಡಿತರಿಗೆ ವಿವಿಧ ಜಾತ್ರೆಯಲ್ಲಿ ವೇಷ ಹಾಕುವುದರ ಮೂಲಕ ಹಣವನ್ನು
ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು. ಬ್ರಹ್ಮಾವರ ವ್ಯವಸಾಯ ಸೇವಾ




























