ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಟ್ಲದಲ್ಲಿರುವ ಕೇಶವ ಕೃಪಾ ವಸತಿ ಗೃಹದಲ್ಲಿ ರೂರಲ್ ಎಜುಕೇಶನ್ ಸೊಸೈಟಿ ಆಯೋಜಿಸಿದ್ದ ಬೇಸಿಗೆ ಶಾಲಾ ಶಿಬಿರದ ಸಮಾರೋಪ ಕಾರ್ಯಕ್ರಮ ಮೇ 25, 2023 ರಂದು ಜರುಗಿತ್ತು. ಮಾರ್ಚ್ 28, 2023 ರಿಂದ ಏಪ್ರಿಲ್ 8, 2023 ರವರೆಗೆ ನಡೆದ ಈ ಶಿಬಿರದಲ್ಲಿ ವಿಷ್ಣು ಸಹಸ್ರನಾಮ, ಯೋಗ, ದೇಶಭಕ್ತಿ ಗೀತೆಗಳು, ಪೂರ್ವಭಾವಿ ಭಾಷಣ, ಚರ್ಚೆ,
ಉಪ್ಪುಂದ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ. ಪದವೀಧರ ತನ್ನ ೬ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು
ಬೈಂದೂರಲ್ಲಿ ನಡೆದ ಕಹಿ ಘಟನೆ ಜನರ ಮನದಿಂದ ಇನ್ನೂ ಮಾಸಿಲ್ಲ…ಇದೀಗ ಅಂಥಹುದೇ ಮರದ ಕಾಲು ಸೇತುವೆಯೊಂದು ಎಲ್ಲೂರು ಪಡುಬೈಲಿನಲ್ಲಿ ಬಲಿಗಾಗಿ ಕಾದು ಕುಳಿತಂತ್ತಿದೆ. ಮರದ ಕಾಲು ಸೇತುವೆಯಲ್ಲಿ ಭಯದಲ್ಲೇ ಹೋಗಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೈಲಿನ ಜನರ ಬದುಕು ಒಂದು ರೀತಿಯಲ್ಲಿ ಗೃಹ ಬಂಧನವೇ ಸರಿ.
ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು 4 ಲಕ್ಷದ 60 ಸಾವಿರ ಆಗಿದ್ದು, ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಶ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ
“ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಪ್ರಯುಕ್ತ ಮೇ 25, 2023 ರ ಗುರುವಾರದಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಅದಿತಿ ಗ್ಯಾಲರಿನಲ್ಲಿ ಜರುಗಿತ್ತು. ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವರವರು ಕಲಾವಿದೆ ಪ್ರವೀಣಾ ಮೋಹನ್ ಅವರ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ “ದೇವತಾ” ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ
ದಿನ ಕಳೆದಂತೆ ಹತ್ತಿರವಾಗುತ್ತಿದೆ ಉಡುಪಿಯ ಭವ್ಯ ಆಚರಣೆ. ಇಡೀ ಜಗತ್ತಿನಲ್ಲೇ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದು, ಶತಮಾನಗಳಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿರುವ “ಪರ್ಯಾಯ”ಮಹೋತ್ಸವ. ಉಡುಪಿಯ 8 ಮಠಗಳ ನಡುವೆ ಶ್ರೀ ಕೃಷ್ಣ ದೇವಾಲಯದ ಜವಾಬ್ದಾರಿಗಳ ಹಸ್ತಾಂತರವನ್ನೇ ಪರ್ಯಾಯ ಮಹೋತ್ಸವ ಎನ್ನುತ್ತಾರೆ. ಪ್ರಸ್ತುತ ಕೃಷ್ಣಪುರ ಮಠದ ವಿದ್ಯಾಸಾಗರ ತೀರ್ಥರು ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದರೆ, ಮುಂದಿನ ಸರದಿಯಲ್ಲಿ
ಕರಾವಳಿ ತಡಿಯ ಪ್ರಸಿದ್ಧ ಲಕ್ಷ್ಮೀ ದೇವಿಯ ದೇವಸ್ಥಾನ ಹಾಗೂ ಮೊಗವೀರ ಸಮಾಜದ ಕುಲದೇವತೆಯಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ವಾನ್ ಶ್ರೀ ವಿದ್ಯಾಭೂಷಣರು ಭೇಟಿ ನೀಡಿದರು. ಇದೇ ವೇಳೆ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಹಾಡಿ ಶ್ರೀ ದೇವಿಯ ದರ್ಶನವನ್ನು ಪಡೆದರು.
ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳಲ್ಲಿ ಜೀವ ಹಾನಿ, ಆಸ್ತಿ ಹಾನಿ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇ 23, 2023 ರ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿಂದೆ ಬಾಧಿಸಿದ್ದ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ವಿಕೋಪದ ಮುನ್ಸೂಚನೆಗಳು
ದಿ ಕೇರಳ ಸ್ಟೋರಿ, ರಾಷ್ಟ್ರಾದ್ಯಂತ ಹೊಸ ಸಂಚಲನ ಮೂಡಿಸಿರುವ ಈ ಸಿನಿಮಾದ ಉಚಿತ ಪ್ರದರ್ಶನ ಉಡುಪಿ ಜಿಲ್ಲೆಯ ಅಲ್ಲಲ್ಲಿ ಏರ್ಪಟ್ಟಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪರ್ಕಳ, ಉಡುಪಿ ಸಂಘಟಕರು ಜಂಟಿಯಾಗಿ ಮೇ 23 ರಂದು ಮಣಿಪಾಲದ ಐನಾಕ್ಸ್ ಸಿನಿಮಾಸ್ ಮತ್ತು ಕೆನರಾ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಉಚಿತವಾಗಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನ ನೀಡಿತು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ,
ಉಡುಪಿಯ ಅದಿತಿ ಗ್ಯಾಲರಿ ವತಿಯಿಂದ “ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಪ್ರತೀದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ತನಕ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ಮೇ 25, 2023 ರಂದು ಸಂಜೆ 5:15 ಕ್ಕೆ ಅದಿತಿ ಗ್ಯಾಲರಿನಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ, ಉಜ್ವಲ್ ಗ್ರೂಪ್‌ನ




























