ಬಡ ರೋಗಿಗಳಿಗೆ ಅನುಕೂಲವಾಗಲೆಂದು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ. ತುಂಬು ಗರ್ಭಿಣಿಯೊಬ್ಬರು ಸರಕಾರಿ ಆಸ್ಪತ್ರೆಗೆ ಬಂದರು ಸಕಾಲದಲ್ಲಿ ವೈದ್ಯರ ನೆರವು ಸಿಗದೆ ಮಂಗಳೂರಿನಲ್ಲಿ ಮೃತಪಟ್ಟಿದ್ದು ಇದಕ್ಕೆ ಕಾರ್ಕಳ ವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಕರ್ತವ್ಯ
ಉಳ್ಳಾಲ: ಇಲ್ಲಿನ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ಕಂಬಳ ಕರೆಯ ಬಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮಾ. 25ರಂದು
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿನ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಿಂದ ಮೇಣದ ಬತ್ತಿ ತಯಾರಿಕಾ ಘಟಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಸುಮಾರು 25 ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಯಂತ್ರೋಪಕರಣಗಳು ಹಾಗೂ ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು
ಫೈರ್ & ಸೇಫ್ಟಿ ಮತ್ತು ಎಚ್‍ಎಸ್‍ಇ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಲ್ಲಿ ನಿರಂತರ ಸಾಧನೆಗಳನ್ನು ಸೃಷ್ಟಿಸಿ 17 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಉದ್ಯೋಗ ಒದಗಿಸಿದ ವಿದ್ಯಾಸಂಸ್ಥೆ ಮಂಗಳೂರು ಇನ್ಸಿಟ್ಯೂಟ್ ಆಫ್ ಫೈರ್ & ಸೇಫ್ಟಿ ಇಂಜಿನಿಯರಿಂಗ್ (ಎಂಐಎಫ್‍ಎಸ್‍ಇ)ಗೆ 2023 ಸಾಲಿನ ಇಕಾನಮಿಕ್ಸ್ ಬಿಸಿನೆಸ್ ಟೈಮ್ಸ್ ಅವಾರ್ಡ್ 2023 ಲಭಿಸಿದೆ. ಬಾಲಿವುಡ್ ನಟಿ ರಿಷಿ ಖನ್ನಾ ಅವಾರ್ಡನ್ನು
ಉಳ್ಳಾಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ವ್ಯಕ್ತಿಯೋರ್ವ ಪತ್ನಿಯ ಸಂಬಂಧಿಕರ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಸಂಭವಿಸಿದೆ.ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು. ಇವರು 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು. ನವವಿವಾಹಿತರಾಗಿದ್ದ ಹರೀಶ್ ಅವರು ಸಿದ್ದಕಟ್ಟೆ ಸಂಗಬೆಟ್ಟು
ಪಣಂಬೂರು : ಅಂತರಾಷ್ಟ್ರೀಯ ಮಟ್ಟದ ಸೌಕರ್ಯವನ್ನು ಪಣಂಬೂರು ಬೀಚ್‍ನಲ್ಲಿ ಬರುವ ಪ್ರವಾಸಿಗರಿಗೆ ನೀಡುವ ಸಲುವಾಗಿ ಸರಕಾರಿ ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು. ಸೋಮವಾರ ಸಂಜೆ 7.5 ಕೋಟಿ ರೂ.ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಮಂಗಳೂರು ಉತ್ತರ ಕ್ಷೇತ್ರವು ದೊಡ್ಡದಾದ ಬೀಚ್ ಅನ್ನು ಹೊಂದಿದೆ. ಪಣಂಬೂರು ಬೀಚ್ ಅಂತರಾಷ್ಟ್ರೀಯ
ಮಂಗಳೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ಶೋರೂಂ ಆದ ವೆಸ್ಟ್ ಕೋಸ್ಟ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ಗಳನ್ನು ನೀಡುತ್ತಿದ್ದಾರೆ.ದ್ವಿಚಕ್ರ ವಾಹನಗಳ ಫ್ರೀ ವಾಶ್ ಜೊತೆಗೆ ತೈಲದ ಮೇಲೆ ಶೇ.10ರಷ್ಟು ರಿಯಾಯಿತಿ, ಲೇಬರ್ ಕೆಲಸದಲ್ಲಿ ಶೇ.30ರಷ್ಟು ರಿಯಾಯಿತಿ, ದ್ವಿಚಕ್ರ ವಾಹನಗಳ ಬಿಡಿಭಾಗಗಳ ಮೇಲೆ ಶೇ.5ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ನೂತನ ದ್ವಿಚಕ್ರ ವಾಹನ ಖರೀದಿದಾರರಿಗೆ ಫುಲ್ ಟ್ಯಾಂಕ್ ಪೆಟ್ರೋಲ್
ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾರ್ಚ್ 13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಪ್ರಯುಕ್ತ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ವಿವಿಧ ದಾನಿಗಳಿಂದ ದೇವಸ್ಥಾನಕ್ಕೆ ನೀಡಲಾದ ಕೊಡುಗೆಗಳ ಉದ್ಘಾಟನೆ ಹಾಗೂ ಮೆರವಣಿಗೆ ಜರುಗಿತು. ದಾನಿ ಕೃಷ್ಣ ಶೆಟ್ಟಿ ಶ್ರೀದ್ವಾರ ಅವರು ನಿರ್ಮಿಸಿದ ಹೆದ್ದಾರಿ ಬದಿಯ ರಾಜಗೋಪುರದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಚಿತ್ರಾಪುರ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆ ಕಾಣಿಕೆ ಭಾನುವಾರ ನಡೆಯಿತು.ಭಾನುವಾರ ಬೆಳಿಗ್ಗೆ 48 ನಾರಿಕೇಳ ಮಹಾಗಣಪತಿ ಹೋಮ ನಡೆಯಿತು. ಮಧ್ಯಾಹ್ನ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯನ್ನು ವಿಟ್ಲ ಅರಮನೆಯ ಅನುವಂಶಿಕ ಆಡಳಿತದಾರ ಬಂಗಾರು ಅರಸರು ಉದ್ಘಾಟಿಸಿದರು. ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ವಿಟ್ಲದಿಂದ ಕುದ್ದುಪದವು-
ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ, ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ. ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರು ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಸದೇ ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದರು ಅವರು ಎಸ್