Home Posts tagged #v4news karnataka (Page 54)

ಮಾಣಿ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಪೂರ್ಣ ಸುಟ್ಟು ಕರಕಲಾದ ಮನೆ

ವಿಟ್ಲ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಘಟನೆಯಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಮಾಣಿ ಗ್ರಾಮದ ಕಾಪಿಕಾಡು ದೀಪಾ ಎಂಬವರ ಮನೆ ಬೆಂಕಿಗಾಹುತಿಯಾಗಿದೆ. ದೀಪ ಅವರು ಮನೆಯಲ್ಲಿ ಒಬ್ಬರೆ ಇದ್ದಾಗ ಈ ಘಟನೆ ಸಂಭವಿಸಿದ್ದು, ಬೆಂಕಿ ಕಾಣಿಸುತ್ತಿದ್ದಂತೆ ಅವರು ಹೊರಗಡೆ ಓಡಿ

ರಸ್ತೆಯುದ್ಧಕ್ಕೂ ಚೆಲ್ಲುತ್ತಿರುವ ಮೀನಿನ ದುರ್ವಾಸನೆಯುಕ್ತ ನೀರು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಮಂಜೇಶ್ವರ : ಮೀನುಗಳನ್ನು ಬಾಕ್ಸ್ ಗಳಲ್ಲಿ ತುಂಬಿಕೊಂಡು ಹೆದ್ದಾರಿಯಲ್ಲಿ ಬೇರೆಡೆಗೆ ಸಾಗುವ ಮೀನು ಲಾರಿಗಳು ದುರ್ವಾಸನೆಯನ್ನು ಬೀರಿ ಅವಾಂತರ ಸೃಷ್ಟಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ವ್ಯಕ್ತವಾಗುತ್ತಿದೆ. ಮೀನು ಸಾಗಾಟ ಮಾಡುವ ಲಾರಿಗಳು ಐಸ್ ತುಂಬಿದ ಬಾಕ್ಸ್ ಗಳಲ್ಲಿ ಮೀನುಗಳನ್ನು ಹಾಕಿಕೊಂಡು ಕಾಸರಗೋಡು ಭಾಗದಿಂದ ಕೇರಳದ ವಿವಿಧಡೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುತ್ತಿದೆ. ಆದರೆ ಲಾರಿಗಳಲ್ಲಿ ಐಸ್ ಕರಗಿದ ನೀರು ರಸ್ತೆಯ ಮೇಲೆ ಬೀಳದಂತೆ ಸೇಪ್ಟಿ

ಪಡುಬಿದ್ರಿಯಲ್ಲಿ ಸರಣಿ ಕಳ್ಳತನ, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳೆದ ರಾತ್ರಿ ಪಡುಬಿದ್ರಿ ಮುಖ್ಯ ಮಾರುಕಟ್ಟೆಯ ಸೂಪರ್ ಮಾರ್ಕೆಟ್ ಹಾಗೂ ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯಲ್ಲಿ ಕಳ್ಳತನ ನಡೆದಿದ್ದು ಸಹಸ್ರಾರು ರೂಪಾಯಿ ಬೆಲೆಬಾಳುವ ವಸ್ತುಗಳು ಹಾಗೂ ನಗದು ಕಳವಾಗಿದ್ದು ಕಳ್ಳ ಸಿಸಿ ಕ್ಯಾಮಾರದಲ್ಲಿ ಸೆರೆ ಸಿಕ್ಕಿದ್ದಾನೆ.ಮುಖ್ಯ ಮಾರುಕಟ್ಟೆಯಲ್ಲಿರುವ ಕೆ.ಎಸ್. ಬಜಾರ್‍ನ ಬೀಗ ಮುರಿದ ಕಳ್ಳ ಒಳ ಹೊಕ್ಕು ಒಂದು ಲ್ಯಾಪ್‍ಟಾಪ್ ಹಾಗೂ ಒಂದು ಬೊಬೈಲ್ ಕಳವು ನಡೆಸಿದ್ದಾನೆ. ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯ

ಉಪ್ಪಿನಂಗಡಿ : ಟಯರ್ ರಿಸೋಲ್ ಸಂಸ್ಥೆಯಲ್ಲಿ ಬೆಂಕಿ, ಕಾರ್ಮಿಕ ಮೃತ್ಯು

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಟಯರ್ ರಿಸೋಲ್ ಸಂಸ್ಥೆಯೊಂದರಲ್ಲಿ ಏರ್ ಕಂಪ್ರೈಸರ್ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿ ಮಧ್ಯಾಹ್ನದ ವೇಳೆಗೆ ನಡೆದಿದೆ. ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಏರ್ ಕಂಪ್ರೆಸರ್ ಸ್ಫೋಟಗೊಂಡು ಗಂಭೀರ

ಕರಾವಳಿಯ ಸೌಹಾರ್ದತೆ ಸಾರುವ ಪವಿತ್ರ ಪುಣ್ಯ ಕ್ಷೇತ್ರ, ಬಿಕರ್ನಕಟ್ಟೆಯ ಬಾಲ ಯೇಸು ಮಂದಿರ

ಕರಾವಳಿಯಲ್ಲಿರುವ ಆ ಪವಿತ್ರ ಪುಣ್ಯ ಕ್ಷೇತ್ರ ಸೌಹಾರ್ದತೆಯ ಪಾಠ ಮಾಡ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಲ್ಲಿಗೆ ಸರ್ವಧರ್ಮದ ಭಕ್ತರ ದಂಡೇ ಹರಿದು ಬಂದಿದೆ. ಅಷ್ಟಕ್ಕೂ ಕರಾವಳಿಯಲ್ಲಿ ಸೌಹಾರ್ದತೆ ಸಾರ್ತಿರೋ ಆ ಪುಣ್ಯಕ್ಷೇತ್ರ ಯಾವುದು? ಅಲ್ಲಿನ ವಾರ್ಷಿಕ ಜಾತ್ರಾ ಸಂಭ್ರಮ ಹೇಗಿದೆ ಅಂತೀರಾ! ಮಂಗಳೂರಿನ ಬಿಕರ್ನಕಟ್ಟೆಯ ಆ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ. ಇತಿಹಾಸ ಪ್ರಸಿದ್ಧವಾಗಿರೋ ಕ್ರೈಸ್ತರ ಧಾರ್ಮಿಕ ತಾಣ ಬಾಲ ಯೇಸು ಮಂದಿರ ಈ ಭಾಗದ ಸರ್ವಧರ್ಮದ

ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆಂಬ ಆತ್ಮತೃಪ್ತಿ ಇದೆ : ಶಾಸಕ ಉಮಾನಾಥ್ ಕೋಟ್ಯಾನ್

ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ 9ಕೋ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಮೂಡುಬಿದಿರೆ:ಜನಸೇವಕನಾಗಿ ಆರಿಸಿ ಬಂದು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆಂಬ ಆತ್ಮತೃಪ್ತಿ ನನಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಅವರು ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.9ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಸಿದ್ದಾಂತ ರಾಜಕೀಯ ಮಾಡುತ್ತೇನೆ ವಿನಃ ದ್ವೇಷದ ರಾಜಕಾರಣ ನನ್ನಲಿಲ್ಲ : ಶಾಸಕ ರಾಜೇಶ್ ನಾಯಕ್

ಬಂಟ್ವಾಳ: ಅಧಿಕಾರ ಶಾಶ್ವತವಲ್ಲ. ಆದರೆ ಶಾಸಕನಾಗಿ ಅಧಿಕಾರದಲ್ಲಿರುವ ವರೆಗೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ನಾನು ಸಿದ್ದಾಂತ ರಾಜಕೀಯ ಮಾಡುತ್ತೇನೆಯೇ ವಿನಃ ದ್ವೇಷದ ರಾಜಕಾರಣ ನನ್ನಲ್ಲಿಲ್ಲ. ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಪೆರಾಜೆ ಗ್ರಾಮದ ಗುಡ್ಡ ಚಾಮುಂಡೇಶ್ವರೀ ದೈವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ವಿಕಾಸ ಪಾದಯಾತ್ರೆಯ 4 ನೇ ದಿನದ ಸಾರ್ವಜನಿಕ ಸಭೆಯಲ್ಲಿ ಅವರು ಪರಿಚಯವೇ ಇಲ್ಲದ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ

ಪಚ್ಚನಾಡಿ ಬೆಂಕಿ ಅವಘಡ : ಬಯೋ ಮೈನಿಂಗ್ ಕಾಮಗಾರಿ ಪೂರ್ಣಗೊಳಿಸಲು 4 ವರ್ಷ ಬೇಕು – ಮೇಯರ್ ಜಯಾನಂದ ಅಂಚನ್

ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿರುವ ತ್ಯಾಜ್ಯಗಳ ಬಯೋ ಮೈನಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲು ನಾಲ್ಕು ವರ್ಷ ಅಗತ್ಯವಿದೆ. ಆದರೆ ಈ ಕಾಮಗಾರಿಯನ್ನು ತ್ವರಿತಗೊಳಿಸಿ ಮೂರು ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ. ಮಂಗಳವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ

ಪುರುಷೋತ್ತಮ ಪೂಜಾರಿ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ, 5 ಲಕ್ಷ ರೂ. ನೀಡುವ ಭರವಸೆ

ಮಂಗಳೂರಿನ ನಾಗರಿಯಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಕಳೆದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋರಿಕ್ಷಾ ನೀಡುವುದಾಗಿ ಶಾಸಕರು ಭರವಸೆ ನೀಡಿದರು ಎಆರ್‍ಟಿಓ ಸ್ಥಳಕ್ಕೆ ಕರೆಯಿಸಿ ಪರ್ಮಿಟ್ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು ಒಂದು ವಾರದೊಳಗೆ ಹೊಸ ರಿಕ್ಷಾ ದಾಖಲೆ

ಪುತ್ತೂರು : ಯುವತಿಗೆ ಚೂರಿ ಇರಿದು ಕೊಲೆ ಪ್ರಕರಣ, ಆರೋಪಿ ಉಮೇಶ್ ಎಂಬಾತನ ಬಂಧನ

ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಎಂಬಲ್ಲಿ 23ರ ಹರೆಯದ ಯುವತಿಯನ್ನು ಮನೆಯ ಅಂಗಳದಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ. ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ