Home Posts tagged #v4news karnataka (Page 62)

ಗುತ್ತಿಗೆದಾರನನ್ನು ಹೊಗಳಿದ ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶರು

ಮೂಡುಬಿದಿರೆಯ ವಕೀಲರ ಸಂಘದ ವತಿಯಿಂದ ರೂ 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಕೀಲರ ಭವನದ ಕಾಮಗಾರಿ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ನಡೆದಿದೆ ನಿಮಗೆ ಅಭಿನಂದನೆಗಳು ಎಂದು ಕಟ್ಟಡ ನಿರ್ಮಾಣದ ಗುತ್ತಿಗೆದಾರ, ಬಿಮಲ್ ಕನ್ಟ್ರಕ್ಷನ್ ನ ಪ್ರವೀಣ್ ಅವರನ್ನು ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ಅಭಿನಂದಿಸಿದ ಘಟನೆ

ಹೊಸ ವರ್ಷಾಚರಣೆಗೆ ಸಜ್ಜಾದ ಹೋಟೆಲ್ ಓಶಿಯನ್ ಪರ್ಲ್

ಮಂಗಳೂರು ನಗರದ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಒಂದಾದ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ 2023 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಖಾದ್ಯಪ್ರೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿದ್ದು, ಈ ಬಾರಿ ಹೊಸ ವರ್ಷ 2023ನ್ನು ಬರಮಾಡಿಕೊಳ್ಳಲು ಈಗಾಗಲೇ ಸಜ್ಜಾಗಿದ್ದಾರೆ. ಮಂಗಳೂರಿನ ಜನತೆಗಾಗಿ ವಿಶೇಷ ಮನೋರಂಜನೆಯ ಕಾರ್ಯಕ್ರಮದ ಜೊತೆಗೆ

ಎರಡು ದಿನಗಳ ಕಾಲ ನಡೆಯಲಿರುವ ಮಂಗಳೂರು ಉತ್ಸವ ಎಕ್ಸ್ ವಿಷನ್ ಕಮ್ ಸೇಲ್

ಮಂಗಳೂರು ಉತ್ಸವ ಎಕ್ಸ್‍ವಿಷನ್ ಕಮ್ ಸೇಲ್ ನಗರದ ಪಾಂಡೇಶ್ವರದ ರೋಸಾರಿಯೋ ಸಾಂಸ್ಕೃತಿಕ ಸಭಾಂಗಣದಲ್ಲಿ ಎರಡು ದಿನ ಕಾಲ ಹಮ್ಮಿಕೊಳ್ಳಲಾಗಿದ್ದು, ಶನಿವಾರದಂದು ಎಕ್ಸ್ ವಿಷನ್ ಕಮ್ ಸೇಲ್‍ಗೆ ಚಾಲನೆ ಸಿಕ್ಕಿತು. ಗೃಹಪ್ರಯೋಗಿ ವಸ್ತುಗಳು, ಮಹಿಳೆಯರ ವಿವಿಧ ಡ್ರೆಸ್ ಮೆಟೀರಿಯಲ್ಸ್ ಗಳು, ಕಾರು, ತಿಂಡಿ ತಿನ್ನಸುಗಳು ಹೀಗೆ ಒಂದೇ ವೇದಿಕೆಯಲ್ಲಿ ಕಾಣ ಸಿಕ್ಕಿತ್ತು. ಎಲ್ಲಾ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ ಸಿಗುವ ನಿಟ್ಟಿನಲ್ಲಿ ಮಂಗಳೂರು ಉತ್ಸವ

ಹೊಸ ವರ್ಷಾಚರಣೆ ಹಿನ್ನೆಲೆ, ಪೊಲೀಸರಿಂದ ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ರಾತ್ರಿ ವೇಳೆ ಹೊಟೇಲ್, ಪಬ್, ರೆಸ್ಟೋರೆಂಟ್ ಗಳಲ್ಲಿ 12.30ರ ವರೆಗೂ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ, ಡಿಜೆ ಇನ್ನಿತರ ಧ್ವನಿ ವರ್ಧಕ ಬಳಕೆಯನ್ನು ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಕಮಿಷನರ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್

ಮಂಗಳೂರು ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ

ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕೇವಲ ಚರಂಡಿ ಕಾಂಪೌಂಡ್ ಹಾಲ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದು, ಮಂಗಳೂರು ಪಾಲಿಕೆಯ ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂಬ ಕಾಂಗ್ರೆಸ್ ಆರೋಪ ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಕೋಲಾಹಲ ಸೃಷ್ಟಿಸಿತು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಲದ ವಿಚಾರದ ಚರ್ಚೆಯು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಸಮರಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷದ ಸದಸ್ಯರು ಮೂರು ಬಾರಿ

ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ : ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರಿಗೆ ಸಂಘಪರಿವಾರಗಳ ಬೆದರಿಕೆ ಇರುವ ಕಾರಣ ಅವರಿಗೆ ರಕ್ಷಣೆಗೆ ಆಗ್ರಹಿಸಿ ಹಾಗೂ ಸಂಘಪರಿವಾರದ ಹಿಂದುತ್ವವಾದಿಗಳು ಜಾತ್ಯಾತೀತವಾದ ಹಿಂದು ಧರ್ಮದ ಮಾನ ತೆಗೆಯವುದರ ವಿರುದ್ದ, ಹಿಂದುಗಳ ದೇವರ ಸ್ಮರಣೆಯ ಭಾಗವಾದ ಭಜನೆಯನ್ನು ಗೇಲಿ ಮಾಡುವಂತೆ ಪೋಲೀಸ್ಟೇಶನ್ ಎದುರು ಭಜನೆ ನಡೆಸಿ ಹಿಂದುಗಳಿಗೆ ಅವಮಾನಿಸಿದ ಸಂಘಪರಿವಾರದ ವಿರುದ್ದ ಹಾಗೂ ಹಿಂದುಳಿದ , ದಲಿತ ವರ್ಗದವರ ಧ್ವನಿ ಅಡಗಿಸುವ ಕುತಂತ್ರ ನಡೆಸುವ

ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ವಿ.ಎಸ್.ಬೇರಿಂಜ ಆಯ್ಕೆ

ಮಂಗಳೂರು. ಸ್ವಾತಂತ್ರ್ಯಾಪೂರ್ವದ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿಗೆ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರಿನ ವಿ.ಎಸ್. ಬೇರಿಂಜ ಆಯ್ಕೆಯಾಗಿದ್ದಾರೆ. 2022 ಡಿಸೆಂಬರ್ 16 ರಿಂದ 20 ರವರೆಗೆ ಕೇರಳದ ಅಳಪುಝದಲ್ಲಿ ಜರಗಿದ ಎಐಟಿಯುಸಿಯ 42ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿ.ಎಸ್. ಬೇರಿಂಜರನ್ನು

ಪಡಿಲ್ ಗೇಟ್ ಉದ್ಘಾಟನೆ ; ಮಂಗಳೂರು ಬೆಳವಣಿಗೆ ಹೊಸ ಕೊಡುಗೆ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ನಗರದ ಪಡಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಪಡಿಲ್ ಗೇಟ್’ ಕಮರ್ಷಿಯಲ್ ಸೆಂಟರ್ ನ ಉದ್ಘಾಟನೆ ಹಾಗೂ ಇಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳದ ಉದ್ಘಾಟನೆ ಶುಕ್ರವಾರ ನೆರವೇರಿತು. ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರನ್ನು ಮಂಗಳೂರು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು. ಈ ಸೆಂಟರ್ ನಲ್ಲಿ ಆಯೋಜಿಸಲಾಗಿರುವ ‘ಮಂಗಳೂರು ಕಾರ್ನಿವಲ್’ ವಸ್ತು ಪ್ರದರ್ಶನ ಮೇಳವನ್ನು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು

ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ

ಮೂಡುಬಿದಿರೆ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಲ್ಲಿ ವ್ಯಾಜ್ಯಗಳು ಇರಬಾರದು, ವ್ಯಾಜ್ಯಗಳು ಕಡಿಮೆಯಾಗಬೇಕಾದರೆ ವಕೀಲರು ಬಡಜನರಿಗೆ ತ್ವರಿತಗತಿಯಲ್ಲಿ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದರು. ದ.ಕ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಮೂಡುಬಿದಿರೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ

ಎಪ್ರಿಲ್‍ನಲ್ಲಿ ಬಿರ್ದ್ ದ ಕಂಬುಲ ತುಳು ಚಿತ್ರ ಬಿಡುಗಡೆ

ಮೂಡುಬಿದಿರೆ : ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿರ್ದ್‍ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಬಿರ್ದ್‍ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಿನೆಮಾವು ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ