Home Posts tagged V4News (Page 211)

ವಿಟ್ಲ : ಕಾಲು ಸಂಕಕ್ಕೆ ಬಿದ್ದು ವ್ಯಕ್ತಿ ಮೃತ

ವಿಟ್ಲ: ವ್ಯಕ್ತಿಯೊಬ್ಬರು ಕಾಲು ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.‌ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿಕೇಶವ ನಾಯ್ಕ ಎಂ (51) ಮೃತಪಟ್ಟವರು.‌ಕೇಶವ ನಾಯ್ಕ ಅವರು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿರುವ ತನ್ನ ಬಾಡಿಗೆ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ

ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ. ಜಿಲ್ಲೆಯ ಯಾತ್ರಾರ್ಥಿಗಳು ಸುರಕ್ಷಿತ

ಬಂಟ್ವಾಳ: ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ.ಜಿಲ್ಲೆಯ ವಿವಿಧ ತಾಲೂಕಿನ ಒಟ್ಟು ೨೦ ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್‌ನಲ್ಲಿ ಇರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ  ಕಳೆದ ಜಿಲೈ 4 ರಂದು 20 ಮಂದಿ ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದರು. ಅತಿಯಾದ ಮಳೆಗೆ ಭೂಕುಸಿತ  ಉಂಟಾದ ಹಿನ್ನಲೆಯಲ್ಲಿ ಜು.7 ರಿಂದ  ಯಾತ್ರೆಯನ್ನು

ಮಂಗಳೂರು: ಮನಪಾ ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಬಿಜೆಪಿ ನಾಯಕಿ ರಜನಿ ದುಗ್ಗಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮಂಗಳೂರು ಪಾಲಿಕೆಯ 8ನೇ ಹೊಸಬೆಟ್ಟು ವಾರ್ಡ್ ಹಾಗೂ ಮುಂಚೂರಿನ 2ನೇ ವಾರ್ಡ್‌ನ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಮಂಗಳೂರು ಪಾಲಿಕೆಯ ಮೇಯರ್ ಆಗಿ ಮಂಗಳೂರು ನಗರದ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರಿಗೆ ಓರ್ವ ಪುತ್ರ ಮೂವರು ಪುತ್ರಿಯರು ಹಾಗೂ ಬಂಧುಮಿತ್ರರನ್ನು

ಪಡುಬಿದ್ರಿ : ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ್ಕೊರೆತ ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.  ಅವರು ಪಡುಬಿದ್ರಿಯ ನಡಿಪಟ್ಣದಲ್ಲಿ ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮತ್ತು

ಉಳ್ಳಾಲ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ಕರ್ನಾಟಕ ವಿಧಾನಸಭೆ ಅಧಿವೇಶನದ ವಾರಾಂತ್ಯದ ಬಿಡುವಿನ ದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕರ್ನಾಟಕ ಹದಿನಾರನೇಯ ವಿಧಾನಸಭೆಯ ಅಧಿವೇಶನವು ಜುಲೈ ಮೂರರಂದು ಪ್ರಾರಂಭವಾಗಿದ್ದು, ಯು.ಟಿ ಖಾದರ್ ಸಭಾಧ್ಯಕ್ಷರಾದ ಬಳಿಕ ಪೂರ್ಣ ಪ್ರಮಾಣದ ಮೊದಲ ಅಧಿವೇಶನ ನಡೆಯುತ್ತಾ ಇದೆ. ಮೊದಲ ವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಬಜೆಟ್ ಮಂಡನೆ ನಡೆಸಿದ್ದು , ವಾರಾಂತ್ಯದ ಬಿಡುವು ನೀಡಲಾಗಿದೆ. ಈ

ಯುವ ವಾಹಿನಿ ಪುತ್ತೂರು ಘಟಕದಿಂದ ಬಿಲ್ಲವ ವಧು-ವರಾನ್ವೇಷಣೆ-2023

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ) ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬಿಲ್ಲವ ವಧು ವರಾನ್ವೇಷಣೆ-೨೦೨೩  ಪುತ್ತೂರಿನ ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಮದುವೆಯಾಗುವ ಯುವಕ ಯುವತಿಯರಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಯುವವಾಹಿನಿ ಘಟಕ ಮಾಡುತ್ತಿದೆ. ಈ

ಉಳ್ಳಾಲ: ಜಾನುವಾರುಗಳ ಮೇಲೆ ಹರಿದ ಕಾರು: ಮೂರು ಜಾನುವಾರು ಮೃತ್ಯು, ಓರ್ವನಿಗೆ ಗಾಯ

ಉಳ್ಳಾಲ: ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಚಲಿಸಿ ಮೂರು ಜಾನುವಾರುಗಳು ಮೃತಪಟ್ಟು, ವೈದ್ಯ ವಿದ್ಯಾರ್ಥಿ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಗಾಯಗೊಂಡವರು. ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ಜಾನುವಾರುಗಳಿಗೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಪರಿಣಾಮ ರಸ್ತೆ ಬದಿಯಲ್ಲಿ

ಜೈನ ಮುನಿಯ ಹತ್ಯೆ ಪ್ರಕರಣ: ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಅಭಯಚಂದ್ರ ಜೈನ್ ಆಗ್ರಹ

ಚಿಕ್ಕೋಡಿ ದಿಗಂಬರ ಜೈನ ಮುನಿಯ ಹತ್ಯೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಖಂಡಿಸಿ, ಹತ್ಯೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಜೈನ ಮುನಿಗಳು ತ್ಯಾಗಮಯಿಗಳು. ಸರ್ವಸ್ವವನ್ನು ತ್ಯಾಗ ಮಾಡಿ ಮುನಿ ದೀಕ್ಷೆಯನ್ನು ತೆಗೆದುಕೊಂಡವರು. ಮುನಿಗಳ ಆಪ್ತರೇ ಕೊಲೆ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿರುವುದು ಖಂಡನೀಯ. ಜೈನ ಮುನಿಗಳು ಅಹಿಂಸಾ ತತ್ವದ ಮುಖಾಂತರ ಬದುಕುವ ಶ್ರೇಷ್ಠ ಜೀವಿಗಳು. ಅಂತಹ ಶ್ರೇಷ್ಠ

ಸಿಎಎಸ್‍ಕೆ ಶತಮಾನೋತ್ಸವ ಟ್ರಸ್ಟ್ ಮತ್ತು ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ: 2023ನೇ ಸಾಲಿನ ಸ್ಕಾಲರ್‍ಶಿಪ್ ವಿತರಣಾ ಕಾರ್ಯಕ್ರಮ

1914ರಲ್ಲಿ ಸ್ಥಾಪನೆಯಾದ ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಹಿಂದಿನ ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಮೋಘ ಸೇವೆಯನ್ನು ನೀಡಿದೆ. ಸಿಎಎಸ್‍ಕೆ ಅನೇಕ ಪರಿಣಾಮಕಾರಿ ದತ್ತಿ ಮತ್ತು ಸಮುದಾಯ ಸೇವಾ ಯೋಜನೆಗಳನ್ನು ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸುತ್ತಿದೆ. ಸಿಎಎಸ್‍ಕೆ ಮೂರು ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಎಂಡೋಮೆಂಟ್ ಫಂಡ್‍ಗಳಿಂದ ಕೋವಿಡ್ ಬೆಂಬಲ

ಮಂಜೇಶ್ವರ : ತೋಟದ ಕೆಲಸಕ್ಕಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು || A MAN WHO WAS WORKING IN THE GARDEN COLLAPSED AND DIED

ಮಂಜೇಶ್ವರದ ವರ್ಕಾಡಿ ಕುಂಡಡ್ಕ ಎಂಬಲ್ಲಿ ರಬ್ಬರ್ ತೋಟದಲ್ಲಿ ಕೆಲಸಕ್ಕಿದ್ದ ತನಿಯ ಎಂಬ ವ್ಯಕ್ತಿ ದಿಢೀರ್ ಅಸೌಖ್ಯಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಜೀರ್ ಪಳ್ಳ ಟೌನ್ ಸೋಶಿಯಲ್ ವರ್ಕ್ ತಂಡದ ಅಧ್ಯಕ್ಷ ಮುಸ್ತಫಾ ಕಡಂಬಾರ್ ರವರ ನೇತೃತ್ವದ ಕಾರ್ಯಕರ್ತರು ವರ್ಕಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಳಿಕ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ ಕಾರ್ಯಕರ್ತರು ಕಾಞಂಗಾಡಿನಲ್ಲಿರುವ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ