Home Posts tagged V4News (Page 332)

ಮಸ್ಕತ್‍ನಲ್ಲಿ ಮೇ 12 ರಂದು “ಶಿವದೂತೆ ಗುಳಿಗೆ” ಪ್ರದರ್ಶನ

ಮಸ್ಕತ್: ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸಿದ “ಶಿವದೂತೆ ಗುಳಿಗೆ” ನಾಟಕವು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ

ಬೈಂದೂರಿನ ನಾಗೂರಿನಲ್ಲಿ ಹಾರ್ಡ್‍ವೇರ್ ಶಾಪ್‍ಗೆ ಆಕಸ್ಮಿಕ ಬೆಂಕಿ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿ 66 ರ ಮಸೀದಿ ಎದುರು ಉರ್ದು ಶಾಲೆ ಸಮೀಪವಿರುವ ರವಿರಾಜ್ ಶೆಟ್ಟಿ ಚೇರ್ಕಾಡಿ ಅವರ ಒಡೆತನದ ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ. ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಕಸ್ಮಾತ್ ಬೆಂಕಿ ತಗುಲಿದೆ ಬೆಂಕಿ ಕೆನ್ನಾಲಿಗೆ

ಹಿರಿಯ ನಾಗರಿಕರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರ

ಸೇವಾಭಾರತಿ(ರಿ),ಮಂಗಳೂರು ಇದರ ಸೇವಾ ಪ್ರಕಲ್ಪವಾದ `ಅನಂತಸೌಖ್ಯ” ಹಾಗೂ ಕೆ.ಎಂ.ಸಿ,ಆಸ್ಪತ್ರೆ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಮಂಗಳೂರು ಹಿರಿಯ ನಾಗರಿಕರ ಸಂಘ ಇವರ ಸಹಯೋಗದೊಂದಿಗೆ, ಹಿರಿಯ ನಾಗರಿಕರಿಗಾಗಿ ಉಚಿತ“ಹೃದಯತಪಾಸಣಾ ಶಿಬಿರ”ವು, ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ವಠಾರದಲ್ಲಿ ನಡೆಯಿತು ಶಿಬಿರವನ್ನು, ಡಾ.ಪದ್ಮನಾಭಕಾಮತ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಹೃದಯಚಿಕಿತ್ಸಾ ವಿಭಾಗ,

ಭಾರತಕ್ಕೆ ಎರಡು ಆಸ್ಕರ್: ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ, RRR ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪಾತ್ರವಾಗಿದೆ.  ಮತ್ತೊಂದು, ಎಸ್.ಎಸ್.ರಾಜಮೌಳಿ ಅವರ RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ‘ದಿ

ನಿಮ್ಮ ಆಶೆಯೇ ನನ್ನ ಆಶೆ- ಕ್ಷೇತ್ರದ ಜನತೆಗೆ ಕೋಟ್ಯಾನ್‌ ಅಭಯ

ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ

ಕಾರ್ಕಳ ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ

ಕಾರ್ಕಳ, ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದ್ದು, ಶ್ರೀ ಮುಖ್ಯ ಪ್ರಾಣ ದೇವರ ಅಷ್ಟಬಂಧ ಸಹಿತ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪ್ರಸನ್ನ ಪೂಜೆ,108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ , ಪ್ರಸನ್ನ ಪೂಜೆ, ನ್ಯಾಸ ಪೂಜೆ,ಚಂಡಿಕಾ ಯಾಗ, ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ನ ಬಿಂಬ ಶುದ್ದಿ ಪ್ರಕ್ರಿಯೆ, ಬಿಂಬ ಶುದ್ದಿ ಹೋಮ ಗಳು ಮನ್ಯುಸುಕ್ತ ಯಾಗ, ಕಾಳಿ ಗಾಯತ್ರಿ ಮಂತ್ರ ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ಶ್ರೀ ಮಾರಿಯಮ್ಮ

ಉಡುಪಿ ನಗರದೊಳಗೆ ಸಂಚರಿಸುವ ಆಟೋ ಚಾಲಕರ ಸಮಸ್ಯೆ ಬಗೆ ಹರಿಸದಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಉಡುಪಿ ಶಾಸಕ ರಘುಪತಿ ಭಟ್ ವಿರುದ್ದ ಅಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ನಗರದ ಒಳಗಡೆ ಓಡಾಡುವ ಅಟೋಚಾಲಕರ ಮಧ್ಯೆ ಬಿರುಕು ಮೂಡಿಸಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಅರೋಪಗಳನ್ನು ಅಟೋ ಚಾಲಕರು ಮಾಡಿದ್ದಾರೆ.ಅಷ್ಟೇ ಅಲ್ಲ ನಗರದೊಳಗಡೆ ಸಂಚರಿಸುವ ಅಟೋ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ಅಟೊ ಚಾಲಕರು ನೀಡಿದ್ದಾರೆ. ನಿಯಮದಂತೆ ನಗರದಲ್ಲಿ ಸಂಚರಿಸುವ ಅಟೋಗಳು ರೋಟೆಶನ್ ಮಾದರಿಯಲ್ಲಿ

ಬಾಲಕಿ ಸಾವಿನ ಬೆನ್ನಲ್ಲೆ ಹೆದ್ದಾರಿ ದುರಾವಸ್ಥೆಗೆ ಮತ್ತೊಂದು ಬಲಿ

ಕಾಪುವಿನಲ್ಲಿ ಹೆದ್ದಾರಿ ದುರವಸ್ಥೆಗೆ ಬಾಲಕಿ ಬಲಿಯಾದ ಸ್ಥಳದಲ್ಲೇ ಮತ್ತೊರ್ವ ಯುವಕ ಬಲಿಯಾಗುವ ಮೂಲಕ ಹೆದ್ದಾರಿ ಪ್ರಯಾಣ ಕಠಿಣವಾಗುತ್ತಿದೆ.ಬಾಲಕಿ ಸಾವಿನ ಕಹಿ ನೆನಪು ಮಾಸುವ ಮೊದಲೇ ಅದೇ ಸ್ಥಳದಲ್ಲಿ ಆಂಬುಲೆನ್ಸ್ ಇನೋವ ಕಾರು ಬೈಕ್ ಸವಾರನಿಗೆ ಡಿಕ್ಕಿಯಾಗುವ ಮೂಲಕ ಯುವಕ ದಾರುಣಾವಾಗಿ ಮೃತಪಟ್ಟಿದ್ದಾನೆ. ಮೃತ ಯುವಕ ಉಚ್ಚಿಲ ನಿವಾಸಿ ರೀತೇಶ್ ದೇವಾಡಿಗ(25) ಈತ ವಾದ್ಯ ನುಡಿಸುವ ಕಾಯಕವನ್ನು ನಡೆಸುತ್ತಿದ್ದ ಎನ್ನಲಾಗಿದ್ದು, ಈತ ಉಡುಪಿ ಕಡೆಗೆ ಹೆದ್ದಾರಿ ಮೂಲಕ

ಸಾಹಿತ್ಯ ಅಕಾಡೆಮಿ ದೆಹಲಿ ಕೊಂಕಣಿ ಭಾಷಾ ಮುಖ್ಯಸ್ಥರಾಗಿ ಮಂಗಳೂರು ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ

ಕೊಂಕಣಿ ಕವಿ, ಕಾರ್ಯಕರ್ತ ಹಾಗು ಕೊಂಕಣಿ ಕಾವ್ಯದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಇದರ ಸ್ಥಾಪಕ ಕರಾವಳಿ ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿ, ದೆಹಲಿಯಲ್ಲಿ ಕೊಂಕಣಿ ಭಾಷೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇಂದು ದಿನಾಂಕ 11 ಮಾರ್ಚ್ 2023 ರಂದು, ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿ ಜನರಲ್ ಕಾವ್ನ್‌ಸಿಲ್