Home Posts tagged #v4newskarnataka (Page 100)

ಮಂಜೇಶ್ವರದಲ್ಲಿ ಸಂಭ್ರಮದ ಬೀಚ್ ಪೆಸ್ಟ್ ಗೆ ಚಾಲನೆ

ಮಂಜೇಶ್ವರ: ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ನಲ್ಲಿ ಸಂಭ್ರಮದ ಬೀಚ್ ಫೆಸ್ಟ್ ಗೆ ಚಾಲನೆ ದೊರಕಿತು. ಇನ್ನು ಮುಂದಿನ ಒಂದು ತಿಂಗಳಿನಲ್ಲಿ ನಡೆಯಲಿರುವ ಬೀಚ್ ಫೆಸ್ಟ್ ಮಂಜೇಶ್ವರದ ಬೀಚ್‍ನಲ್ಲಿ ಉತ್ಸವದ ಸಂಭ್ರಮವಾಗಲಿದೆ. ಈ ಸಲದ

ಪುತ್ತೂರು : ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ

ಪುತ್ತೂರು: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದ ಮೇಲೆ ದಾಳಿ ಮಾಡಿದೆ. ತಹಸೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ

ಕೊರೊನಾಕ್ಕೆ ರಮ್ ಮದ್ದು ಎಂದಿದ್ದ ಕೌನ್ಸಿಲರ್ ರವಿಚಂದ್ರ ಗಟ್ಟಿ ಪಕ್ಷದಿಂದ ಅಮಾನತು

ಉಳ್ಳಾಲ: `ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಸುದ್ಧಿಯಾದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಆದೇಶ ಹೊರಡಿಸಿದೆ. ಮೊನ್ನೆ ನಡೆದ

ಗುರುಪುರ ಕೈಕಂಬ ಇಳಿಜಾರು ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ!!

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ,ಚಾಲಕರಿಬ್ಬರು ಮೃತಪಟ್ಟ ಘಟನೆಯೊಂದು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಳಿಜಾರು ಪ್ರದೇಶದಲ್ಲಿ ನಡೆದಿದೆ. ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು

ಕಾರ್ಕಳ : ಕಾಮಗಾರಿ ವೇಳೆ ಪುರಾತನ ಫಿರಂಗಿ ಮದ್ದು ಗುಂಡು ಪತ್ತೆ

ಕಾರ್ಕಳ ದ ಹೃದಯ ಭಾಗದಲ್ಲಿರುವ ಕೋಟೆಕಣಿಯೆಂಬಲ್ಲಿ ಖಾಸಗಿ ಸ್ಥಳದಲ್ಲಿ ಕಾಮಗಾರಿಕೆಗೆ ಎಂದು ನೆಲ ಅಗಿಯುತ್ತಿದ್ದ ವೇಳೆ ಪುರಾತನ ಕಾಲದಲ್ಲಿ ಫಿರಂಗಿಗಳಿಗೆ ಬಳಸುತ್ತಿದ್ದ ನೂರಾರು ಕಲ್ಲಿನ ಮದ್ದು ಗುಂಡುಗಳು ಪತ್ತೆಯಾಗಿವೆ. ಈ ಸ್ಥಳದಲ್ಲಿ ಕೆಲವು ಸಮಯಗಳಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವೇಳೆ ಮದ್ದು ಗುಂಡುಗಳು ಶನಿವಾರ ಕಾಮಗಾರಿಗೆ ವೇಳೆ ಇವುಗಳು ಮದ್ದು ಗುಂಡುಗಳು ಕಂಡುಬಂದಿವೆ. ಪುರಾತನ ಕಾಲದಿಂದಲೂ ರಾಜರುಗಳ ಕೋಟೆಯಾಗಿತ್ತು ಮೈಸೂರಿನ ಟಿಪ್ಪು ಸುಲ್ತಾನ್

ಸಂಗೀತ ವಿದ್ವಾನ್ ಶ್ರೀ ಎಂ ನಾರಾಯಣ ಅವರಿಗೆ ಈ ವರ್ಷದ ಕದ್ರಿ ಸಂಗೀತ ಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ.

ಡಾ|| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ) ಆಶ್ರಯದಲ್ಲಿ ಇದೇ ಡಿಸೆಂಬರ್ 6 ರಂದು ಪದ್ಮಶ್ರೀ ಡಾ|| ಕದ್ರಿ ಗೋಪಾಲನಾಥ್ ಅವರ 73 ನೇ ಜನುಮ ಜಯಂತಿಯ ಪ್ರಯುಕ್ತ ಕದ್ರಿ ಸಂಗೀತ ಸೌರಭ 2022 ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಕದ್ರಿ ಸಂಗೀತ ಸೌರಭ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಶ್ರೀ ಎಂ ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ. ಮೂಡಬಿದ್ರೆಯಲ್ಲಿ ಜನಿಸಿದ ಶ್ರೀ ಎಂ ನಾರಾಯಣ ಅವರು ಒಬ್ಬ ಅಪ್ರತಿಮ ಕಲಾವಿದರು. ಪ್ರಸ್ತುತ ಸುರತ್ಕಲ್

ಕಟೀಲು ದೇವಸ್ಥಾನಕ್ಕೆ ನಟ ಸುದೀಪ್ ಭೇಟಿ, ದೇವಿಯ ದರ್ಶನ ಪಡೆದ ಕರುನಾಡ ಚಕ್ರವರ್ತಿ

ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪತ್ನಿ ಪ್ರೀಯಾ ಜೊತೆ ಆಗಮಿಸಿದರು.ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿರುವ ನಟ ಸುದೀಪ್ ದಂಪತಿಗಳು ಕಟೀಲು ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು, ದೇವಸ್ಥಾನದ ವತಿಯಿಂದ ಸುದೀಪ್ ಗೆ ಆತ್ಮೀಯ ಗೌರವ ಸಮರ್ಪಣೆ ಮಾಡಲಾಯಿತು

ಉಳ್ಳಾಲ : ತೀಯಾ ಪ್ರಮುಖರ ಸಮಾಲೋಚನಾ ಸಭೆ

ಭಾರತೀಯ ತೀಯಾ ಸಮಾಜ ಉಳ್ಳಾಲ ಕ್ಷೇತ್ರ ಸಮಿತಿ ನೇತೃತ್ವದಲ್ಲಿ, ತೀಯಾ ಪ್ರಮುಖರ ಸಮಾಲೋಚನಾ ಸಭೆ, ಉಚ್ಚಿಲ ಸಂಕೊಳಿಗೆ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ, ರಾಜ್ಯ ವಿರೋಧ ಪಕ್ಷ ಉಪನಾಯಕ, ಯು.ಟಿ. ಖಾದರ್ ರವರಿಗೆ ತೀಯಾ ಸಮಾಜದ ವತಿಯಿಂದ, ಸಮುದಾಯ ಭವನ ಸೇರಿದಂತೆ, 3 ಪ್ರಮುಖ ಬೇಡಿಕೆಗಳನ್ನು ಪೂರೈಸುವಂತೆ ಮನವಿಯನ್ನು ನೀಡಲಾಯಿತು. ಮನವಿಗೆ ಸ್ಪಂದಿಸಿ ಮಾತನಾನಾಡಿದ ಯು. ಟಿ. ಖಾದರ್, ನಾನು ಈವತ್ತು

ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತು ತಜ್ಞರ ಸಭೆ : ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರಿನಲ್ಲಿ ಸ್ಥಳ ಭೇಟಿ

ಮಂಗಳೂರು :- ನಗರ ವಾಸ್ತುಶಿಲ್ಪಿಗಳು, ನಗರ ಯೋಜಕರು, ತಜ್ಞರು, ವಿನ್ಯಾಸಕರು, ಮಾನವ ಭೂಗೋಳ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ಸ್ಥಳೀಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರು ನಗರದಲ್ಲಿ ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತಂತೆ ಸುರತ್ಕಲ್ ನಲ್ಲಿರುವ ನಿರ್ಮಿತಿ ಕೇಂದ್ರದ ಆವರಣದಲ್ಲಿ ಸಭೆ ಹಾಗೂ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ 65ಕ್ಕೂ ಹೆಚ್ಚು

ಜಿಲ್ಲಾ ಮಟ್ಟದ ಸ್ವಚ್ಛ ಶನಿವಾರ ಅಭಿಯಾನಕ್ಕೆ ಚಾಲನೆ

-ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಮಟ್ಟದ ಗ್ರಾಮ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಶಾಲೆ, ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ ಸಹಕಾರ ದಲ್ಲಿ ಡಿ.3ರ ಶನಿವಾರ ಜಿಲ್ಲಾ ಮಟ್ಟದ ಸ್ವಚ್ಛ ಶನಿವಾರ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಯು.ಟಿ. ಖಾದರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ