ಸೇವಾಭಾರತಿ (ರಿ.) ಬೆಳ್ತಂಗಡಿ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವರ ಜಂಟಿ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 08, 2022 ರ ಗುರುವಾರದಂದು, ಉಡುಪಿಯ ದಿವ್ಯಾಂಗರಿಂದ ಉಡುಪಿ ಗಾಂಧಿ ಸರ್ಕಲ್‍ನಿಂದ ಪುರಭವನದ ವರೆಗೆ ಗಾಲಿಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ದಿವ್ಯಾಂಗರು ತಮ್ಮ ವೀಲ್ ಚೇರ್
ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ ಶ್ರೀಕಾಂತ್ ಹೆಗಡೆ 641, ಸೋಹನ್ ಎಸ್ ನೀಲಕರಿ 598, ಸುದೀಪ್ ಅಸಂಗಿಹಾಲ್ 552, ಹಾಸನದ ವಿಕಾಸ್ ಗೌಡ ಎಂ 608 ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್ ಪದವಿ
ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಕುಂಜಿಬೆಟ್ಟು, ಉಡುಪಿ ಮತ್ತು ಚಿನ್ಮಯ ಮಿಷನ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಸೆಪ್ಟೆಂಬರ್ ೧೧, ೨೦೨೨ ರಿಂದ ಸೆಪ್ಟೆಂಬರ್ ೧೭, ೨೦೨೨ ರ ತನಕ ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಮಂಟಪದಲ್ಲಿ ಸುಂದರಕಾಂಡ ಈ ವಿಷಯದಲ್ಲಿ ಇಂಗ್ಲೀಷ್ ಭಾಷೆಯಲ್ಲಿ, ಚಿನ್ಮಯ ಮಿಷನ್ ಮಂಗಳೂರಿನ ಸ್ವಾಮಿ ಅಪರಾಜಿತಾನಂದ ಇವರಿಂದ ಸಂಜೆ ೦೬:೦೦ ರಿಂದ ೦೭:೩೦ ರ ವರೆಗೆ ಪ್ರವಚನ ನಡೆಯಲಿದೆ.
ಯಾವ ಮಗುವಿನಲ್ಲೂ ಬೇಧಭಾವ ಮಾಡದೆ ನಮ್ಮ ಮಗುವಿನಂತೆ ಪ್ರೀತಿ ತೋರಿಸಿ ಝೀರೋದಿಂದ ಹೀರೋ ಮಾಡುವ ಮಹತ್ತರ ಜವಾಬ್ಧಾರಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಮೇಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹದಲ್ಲಿ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ನಡೆದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ
ಮಂಗಳೂರು,ಸೆ.09(ಕ.ವಾ):- ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ.ಸೆ.9ರ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 23ನೇ ಅವಧಿಯ ಚುನಾವಣೆ ನಡೆಯಿತು.ಚುನಾವಣಾಧಿಕಾರಿಯಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಚುನಾವಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೂತನ ಮೇಯರ್ ಹಾಗೂ ಉಪ ಮೇಯರ್ ಗಳ ಹೆಸರನ್ನು ಘೋಷಿಸಿದರು. ಶಾಸಕರಾದ ಭರತ್
ವಿಶ್ವ ಫಿಸಿಯೋಥೆರಪಿ ದಿನಾಚರಣೆ ಅಂಗವಾಗಿ ಸಂತ ಅಲೋಷಿಯಸ್ ಗೊನ್ಝಾಗ ಶಾಲೆಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಪಿ ವಿಭಾಗ, ಮಂಗಳೂರು ರೌಂಡ್ ಟೇಬಲ್ 115 ಹಾಗೂ ಮಂಗಳೂರು ಲೇಡೀಸ್ ಸರ್ಕಲ್ 82 ಇವರ ಸಹಯೋಗದಿಂದ 1 ರಿಂದ 10 ತರಗತಿಯ ಮಕ್ಕಳಿಗಾಗಿ ಆರೋಗ್ಯ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ ರಿಂಕು ರೋಷನ್ ಮಾತನಾಡಿ ಉತ್ತಮ ಆಹಾರ ಸೇವನೆ,
ಪುತ್ತೂರು: ಸೆ.10ರ ಶನಿವಾರದಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನಲ್ಲಿ ವಾಹನ ಜಾಥಾ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಇವುಗಳ ಆಶ್ರಯದಲ್ಲಿ ನಡೆದ ವಾಹನ ಜಾಥಾಕ್ಕೆ ನಗರದ ದರ್ಬೆ ಬೈಪಾಸ್‍ನ ಫಾ. ಪತ್ರಾವೋ ವೃತ್ತದಲ್ಲಿ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ.) ಉರ್ವಸ್ಟೋರ್, ಮಂಗಳೂರು ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯ ಮೆಡಿಕಲ್ ಕಾಲೇಜು, ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದಲ್ಲಿ ಮಂಗಳೂರಿನ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವನಿತಾಂಗಂಣದಲ್ಲಿ ಸೆ.11ರಂದು ಪೂರ್ವಾಹ್ನ 9ರಿಂದ ಅಪರಾಹ್ನ 3ರ ರವೆರೆಗೆ ಉಚಿತಾ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ ಹಾಗೂ ರಕ್ತದ ವಿಂಗಡನೆ, ಮಧುಮೇಹ, ಹಿಮೋಗ್ಲೋಬಿನ್ ಪರೀಕ್ಷೆ, ಸ್ತ್ರೀಯರ ಮಾಮೊಗ್ರಾಫಿ,
ಭದ್ರಾವತಿ : ಭದ್ರಾವತಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವು ಕಾಲ ಕ್ರಮೇಣ ಶಿತಲಗೊಳ್ಳುತ್ತಿದ್ದು, ಇದನ್ನು ಸರಿಪಡಿಸಿ ಜೀರ್ಣೋದ್ಧಾರ ಗೊಳಿಸುವ ನಿಟ್ಟಿನಲ್ಲಿಸಂಸದರಾದ ಬಿ. ವೈ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ದೇವಸ್ಥಾನ ಅಭಿವೃದ್ಧಿ ಮತ್ತು ಇತರ ಕಾಮಗಾರಿಗೆ ಕೇಂದ್ರದ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ಅನುದಾನವನ್ನು ಮನವಿ ಮಾಡಿದ್ದಾರೆ. ಇಂದು ಸಂಸದರಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು
ಕುಂದಾಪುರ : ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣಕ್ಕೆ ಮನನೊಂದು ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿಕೊಂಡ ನಗರದ ವಡೇರಹೋಬಳಿ ಜೆಎಲ್‍ಬಿ ರಸ್ತೆಯ ನಿವಾಸಿ ಸಾಯೀಶ್ ಶೆಟ್ಟಿ ಮೃತದೇಹ ಶುಕ್ರವಾರ ಬೆಳಿಗ್ಗೆ ನಾವುಂದದ ಸಮುದ್ರತೀರದಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಸಾಯೀಶ್ ಶೆಟ್ಟಿ ಸೈಕಲ್‍ನಲ್ಲಿ ಹೇರಿಕುದ್ರು ಸೇತುವೆಯ ಮೇಲೆ ಬಂದು, ಬಳಿಕ ಸೈಕಲ್ ಹಾಗೂ ಮೊಬೈಲ್ ಅನ್ನು ಮೇಲೆ




























