Home Posts tagged #v4newskarnataka (Page 157)

ಸುಳ್ಯದ ಅರಮನೆ ಗಯಕ್ಕೆ ಬೇಕಾಗಿದೆ ತೂಗು ಸೇತುವೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆ ಗಯ ಎಂಬಲ್ಲಿ ತೂಗು ಸೇತುವೆ ಮುರಿದು ಹೋಗಿದ್ದು ಸಂಚಾರಕ್ಕೆ ತೊಡಕುಂಟಾಗಿ ಅಲ್ಲಿನ ಜನತೆ ಸಂಕಷ್ಟಪಡುತ್ತಿದ್ದಾರೆ. 30 ವರ್ಷಗಳಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಎಷ್ಟು ಕೇಳಿದರು ಸ್ಪಂದನೆ ಇನ್ನೂ ಸಿಕ್ಕಿಲ್ಲ.

ಊರಿನ ಚಿತ್ರಣ ಬದಲಿಸುವ ಸೇತುವೆಗಳು….

ನದಿಗೆ ಅಡ್ಡಲಾಗಿ ಕಟ್ಟುವ ಸೇತುವೆಯೊಂದು ಹೇಗೆ ಊರೊಂದರ ಚಿತ್ರಣವನ್ನೇ ಬದಲಿಸುತ್ತದೆನ್ನುವುದನ್ನು ನಮಗೆ ಅನೇಕ ಬಾರಿ ಊಹಿಸಲೂ ಸಾಧ್ಯವಾಗುವುದಿಲ್ಲ.ಆ ಬದಲಾವಣೆಯಲ್ಲಿ ನಾವೂ ಬದಲಾಗಿ ಬಿಡುತ್ತೇವೆ. ಇಂತಹ ಬದಲಾವಣೆಗಳಾಗುತ್ತವೆ ಎಂದು ತಿಳಿದು ನಾವು ಥ್ರಿಲ್ ಆಗುತ್ತೇವೆ. ಆದರೆ ಬದಲಾವಣೆಗಳು ಘಟಿಸಿ ಊರಿನ ಚಿತ್ರಣ ಬದಲಾದ ಬಳಿಕ ನಮ್ಮೂರು ಹೀಗಿತ್ತು ಎನ್ನುವುದನ್ನು ನಾವು ಬಲು ಬೇಗ ಮರೆತುಬಿಡುತ್ತೇವೆ.ಹಿಂದಿನ ಚಿತ್ರಣಗಳು ಕಾಲಗರ್ಭದಲ್ಲಿ ಅಡಗುತ್ತಿದ್ದಂತೆಯೇ ನಮ್ಮ

ಒಬ್ಬಂಟಿ ವೃದ್ಧೆಯ ಕೊಲೆ ದರೋಡೆ ಪ್ರಕರಣದ ಆರೋಪಿ ವೃದ್ಧೆಯ ಸಂಬಂಧಿಕ ಅಶೋಕ್ ಬಂಧನ

ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ನಡೆದಿದೆ. ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ನಿವಾಸಿ ಅಶೋಕ್ (28) ವೃದ್ಧೆಯನ್ನು ಕೊಲೆಗೈದ ಆರೋಪಿ. ಅಶೋಕ್ ಕೊಲೆಯಾದ ಅಕ್ಕು ಅವರ ಪುತ್ರ ಡೀಕಯ್ಯ ಅವರ ಪತ್ನಿಯ ಸಹೋದರಿಯ ಪುತ್ರನಾಗಿದ್ದ. ಈತ ಐಸ್ ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದ.

ಬೆಳ್ತಂಗಡಿ: ಹಲ್ಲೆ ತಡೆಯಲು ಮುಂದಾದ ವ್ಯಕ್ತಿಯೇ ಸಾವು

ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಪರಾರಿ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಅವರು ಯುವಕರ ತಂಡದಿಂದ ಹಲ್ಲೆಗೊಳಗಾಗಿ ಮೃತಪಟ್ಟವರು. ಜಾರಪ್ಪ ನಾಯ್ಕ್ ಅವರ

ಕಾಪು : ರಸ್ತೆ ಹೊಂಡಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಡ ಬಿದ್ದ ಪರಿಣಾಮ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ. ಇಂದು ಹೊಂಡ ತಪ್ಪಿಸಲು ಹೋಗಿ ಕಾರೊಂದು ಡಿವೈಡರ್ ಏರಿ ನಿಂತ ಘಟನೆ ಕಾಪುವಿನಲ್ಲಿ ನಡೆದಿದೆ. ಕಾರೊಂದು ರಸ್ತೆಯ ಹೊಂಡಕ್ಕೆ ಬಿದ್ದು, ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಕಾರು ಚಾಲಕಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಮೇಲಿದ್ದ ಹೊಂಡದಲ್ಲಿ ನೀರು ತುಂಬಿ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದೆ.

ಕಡಲ್ಕೊರೆತ, ಸೌಪರ್ಣಿಕಾ ನದಿ ನೆರೆಹಾವಳಿ : ಸಂಕಷ್ಟ ನಿವಾರಣೆಗೆ ವರಾಹ ದೇವರಲ್ಲಿ ಪ್ರಾರ್ಥನೆ

ಬೈಂದೂರು: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ರಕ್ಕಸ ಅಲೆಗಳ ಕಡಲ್ಕೊರೆತ ಸೌಪರ್ಣಿಕಾ ನದಿಯ ನೆರೆಹಾವಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗಿ ಸಾಕಷ್ಟು ಮುಗ್ಧ ಜೀವಗಳು ಮತ್ತು ಜಾನುವಾರುಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಅಪಘಾತಗಳು ಹೆಚ್ಚುತ್ತಿರುವುದರಿಂದ ಜನರು ಭೀತರಾಗಿದ್ದು ಸಂಕಷ್ಟದ ನಿವಾರಣೆಗೆ ಜುಲೈ 28ರಂದು ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಮಾರಸ್ವಾಮಿ ವರಾಹ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರ

ರೈಲ್ವೇ ಗೋಡೌನ್‍ನಿಂದ ಲಕ್ಷಾಂತರ ಬೆಲೆಯ ತಂತಿ ಕಳವು ,ತಂತಿ ಸಾಗಾಟ ನಡೆಸುತ್ತಿದ್ದ ಟೆಂಪೋ ಪಲ್ಟಿ

ಉಳ್ಳಾಲ: ರೈಲ್ವೇ ಇಲಾಖೆ ಗೋಡೌನ್ನಲ್ಲಿರಿಸಲಾದ ಲಕ್ಷಾಂತರ ಬೆಲೆಬಾಳುವ ವಿದ್ಯುತ್ ತಂತಿ ಕಳವು ನಡೆಸಿ ಪರಾರಿಯಾಗುತ್ತಿದ್ದ ಟೆಂಪೋವಾಹನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿಬಿದ್ದು ಇಬ್ಬರು ಮಹಿಳೆಯರು ಹಾಗೂ ಓರ್ವ ಯುವಕ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಟೆಂಪೋ ಚಾಲಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ತಮಿಳುನಾಡು ಮೂಲದವರಾದ

ಮಂಗಳೂರು : ಸ್ಮಾರ್ಟ್‍ಸಿಟಿಯ ಹೊಂಡ ಮುಚ್ಚಿದ ಸಂಚಾರ ಪೊಲೀಸ್

ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ರಾವ್ & ರಾವ್ ಸರ್ಕಲ್‍ನಲ್ಲಿ ನಡೆದ ಕಾಮಗಾರಿಯ ಮಧ್ಯೆಯೂ ಕಾಣಿಸಿಕೊಂಡ ಹೊಂಡವನ್ನು ಕರ್ತವ್ಯ ನಿರತ ಸಂಚಾರ ಪೊಲೀಸ್ ಕಾನ್‍ಸ್ಟೇಬಲ್ ಶರಣಪ್ಪ ಸಾರ್ವಜನಿಕರ ಸಹಕಾರದಲ್ಲಿ ಕಲ್ಲು ಹಾಕಿ ಮುಚ್ಚಿ ಗಮನ ಸೆಳೆದಿದ್ದಾರೆ. ಕೆಲವು ಸಮಯದಿಂದ ಈ ಪ್ರಮುಖ ರಸ್ತೆಯಲ್ಲಿ ಹೊಂಡ ಉಂಟಾಗಿತ್ತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಸಾಕಷ್ಟು ತೊಂದರೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ಶರಣಪ್ಪ

ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ವಡ್ಯಾ ಸಂಪರ್ಕ ರಸ್ತೆ ಕಡಿತ

ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತಡ್ಕ ವಡ್ಯಾ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಮರ ಬಿದ್ದು ಸಂಪೂರ್ಣ ಸಾರ್ವಜನಿಕರಿಗೆ ಸಂಪರ್ಕ ಕಡಿತಗೊಂಡಿದೆ ಇದಕ್ಕೆ ಸುಮಾರು 10 ದಿನದಿಂದ ಇಲ್ಲಿಯ ಶಾಲಾ ಮಕ್ಕಳಿ ಗೆ ಸಾರ್ವಜನಿಕರಿಗೆ ತೊಂದರೆ ಈಡಾಗಿದ್ದು ಯಾವುದೇ ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳೂ ಕೂಡ ಭೇಟಿ ನೀಡದೆ ಜನಪ್ರತಿನಿಧಿಯು ಕೂಡ ಭೇಟಿ ನೀಡದೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಸದ್ಯ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸಂಪರ್ಕ

ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಗೆ ಭಾಜನವಾದ `ಜೀಟಿಗೆ’

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ತುಳುನಾಡಿನ ದೈವಾರಾಧನೆ ಮತ್ತು ಅದರ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ `ಜೀಟಿಗೆ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಮಲಯಾಳಂ ನಿರ್ದೇಶಕ ಜಯರಾಜ್ ಜತೆ ಪಳಗಿದ ಸಂತೋಷ್ ಮಾಡ ನಿರ್ದೇಶನದ ಚೊಚ್ಚಲ ಚಿತ್ರವನ್ನು ನಿರ್ಮಾಣ ಮಾಡಿರುವುದು ಅರುಣ್ ರೈ ತೋಡಾರ್. ಪರಂಪರಾಗತವಾಗಿ ದೈವದ ನರ್ತನ ಸೇವೆ ಮಾಡುತ್ತ ಬಂದಿರುವ ತನಿಯಪ್ಪ, ತನ್ನ ಮಗನಿಗೆ ಈ ಚಾಕರಿ ಬೇಡ ಎಂದು ವಿದ್ಯಾಭ್ಯಾಸ