Home Posts tagged #v4newskarnataka (Page 2)

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಶ್ರೀ ಸುಂದರ ಗೌಡ ಅವರಿಗೆ ಎವಿಜಿ ಶಾಲೆಯಲ್ಲಿ ಅಭಿನಂದನೆ

ಪುತ್ತೂರು: ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಶ್ರೀ ಸುಂದರ ಗೌಡ ಅವರು ಪಧೋನ್ನತಿ ಹೊಂದಿ ರಾಮನಗರ ಜಿಲ್ಲೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ತೆರಳುತ್ತಿರುವ ಈ ಸಂದರ್ಭದಲ್ಲಿ ಪುತ್ತೂರು ಬನ್ನೂರು ಕೃಷ್ಣನಗರದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಭಿನಂದಿಸಿ

ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿದೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ

ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಲೋಡುಗಟ್ಟಲೆ ತ್ಯಾಜ್ಯ

ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವುದಿನದಿಂದ ಸುರಿಯುವ ಬಾರೀ ಮಳೆಯಿಂದ ಪ್ರವಾಹದಿಂದ ತುಂಬಿಹರಿಯುವ ನದಿಯಲ್ಲಿ ಬಾರಕೂರು ಬಳಿಯ ಸೀತಾನದಿಯ ನೀಲಾವರ ಕಿಂಡಿ ಅಣೆಕಟ್ಟಿನಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳು ಸಿಲಿಕಿಕೊಂಡು ನದಿ ತೀರದಲ್ಲಿ ಕೃತಕ ನೆರೆ ಉಂಟಾಗಿದೆ. ಪೂರ್ವ ಭಾಗವಾದ ಕೊಕ್ಕರ್ಣೆ ,ಎಳ್ಳಂಪಳ್ಳಿ, ಕರ್ದಾಡಿ, ಕೂರಾಡಿ ಭಾಗದಲ್ಲಿ ಸೇತುವೆಯಿಂದ ನದಿಗೆ ಎಸೆಯುವಖಾಲಿ ಬಾಟಲಿಗಳು ಬೃಹತ್ ಮರದದಿಮ್ಮಿಗಳು ಸತ್ತು ಬಿದ್ದ ಪ್ರಾಣಿಗಳು ಇಲ್ಲಿನ

ರಸ್ತೆ ಕಾಮಗಾರಿಗೆ ಸ್ಥಳೀಯರ ಆಗ್ರಹ

ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಪಕ್ಷಿಕೆರೆಯಿಂದ ಪಂಜ ಮೂಲಕ ಸುರತ್ಕಲ್ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯ ಕೆಮ್ರಾಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ದಿ.ಶಾಂತರಾಮ ಶೆಟ್ಟಿ ಶಾಲೆಯ ಬಳಿ ತೀವ್ರ ಹದಗೆಟ್ಟಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ರೋಡ್, ತೋಡಾಗಿ ಪರಿಣಮಿಸಿದ್ದು ಸ್ಥಳೀಯರು ಸಂಬಂಧಪಟ್ಟವರಿಗೆ ಹಿಡಿ ಶಾಪ

ಬೆಂಗಳೂರು ಸಹಿತ ರಾಜ್ಯದಲ್ಲಿ ಹೆಚ್ಚಿದ ಡೆಂಗಿ

ಭಾನುವಾರ 954 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 159 ಮಂದಿ ಡೆಂಗಿ ಹೊಂದಿರುವುದು ದೃಢ ಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ. ಡೆಂಗಿ ಬಾಧಿತರಲ್ಲಿ ಎಲ್ಲ ಪ್ರಾಯದವರೂ ಇದ್ದು ಭಾನುವಾರದ 159 ಪ್ರಕರಣದಲ್ಲಿ 80 ಬೆಂಗಳೂರು ನಗರ ವ್ಯಾಪ್ತಿಯದಾಗಿದೆ. ಸದ್ಯ 301 ಜನರು ಡೆಂಗಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರುಷದ ಒಟ್ಟು ಡೆಂಗಿ ಪ್ರಕರಣ 7,165 ಎಂದು ಆರೋಗ್ಯ ಇಲಾಖೆ ಹೇಳಿದೆ. ಡೆಂಗಿ ಜ್ವರಕ್ಕೆ

ಪುರಿ ಜಗನ್ನಾಥ ರಥೋತ್ಸವ ನೂಕು ನುಗ್ಗಲು

ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ನೂಕು ನುಗ್ಗಲಿನಲ್ಲಿ ಒಬ್ಬ ಸತ್ತುದರಿಂದ ತೇರು ಎಳೆಯುವುದನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ತೇರು ಎಳೆಯುವ ಸಮಯದಲ್ಲಿ ಹೆಚ್ಚು ಭಕ್ತರು ಸೇರಿದ್ದರು. ರಥ ಎಳೆಯಲು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಒಬ್ಬ ಉಸಿರು ಕಟ್ಟಿ ಸತ್ತರೆ ಹಲವರು ಕೆಳಕ್ಕೆ ಬಿದ್ದು ಗಾಯಗೊಂಡರು. ಒಬ್ಬಿಬ್ಬರು ಗಂಭೀರ ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್

ಜಗತ್ತಿನ ಬಹು ಜನರು ಪ್ರೀತಿಸುವ ಹಣ್ಣು ಪಪ್ಪಾಯಿ

ಜಗತ್ತಿನ ಜನರು ಪ್ರೀತಿಸುವ ಹಣ್ಣುಗಳಲ್ಲಿ ಒಂದಾದ ಪಪ್ಪಾಯಿ ಪ್ರತಿ ವರುಷ ಆರು ಕೋಟಿ ಟನ್ ಉತ್ಪಾದನೆ ಆಗುತ್ತದೆ. ಪಪ್ಪಾಯಿಯ ಬೇಸಾಯ ಮತ್ತು ಮೂಲ ತೆಂಕಣ ಮೆಕ್ಸಿಕೋ ಮತ್ತು ಕೋಸ್ಟಾರಿಕಾ ಆಗಿದೆ. ಪಪ್ಪಾಯಿ ಹೆಸರು ಕೂಡ ಅಲ್ಲಿಯದೇ ಆಗಿದೆ. ಇದು ತನ್ನ ಮದ್ಗುಣ ಮತ್ತು ಉತ್ತಮ ಪೋಷಕಾಂಶಗಳಿಂದ ವಾಣಿಜ್ಯ ಮಹತ್ವದ ಹಣ್ಣು ಎನಿಸಿದೆ.ಪಪ್ಪಾಯಿ ಕಾರಿಕಾ ಉಷ್ಣ ವಲಯದ ಹಣ್ಣಾಗಿದೆ. ಇಂಡೋನೇಶಿಯಾದಲ್ಲಿ ಇದರ ಎಲೆಯನ್ನು ಔಷಧಿಯಾಗಿ ಬಳಸುತ್ತಾರೆ. ಪಪ್ಪಾಯಿಯ ಸೊನೆ ಮತ್ತು ಕೆಲವು

ಗ್ರಾಪಂ ಕಚೇರಿಯಲ್ಲಿ ನಡೆಯುತ್ತಿದ್ದ 9/11 ನ್ನು ಮುಡಾಕ್ಕೆ ಮಾಡಿಸಿದ್ದೇ ಬಿಜೆಪಿ ಸರಕಾರ

ಪುತ್ತೂರು: ಮನೆ ಕಟ್ಟುವಾಗ ಅಗತ್ಯವಾಗಿ ಬೇಕಾದ 9/11 ಪತ್ರ ಗ್ರಾಪಂ ಕಚೇರುಯಲ್ಲೇ ನೀಡುವಂತೆ ಹಿಂದಿನ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿತ್ತು ಆದರೆ ಹಿಂದಿನ ಬೊಮ್ಮಾಯಿ ನೇತೃತ್ಬದ ಬಿಜೆಪಿ ಸರಕಾರ ಅದನ್ನು ಮುಡಾಗೆ ಶಿಫ್ಟ್ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರ ಎಂದಿಗೂ ಜನರಿಗೆ ತೊಂದರೆ ಕೊಡುವುದೇ ಇಲ್ಲ. ಬಿಜೆಪಿ ಸರಕಾರ

ಪುತ್ತೂರು: ನೂತನ ಆಧಾರ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಪುತ್ತೂರು: ನೂತನ ಆಧಾರ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ನೂತನ ಆಧಾರ್ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರು ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ಎದ್ದು ಅಂಚೆ ಕಚೇರಿ ಮುಂದೆ ಇನ್ನು ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ನೂತನ ಕೇಂದ್ರದಲ್ಲಿ 18 ವರ್ಷ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ

ವಿದ್ಯರ‍್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವನಹೋತ್ಸವವನ್ನು ಆಚರಿಸಲಾಯಿತು . ಗಿಡಗಳನ್ನು ನೆಟ್ಟು ಬೆಳೆಸುವುದು ಇಂದಿನ ಯುವ ಜನಾಂಗದ ಆದ್ಯ ರ‍್ತವ್ಯ ಆಗಿರುತ್ತದೆ. ಕರ‍್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ನರ‍್ದೇಶಕಿಯಾದ ಶ್ರೀಮತಿ ಮಮತಾ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ ಹಾಗೂ ಸಂಸ್ಥೆಯ ಉಪನ್ಯಾಸಕರು, ಉಪನ್ಯಾಸಕೇತರರು, ವಿದ್ಯರ‍್ಥಿಗಳು ಉಪಸ್ಥಿತರಿದ್ದರು.