Home Posts tagged #v4newskarnataka (Page 29)

ಮಂಗಳೂರು: ಕಣಚೂರು ಮೋನು, ಎಂ.ಬಿ. ಪುರಾಣಿಕ್ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವದ ಪ್ರಯುಕ್ತ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಅಧ್ಯಕ್ಷ ಕಣಚೂರು ಮೋನು, ಮಂಗಳೂರಿನ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮತ್ತು ಕುಂದಾಪುರದ ಉದ್ಯಮಿ ರಾಮಕೃಷ್ಣ ಆಚಾರ್ ಅವರನ್ನು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ.

ಚುನಾವಣಾ ಎಪೆಕ್ಟ್ : ನವಗುಳಿಗ ದೈವಕ್ಕೆ ಹರಕೆ ತೀರಿಸಲು ಬಂದ ಶಾಸಕ ಹರೀಶ್ ಪೂಂಜಾ

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ದೈವ – ದೇವರುಗಳ ಮೊರೆಹೋಗುವುದು ಸಹಜ. ಅದರಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶಾಸಕ ಹರೀಶ್ ಪೂಂಜಾ ನವ ಗುಳಿಗ ದೈವಗಳಿಗೆ ಕೋಲ ಸೇವೆಯನ್ನು ನೀಡಿದ್ದಾರೆ. ಹೌದು ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವಗುಳಿಗರಿಗೆ ಕೋಲ ನೀಡುವೆನೆಂದು ಶಾಸಕ ಕಳೆದ ಚುನಾವಣಾ ಪೂರ್ವದಲ್ಲಿ ಹರಕೆ ಹೊತ್ತಿದ್ದರು. ಈ

ಬೆಳುವಾಯಿ :ರೂ.13 ಕೋ. ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸುಮಾರು ರೂ.7.5 ಕೋ.ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ರೂ13 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.ನಂತರ ಮಾತನಾಡಿದ ಕೋಟ್ಯಾನ್ ಮೂಲಭೂತ ಸೌಕರ್ಯ ಮತ್ತು ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ – ಜಾತಿ ಬೇಧ ಮರೆತು ರೂ 2000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕನಾಗಿ

central market mangalore : ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಕಾಮಗಾರಿ, ಮಣ್ಣು ಕುಸಿದು 9 ಮಂದಿ ಕಾರ್ಮಿಕರಿಗೆ ಗಾಯ

ನಗರದ ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿದ್ದ ಶೆಡ್ ಬಳಿ ಮಣ್ಣು ಕುಸಿದು 9 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿದ್ದ ಶೆಡ್ ಬಳಿ ಮಣ್ಣು ಕುಸಿದು ಬಿದ್ದಿದ್ದರಿಂದ 9 ಮಂದಿಗೆ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ. ಶೆಡ್ ತಳಭಾಗದ ಒಂದು ಬದಿಯಲ್ಲಿ ಮಣ್ಣು ಕುಸಿದಿದ್ದು ನಿದ್ದೆಯಲ್ಲಿದ್ದ

ಮೊಯ್ದೀನ್ ಬಾವಾ ದೇವಸ್ಥಾನದ ಪ್ರಸಾದ ಕಾಲಡಿ ಹಾಕಿ ತುಳಿಯುತ್ತಾರೆ : ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿಕೆಗೆ ಬಾವಾ ಕಿಡಿ

`ಮೊಯ್ದೀನ್ ಬಾವಾ ದೇವಸ್ಥಾನದ ಪ್ರಸಾದವನ್ನು ಕಾಲಡಿ ಹಾಕಿ ತುಳಿಯುತ್ತಾರೆ’ ಎಂದು ಶಾಸಕ ಡಾ| ಭರತ್ ಶೆಟ್ಟಿ ಅವರು ಹೇಳಿದ್ದಾರೆ. ಇದು ಸತ್ಯವೇ ಆಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಅಥವಾ ದರ್ಗಾದಲ್ಲಿ ಆಣೆ ಮಾಡಲಿ, ನಾನು ಬರುತ್ತೇನೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ಶಾಸಕ ಭರತ್ ಶೆಟ್ಟಿಯವರಿಗೆ ಆಹ್ವಾನ ನೀಡಿದ್ದಾರೆ. ಮಂಗಳವಾರ ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಬಾಲ್ಯದಲ್ಲಿ ಹೆತ್ತವರು ಸಂಸ್ಕಾರ

ಉಳ್ಳಾಲ – ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ : ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

ಉಳ್ಳಾಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಡರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಕುತ್ತಾರು ರಾಜರಾಜೇಶ್ವರೀ ಸಿದ್ದಿವಿನಾಯಕ ದೇವಸ್ಥಾನದಿಂದ ತೊಕ್ಕುಟ್ಟು ಜಂಕ್ಷನ್‍ವರೆಗೆ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಉಳ್ಳಾಲ ಕ್ಷೇತ್ರದಲ್ಲಿ

ಗುಂಡಿಬೈಲು ಶ್ರೀ ಶನೈಶ್ವರ ಕ್ಷೇತ್ರ : 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಉಡುಪಿಯ ಗುಂಡಿಬೈಲುನಲ್ಲಿರುವ ಶ್ರೀ ಶನೈಶ್ವರ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ ಪ್ರಯುಕ್ತ ಮಾರ್ಚ್ 12, 2023 ರ ಭಾನುವಾರ ಸಂಜೆ, ದಾನಿಗಳಾದ ಸಂದೀಪ್ ಶೆಟ್ಟಿಯವರು ನೀಡಿದ ಶ್ರೀ ಶನೈಶ್ವರ ದೇವರ ಮೂರ್ತಿಯನ್ನು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ದಿವ್ಯ ಮೆರವಣಿಗೆಯ ಮೂಲಕ ಗುಂಡಿಬೈಲುವಿನ ಶ್ರೀ ಶನೈಶ್ವರ ಕ್ಷೇತ್ರಕ್ಕೆ ತರಲಾಗಿತ್ತು. ನಂತರ ಮಾರ್ಚ್ 13, 2023 ರ ಸೋಮವಾರ

ಮುಂಡ್ಕೂರು ಕಲ್ಲಿಮಾರಿನಲ್ಲಿ ಪುರಾತನ ನಾಗಕಲ್ಲು ಪತ್ತೆ

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ವಿನಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗ ಬನದ ಸಮೀಪ ಅಗೆಯುವಾಗ ಈ ಕಲ್ಲು ಪತ್ತೆಯಾಗಿದೆ. ನಾಗಕಲ್ಲು ತುಂಡಾಗಿದ್ದು ಬಹಳ ಪುರಾತನವಾದ ಅಪರೂಪದ ಶಿಲ್ಪ ಕಲೆ ಇದರಲ್ಲಿ ಗೋಚರಿಸುತ್ತಿದೆ. ರವಿಪ್ರಸಾದ್ ಭಟ್ ಸಹಕಾರದಲ್ಲಿ ಈ ಅಪರೂಪದ ಶಿಲ್ಪರೂಪದ ನಾಗಕಲ್ಲು ಪತ್ತೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯ ಹಾಗೆ ಕಂಡುಬರುತ್ತಿದೆ.

ಗುಂಡಿಬೈಲು ಶ್ರೀ ಶನೈಶ್ವರ ಕ್ಷೇತ್ರ : ಶ್ರೀ ಶನೈಶ್ವರ ದೇವರ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಉಡುಪಿಯ ಗುಂಡಿಬೈಲುನಲ್ಲಿರುವ ಶ್ರೀ ಶನೈಶ್ವರ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ ಪ್ರಯುಕ್ತ ಮಾರ್ಚ್ 12, 2023 ರ ಭಾನುವಾರ ಸಂಜೆ, ದಾನಿಗಳಾದ ಸಂದೀಪ್ ಶೆಟ್ಟಿಯವರು ನೀಡಿರುವ ದೇವರ ಮೂರ್ತಿಯನ್ನು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ದಿವ್ಯ ಮೆರವಣಿಗೆಯ ಮೂಲಕ ಸಕಲ ವಾದ್ಯ ಘೋಷದೊಂದಿಗೆ ಗುಂಡಿಬೈಲುವಿನ ಶ್ರೀ ಶನೈಶ್ವರ ಕ್ಷೇತ್ರಕ್ಕೆ ತರಲಾಯಿತು. ಮಾರ್ಚ್ 13, 2023 ರ

ನಿಮ್ಮ ಆಶೆಯೇ ನನ್ನ ಆಶೆ- ಕ್ಷೇತ್ರದ ಜನತೆಗೆ ಕೋಟ್ಯಾನ್‌ ಅಭಯ

ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ