ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು, ಬಿಜೆಪಿ ಸರಕಾರ ಅಂತಹ ನೀತಿಗಳ ಪರ
ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ,ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಭಾಜಪ ಉಪಾಧ್ಯಕ್ಷ ಶ್ರೀಪ್ರಕಾಶ್ ಶೆಟ್ಟಿಯವರು ಭಾರತಮಾತೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ ಪ್ರತಿ ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋಆಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಭಾಜಪ ಅಧ್ಯಕ್ಷರಾದ ಶ್ರೀಕಾಂತ್
ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಅಂದು ದಾನಶೂರ ಬಲೀಂದ್ರನ ಪೂಜೆಯನ್ನು ದೈವಸ್ಥಾನಗಳಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದಲ್ಲಿ ಬಲೀಂದ್ರ ಪೂಜೆಯನ್ನು ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ
ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಸಭೆ ಮುಂದೂಡಿಕೆಯಾದ ಘಟನೆ ನಡೆಯಿತು. ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಕರಾವಳಿಯ ವಿವಿಧ ಭಾಗಗಳಲ್ಲಿ ಅತ್ಯುತ್ತಮವಾಗಿ ನಡೆಯಿತು. ಉಡುಪಿಯ ಪ್ರಖ್ಯಾತ ಆರೋಗ್ಯ ಸಂಸ್ಥೆ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್‍ನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ
ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುತ್ತಿರುವ ಮಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಸ್ವಚ್ಚತೆಗೆ ಗಮನಹರಿಸದಿರುವುದು ವಿಷಾದನೀಯ ಸಂಗತಿ, ನಗರದ ಕದ್ರಿ ಮಲ್ಲಿಕಟ್ಟೆ ಸಮೀಪದ ವಾರ್ಡ್ ನಂಬರ್ 33ರ ಜುಗುಲ್ ಹಾಲ್ ಹಿಂಬದಿಯ ರಸ್ತೆಯಲ್ಲಿ ಮನೆಗಳ ಮುಂದೆ ಕಳೆದ ಮೂರು ದಿನಗಳಿಂದ ಚರಂಡಿ ತುಂಬಿ ಹರಿಯುತ್ತಿದೆ, ಸಮಸ್ಯೆ ಬಗೆಹರಿಸುವುದಾಗಿ ನಗರಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಆದರೆ ಇನ್ನು ಕೂಡ ಭರವಸೆ ಈಡೆರಿಲ್ಲ, ಸ್ಥಳಿಯ ನಿವಾಸಿಗಳು ಪ್ರತಿದಿನವೂ ದುರ್ವಾಸನೆಯಿಂದ
ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ನ.6ರಂದು ಮಧ್ಯಾಹ್ನದಿಂದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ನಡೆಯಿತು. ನ.6ರಂದು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಮಧ್ಯಾಹ್ನ 2ರಿಂದ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದ್ದು, ಪೆÇ್ರ.ತುಕಾರಾಮ ಪೂಜಾರಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ನಿರತ ಪ್ರಶಸ್ತಿಯನ್ನು ಹಿರಿಯ
ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು. ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಒಂಟಿ ಮಹಿಳೆ ಮನೆಯಲ್ಲಿ ಒಬ್ಬರೇ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ ಮತ್ತು ಗೋ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಸಂಜೆ ಗೋ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಗೋ ಪೂಜೆ ನಡೆಯಿತು. ಗೋವುಗಳನ್ನು ಶೃಂಗರಿಸಿ. ಗಂಧ ಪ್ರಸಾದವನ್ನು ಹಚ್ಚಿ, ಅದಕ್ಕೆ ದೋಸೆ, ಅವಲಕ್ಕಿ, ಬಾಳೆ ಹಣ್ಣುಗಳನ್ನು ನೀಡಲಾಯಿತು. ಗೋ ಪೂಜೆ ಸಭಾ ಕಾರ್ಯಕ್ರಮದಲ್ಲಿ ಗೋ ಸಮರ್ಪಣೆ
ಮಂಗಳೂರು: ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ನಿಲ್ಲಿಸಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ವೆಲೆನ್ಸಿಯಾದಲ್ಲಿ ನಡೆದಿದೆ. ಮಂಗಳಾದೇವಿ ಕಡೆಯಿಂದ ಬರುತ್ತಿದ್ದ ಎರಡು ಬಸ್ ಗಳು ವೆಲೆನ್ಸಿಯಾದ ಸರ್ಕಲ್ ಬಳಿ ತಲುಪಿದಾಗ ಬಸ್ ಓವರ್ ಟೇಕ್ ಮಾಡಲು ಮುಂದಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೊಟ್ಟೆ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್, ಮೊಟ್ಟೆ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ




























