Home Posts tagged #v4stream (Page 116)

ನೀಟ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ ಶ್ರೀಕಾಂತ್ ಹೆಗಡೆ 641, ಸೋಹನ್ ಎಸ್ ನೀಲಕರಿ 598, ಸುದೀಪ್ ಅಸಂಗಿಹಾಲ್ 552, ಹಾಸನದ ವಿಕಾಸ್ ಗೌಡ ಎಂ 608 ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ

ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಸುಂದರಕಾಂಡ ಪ್ರವಚನ

ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಕುಂಜಿಬೆಟ್ಟು, ಉಡುಪಿ ಮತ್ತು ಚಿನ್ಮಯ ಮಿಷನ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಸೆಪ್ಟೆಂಬರ್ ೧೧, ೨೦೨೨ ರಿಂದ ಸೆಪ್ಟೆಂಬರ್ ೧೭, ೨೦೨೨ ರ ತನಕ ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಮಂಟಪದಲ್ಲಿ ಸುಂದರಕಾಂಡ ಈ ವಿಷಯದಲ್ಲಿ ಇಂಗ್ಲೀಷ್ ಭಾಷೆಯಲ್ಲಿ, ಚಿನ್ಮಯ ಮಿಷನ್ ಮಂಗಳೂರಿನ ಸ್ವಾಮಿ ಅಪರಾಜಿತಾನಂದ ಇವರಿಂದ ಸಂಜೆ ೦೬:೦೦ ರಿಂದ ೦೭:೩೦ ರ ವರೆಗೆ ಪ್ರವಚನ ನಡೆಯಲಿದೆ.

ಬೆಳ್ಳಾರೆ ಜ್ಞಾನದೀಪದಲ್ಲಿ ಪೂ. ಪ್ರಾ. ಶಾಲಾ ಶಿಕ್ಷಕಿಯರ ಚೈತನ್ಯ ತರಬೇತಿ ಕಾರ್ಯಗಾರ

ಯಾವ ಮಗುವಿನಲ್ಲೂ ಬೇಧಭಾವ ಮಾಡದೆ ನಮ್ಮ ಮಗುವಿನಂತೆ ಪ್ರೀತಿ ತೋರಿಸಿ ಝೀರೋದಿಂದ ಹೀರೋ ಮಾಡುವ ಮಹತ್ತರ ಜವಾಬ್ಧಾರಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಮೇಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹದಲ್ಲಿ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ನಡೆದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ

ಮಂಗಳೂರು ಮೇಯರ್ ಆಗಿ ಜಯಾನಂದ ಅಂಚನ್, ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆ

ಮಂಗಳೂರು,ಸೆ.09(ಕ.ವಾ):- ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ.ಸೆ.9ರ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 23ನೇ ಅವಧಿಯ ಚುನಾವಣೆ ನಡೆಯಿತು.ಚುನಾವಣಾಧಿಕಾರಿಯಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಚುನಾವಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೂತನ ಮೇಯರ್ ಹಾಗೂ ಉಪ ಮೇಯರ್ ಗಳ ಹೆಸರನ್ನು ಘೋಷಿಸಿದರು. ಶಾಸಕರಾದ ಭರತ್

ಗೊನ್ಝಾಗ ಶಾಲೆಯಲ್ಲಿ ಆರೋಗ್ಯ ಅಭಿಯಾನ

ವಿಶ್ವ ಫಿಸಿಯೋಥೆರಪಿ ದಿನಾಚರಣೆ ಅಂಗವಾಗಿ ಸಂತ ಅಲೋಷಿಯಸ್ ಗೊನ್ಝಾಗ ಶಾಲೆಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಪಿ ವಿಭಾಗ, ಮಂಗಳೂರು ರೌಂಡ್ ಟೇಬಲ್ 115 ಹಾಗೂ ಮಂಗಳೂರು ಲೇಡೀಸ್ ಸರ್ಕಲ್ 82 ಇವರ ಸಹಯೋಗದಿಂದ 1 ರಿಂದ 10 ತರಗತಿಯ ಮಕ್ಕಳಿಗಾಗಿ ಆರೋಗ್ಯ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ ರಿಂಕು ರೋಷನ್ ಮಾತನಾಡಿ ಉತ್ತಮ ಆಹಾರ ಸೇವನೆ,

ನೀಟ್ ಫಲಿತಾಂಶ ಪ್ರಕಟ : ಮನೋಜ್, ರಾಹುಲ್, ನರಸೇಗೌಡಗೆ ರ್ಯಾಂಕ್

ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಮನೋಜ್ ಎನ್ 690 ಅಂಕ ಪಡೆಯುವ ಮೂಲಕ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 54ನೇ ರ್ಯಾಂಕ್ ಗಳಿಸಿದ್ದಾರೆ. ರಾಹುಲ್ ಜಿ.ಪಾಟೀಲ್ 39ನೇ ರ್ಯಾಂಕ್ ಹಾಗೂ ನರಸೇಗೌಡ ಬಿ.ಎಂ 85ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 600 ಕ್ಕಿಂತ ಅಧಿಕ ಅಂಕಗಳನ್ನ 31

ಸೆ.10ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನಾಚರಣೆ ಪುತ್ತೂರಿನಲ್ಲಿ ನಡೆದ ವಾಹನ ಜಾಥಾ

ಪುತ್ತೂರು: ಸೆ.10ರ ಶನಿವಾರದಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನಲ್ಲಿ ವಾಹನ ಜಾಥಾ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಇವುಗಳ ಆಶ್ರಯದಲ್ಲಿ ನಡೆದ ವಾಹನ ಜಾಥಾಕ್ಕೆ ನಗರದ ದರ್ಬೆ ಬೈಪಾಸ್‍ನ ಫಾ. ಪತ್ರಾವೋ ವೃತ್ತದಲ್ಲಿ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಬಳಿ ಅನಾವರಣಗೊಳಿಸಿದರು. 28 ಅಡಿ ಎತ್ತರದ ಜೆಟ್ ಕಪ್ಪು ಗ್ರಾನೈಟ್ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿಯ ಕ್ಯಾನೋಪಿ ಅಡಿಯಲ್ಲಿ ಇರಿಸಲಾಗುವುದು. ನೇತಾಜಿ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಈ ವರ್ಷದ ಆರಂಭದಲ್ಲಿ ಪರಾಕ್ರಮ್ ದಿವಸ್ (ಜನವರಿ 23) ರಂದು ನೇತಾಜಿ ಅವರ ಹೊಲೋಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ

ಸೆ.11 : ಉಚಿತ ಆರೋಗ್ಯ ಶಿಬಿರ

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ.) ಉರ್ವಸ್ಟೋರ್, ಮಂಗಳೂರು ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯ ಮೆಡಿಕಲ್ ಕಾಲೇಜು, ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದಲ್ಲಿ ಮಂಗಳೂರಿನ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವನಿತಾಂಗಂಣದಲ್ಲಿ ಸೆ.11ರಂದು ಪೂರ್ವಾಹ್ನ 9ರಿಂದ ಅಪರಾಹ್ನ 3ರ ರವೆರೆಗೆ ಉಚಿತಾ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ ಹಾಗೂ ರಕ್ತದ ವಿಂಗಡನೆ, ಮಧುಮೇಹ, ಹಿಮೋಗ್ಲೋಬಿನ್ ಪರೀಕ್ಷೆ, ಸ್ತ್ರೀಯರ ಮಾಮೊಗ್ರಾಫಿ,

ನಮ್ಮ ಸರ್ಕಾರದಿಂದ ದೇವಸ್ಥಾನ ರಕ್ಷಣೆಗೆ ಆದ್ಯತೆ : ಸಂಸದ ಬಿ. ವೈ ರಾಘವೇಂದ್ರ

ಭದ್ರಾವತಿ : ಭದ್ರಾವತಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವು ಕಾಲ ಕ್ರಮೇಣ ಶಿತಲಗೊಳ್ಳುತ್ತಿದ್ದು, ಇದನ್ನು ಸರಿಪಡಿಸಿ ಜೀರ್ಣೋದ್ಧಾರ ಗೊಳಿಸುವ ನಿಟ್ಟಿನಲ್ಲಿಸಂಸದರಾದ ಬಿ. ವೈ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ದೇವಸ್ಥಾನ ಅಭಿವೃದ್ಧಿ ಮತ್ತು ಇತರ ಕಾಮಗಾರಿಗೆ ಕೇಂದ್ರದ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ಅನುದಾನವನ್ನು ಮನವಿ ಮಾಡಿದ್ದಾರೆ. ಇಂದು ಸಂಸದರಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು