Home Posts tagged #v4stream (Page 117)

ಕಡಿಮೆ ಅಂಕಕ್ಕೆ ಮನನೊಂದು ಸೇತುವೆಯಿಂದ ನದಿಗೆ ಜಿಗಿದ ವಿದ್ಯಾರ್ಥಿಯ ಮೃತದೇಹ ಪತ್ತೆ

ಕುಂದಾಪುರ : ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣಕ್ಕೆ ಮನನೊಂದು ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿಕೊಂಡ ನಗರದ ವಡೇರಹೋಬಳಿ ಜೆಎಲ್‍ಬಿ ರಸ್ತೆಯ ನಿವಾಸಿ ಸಾಯೀಶ್ ಶೆಟ್ಟಿ ಮೃತದೇಹ ಶುಕ್ರವಾರ ಬೆಳಿಗ್ಗೆ ನಾವುಂದದ ಸಮುದ್ರತೀರದಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಸಾಯೀಶ್ ಶೆಟ್ಟಿ

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶ

 ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ಗುರುವಾರ(ಸೆ.8)ದಂದು ನಿಧನರಾಗಿದ್ದಾರೆ. ಬ್ರಿಟನ್ ರಾಣಿ ನಿಧನದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಣಿಯ ನಿಧನದ ಸುದ್ದಿಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ. ಬ್ರಿಟನ್ ಗೆ ಸುದೀರ್ಘ ಸೇವೆ ಸಲ್ಲಿಸಿದ್ದ ಎರಡನೇ ಎಲಿಜಬೆತ್ 70 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಇದೀಗ ತನ್ನ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ : ಎಸ್‍ಡಿಪಿಐಯ ರಿಯಾಝ್ ಫರಂಗಿಪೇಟೆ ಹೇಳಿಕೆ

ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿರುವ ಎಸ್‍ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಇಂದು ಬೆಳಗ್ಗೆ ಎನ್‍ಐಎ ಅಧಿಕಾರಿಗಳ ತಂಡ ಬಂಟ್ವಾಳ ಪೆÇಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ. ವಿಚಾರಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ

ಅಕ್ಕಿ ಗೋದಾಮಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ…

ಮಂಗಳೂರು : ಹಳೇಬಂದರು ಸಗಟು ಮಾರುಕಟ್ಟೆಯ ಪೋರ್ಟ್ ರಸ್ತೆಯ ಮಧ್ಯೆ ಹಾದು ಹೋಗಿ ನದಿ ಸೇರುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಬಂದರು ಇಲಾಖೆ ಕಟ್ಟಡ ನಿರ್ಮಾಣ ಮಾಡಿ ರಾಜ ಕಾಲುವೆಯನ್ನು ತಿರುಗಿಸಿರುವುದರಿಂದ ರಾಜ ಕಾಲುವೆಯಲ್ಲಿ ಹರಿದು ಹೋಗುವ ತ್ಯಾಜ್ಯ ನೀರು ಉಕ್ಕಿ ಹೊರಗೆ ಗೋದಾಮುಗಳಿಗೆ ನುಗ್ಗಿ ಅಕ್ಕಿ ಧಾನ್ಯ, ಮೆಣಸು ಇತ್ಯಾದಿ ಸರಕುಗಳು ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಅಲ್ಲದೆ ಕೊಳಚೆ ನೀರು ರಸ್ತೆಯಲ್ಲೇ ನಿಂತು ಪರಿಸರದಲ್ಲಿ ದುರ್ನಾತ

ಪಾನಮತ್ತ ಪ್ರಯಾಣಿಕನನ್ನು ಬಸ್ಸಿನಿಂದ ಹೊರದೂಡಿದ ಕಂಡಕ್ಟರ್

ದಕ್ಷಿಣಕನ್ನಡಈಶ್ವರ ಮಂಗಲ:ಸರಕಾರಿ ಬಸ್ ನಿರ್ವಾಹಕ ನಿಂದ ಅಮಾನುಷ ಹಲ್ಲೆ, ಕ್ರಮಕ್ಕೆ ಆಗ್ರಹಈಶ್ವರಮಂಗಲ :ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯ ಪದವು ಕಡೆಗೆ ಸಂಜೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನ ಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ದೂಡಿ ಹಾಕಿದ ಘಟನೆ ಇಂದು ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ. ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ

ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ-ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ

ಮಂಗಳೂರಿನ ನವಭಾರತ್ ವೃತ್ತದ ಓಷಿಯನ್ ಪರ್ಲ್‍ನಲ್ಲಿ ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ಸಿಕ್ಕಿತ್ತು. ಸೆ.8ರಿಂದ ಸೆ.11ರ ವರೆಗೆ ಚಿನ್ನ -ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮುಳಿಯ ಚಿನ್ನಾಭರಣ ಮತ್ತು ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ಎಕ್ಸಿಬಿಶನ್‍ನ್ನು ಏರ್ಪಡಿಸಿದ್ದಾರೆ. ಎಪ್ಪತ್ತೆಂಟು ವರ್ಷಗಳ ಪರಂಪರೆ ಮತ್ತು ನಂಬಿಕೆಯ ಮುಳಿಯ ಜ್ಯುವೆಲ್ಸ್ ನಿಂದ

ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಆಚರಣೆ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ, ಸಡಗರಿಂದ ಆಚರಿಸಲಾಯಿತು.ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಗೌತಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಮ್.ಎಸ್. ಡಿಎಸ್‍ಎಮ್ ಕಿಶನ್ ಕುಮಾರ್, ಲಯನ್ 317 ಡಿ ಡಿಸ್ಟ್ರಿಕ್ ಸತೀಶನ್ ಡಿ, ಯುಎಸ್‍ಎಯ ಟೆಥರ್ಪಿಯ ಚೀಪ್ ಪ್ರೊಡಕ್ಟಿವಿಟಿ ಅಫೀಸರ್ ಮ್ಯಾಥ್ಯೂ ಟೇಲರ್ ಸಲಹಾ ಸಮಿತಿಯ ಜ್ಯೋತಿಕಾ ಆಳ್ವಾ ಅವರು

ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮೂಡುಬಿದಿರೆಯ ರಿಂಗ್ ರೋಡ್ ಪ್ರೀತಮ್ ಗಾರ್ಡನ್ ಬಳಿ, ಅಥವಾ ರಿಂಗ್ ರೋಡ್ ಒಂಟಿಕಟ್ಟೆ/ಅಲಂಗಾರ್ ಜಂಕ್ಷನ್ ನಲ್ಲಿ ಅವಕಾಶ ಮಾಡಿಕೊಡಬೇಕೆಂದು ಮೂಡುಬಿದಿರೆ ತಾಲೂಕು ಹಿಂದು ಜಾಗರಣಾ ವೇದಿಕೆಯು ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ,

ಬಿಜೆಪಿ,ಆರ್.ಎಸ್.ಎಸ್ ಸಂಘಟನೆಗೂ ISIS ಉಗ್ರ ಸಂಘಟನೆಗೂ ಯಾವುದೇ ವ್ಯತ್ಯಾಸವಿಲ್ಲ- ಬಿಕೆ ಇಮ್ತಿಯಾಜ್

ಗುಜರಾತಿನ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಬಿಡುಗಡೆಯನ್ನು ವಿರೋಧಿಸಿ., ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳದ ಆರೋಪಿ ಮುರುಘಾ ಮಠದ ಶಿವಮೂರ್ತಿಯವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐ, ಜೆಎಮ್ಎಸ್, ಎಸ್ಎಫ್ಐ, ಡಿಎಚ್ಎಸ್ ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಇಂದು (7-09-2022) ಮಂಗಳೂರು ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ

ಸೆ.10 -11 ಬಿಎನ್‍ಐ ಮಂಗಳೂರು ಚಾಪ್ಟರ್‍ನ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ- 2022

ಬಿಎನ್‍ಐ ಮಂಗಳೂರು ಮೊದಲ ಆವೃತ್ತಿಯ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಸೆಪ್ಟಂಬರ್ 10 ಮತ್ತು 11ರಂದು ಮಂಗಳೂರಿನ ಟಿಎಮ್‍ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸುತ್ತಿದ್ದು, ಒಟ್ಟು 80 ಸ್ಟಾಲ್‍ಗಳು ಎಕ್ಸ್‍ಪೋದಲ್ಲಿ ಪಾಲ್ಗೊಳ್ಳಲಿವೆ.ಬಿಎನ್‍ಐ ಕಳೆದ 37 ವರ್ಷಗಳಿಂದ 75 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ವ್ಯಾಪಾರ ಉಲ್ಲೇಖಿತ ಸಂಸ್ಥೆಯಾಗಿದೆ. ಇದೀಗ ಮಂಗಳೂರಿನಲ್ಲಿ ಮೊದಲ