Home Posts tagged #v4stream (Page 23)

ಕ್ರೀಡಾರಂಗದ ಸಾಧಕ ವಿದ್ಯಾರ್ಥಿ ಆಕಾಶ್ ಗೆ ಶಾಲಾವತಿಯಿಂದ ಸನ್ಮಾನ

ಮಂಜೇಶ್ವರ: ಸರಕಾರಿ ವೃತ್ತಿಪರ ಉನ್ನತ ಪ್ರೌಢಶಾಲೆ ಕುಂಜತ್ತೂರು ಇಲ್ಲಿನ ವಿದ್ಯಾರ್ಥಿ ಆಕಾಶ್ ಕ್ರೀಡಾರಂಗದಲ್ಲಿ ಮಾಡಿದ ಸಾಧನೆಗೆ ಶಾಲಾವತಿಯಿಂದ ಸನ್ಮಾನ ಸಮಾರಂಭವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. 2022 -23ನೇ ಸಾಲಿನ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡೋತ್ಸವದಲ್ಲಿ ನಡೆದ ಕಬಡ್ಡಿಯಲ್ಲಿ ಕಾಸರಗೋಡು ಜಿಲ್ಲೆಯ ತಂಡದ ನಾಯಕನಾಗಿ ಆಡಿ ಪ್ರಥಮ ಸ್ಥಾನ ಪಡೆದು

ಉಜಿರೆ ಎಸ್.ಡಿ. ಎಂ ಕಾಲೇಜು : ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕ್ರೈಂ ರಿಪೋರ್ಟರ್ ಸುನಿಲ್ ದರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ

ಪತ್ರಿಕೋದ್ಯಮಕ್ಕೆ ವೃತ್ತಿ ಒಲವು ಮುಖ್ಯ ಉಜಿರೆ ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯವಿದ್ಯಾರ್ಥಿ ಹಾಗೂ ಖ್ಯಾತ ಕ್ರೈಂ ರಿಪೋರ್ಟರ್ ಸುನಿಲ್ ದರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಸುದ್ದಿಗಾರ ರಾಗ ಬಯಸುವವರು ಹೇಗೆ

ಅಲೋಶಿಯಸ್ ಕಾಲೇಜಿನ ಸ್ಮಿತ ಡಿ.ಕೆ.ರವರಿಗೆ ಪಿಹೆಚ್.ಡಿ. ಪದವಿ

ಸಂತ ಅಲೋಶಿಯಸ್ ಸ್ವಾಯತ್ತಕಾಲೇಜಿನ ವಾಣಿಜ್ಯ ವಿಭಾಗದಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸ್ಮಿತ ಡಿ.ಕೆ. ಅವರ “ಇಂಪ್ಯಾಕ್ಟ್‌ಆಫ್‌ರಿವಾರ್ಡ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಆಂಡ್ ಪ್ರಾಕ್ಟೀಸಸ್ ಔಓ ಎಂಪ್ಲಾಯೀ ಸ್ಯಾಟಿಸ್‌ಫ್ಯಾಕ್ಷನ್: ಎ ಸ್ಟಡಿ ವಿದ್‌ ರೆಫರೆನ್ಸ್‌ ಟುಪ್ರೊಫೆಶನಲ್‌ ಕಾಲೇಜಸ್‌ ಇನ್‌ಕರ್ನಾಟಕ” ಎಂಬ ಮಹಾಪ್ರಬಂಧಕ್ಕೆಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ವಾಣಿಜ್ಯ

ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ‘ನಿತ್ಯ ಸತ್ಯ – ಬಾಳಿಗೆ ಬೆಳಕು’ ಕೃತಿ ಲೋಕಾರ್ಪಣೆ

ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ‘ನಿತ್ಯ ಸತ್ಯ – ಬಾಳಿಗೆ ಬೆಳಕು’ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅವರು ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ

ಫೆ. 17 : ಸಾಮೂಹಿಕ ರಕ್ತದಾನ ಶಿಬಿರ

ಬಹರೈನ್; ರಕ್ತ ದಾನ ಜಗತ್ತಿನಲ್ಲಿಯೇ ಶ್ರೇಷ್ಠ ದಾನ . ನಾವು ನೀಡುವ ಪ್ರತಿ ಹನಿ ರಕ್ತ ಕೂಡ ಅದೆಷ್ಟೋ ಜೀವಗಳ ಮರುಹುಟ್ಟಿಗೆ ಕಾರಣವಾಗಬಲ್ಲುದು ಈ ರಕ್ತದಾನದ ಮಹತ್ವವನ್ನು ಅರಿತಿರುವ ಪಟ್ಲಾ ಪೌಂಡೇಶನ್ ನ ಬಹರೈನ್ ಸೌದಿ ಘಟಕವು ಇದೆ ಫೆಬ್ರವರಿ 17ರಂದು ಸಲ್ಮಾನಿಯ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸಾಮೂಹಿಕ ರಕ್ತ ದಾನ ಶಿಬಿರವನ್ನು ಆಯೋಜಿಸಿದೆ . ಖ್ಯಾತ ಭಾಗವತರಾದ ಯಕ್ಷ ಧ್ರುವ ಪಟ್ಲಾ ಸತೀಶ್ ರವರ ಸಾರಥ್ಯದಲ್ಲಿ ಅಶಕ್ತ ಕಲಾವಿದರ ನೆರವಿಗಾಗಿ ಅಸ್ತಿತ್ವಕ್ಕೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಪಂಚಾಯತ್ ನ ಉಪ ಚುನಾವಣೆ ಗೆ ಭಾಜಪಾ ಕಡೆಯಿಂದ ಯತೀಶ್ ಡಿ.ಬಿ ನಾಮಪತ್ರ ಸಲ್ಲಿಕೆ

ಆರ್ಯಾಪು ಚುನಾವಣೆ ಅಧಿಕಾರಿ ತ್ರಿವೇಣಿ ರಾವ್ ರವರಿಗೆ ನಾಮಪತ್ರ ಸಲ್ಲಿಸಿದರು… ಈ ಸಂದರ್ಭದಲ್ಲಿ ಭಾಜಪಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಭಾಜಪಾ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕುಮಾರ್ ಶಾಂತಿವನ,ಆರ್ಯಾಪು ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಮೇಗಿನ ಪಂಜ,ಜಿಲ್ಲಾ

ಶಿವಪಾಡಿಯಲ್ಲಿ ಬಾಲಶಿವ ವೇಷಭೂಷಣ ಸ್ಪರ್ಧೆ

ಅತಿರುದ್ರ ಮಹಾಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 12, 2023 ರಂದು ನಡೆದ ‘ಸಮರ್ಪಣ ದಿವಸ’ದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150ಕ್ಕೂ ಹೆಚ್ಚಿನ ಪುಟಾಣಿ ಬಾಲಶಿವ ವೇಷಭೂಷಣಧಾರಿಗಳು ಭಾಗವಹಿಸಿದ್ದರು. ಶಿವ ದೇವಸ್ಥಾನದ ಪ್ರಾಂಗಣವು ಬಾಲಶಿವರುಗಳಿಂದ ತುಂಬಿ ತುಳುಕಿ ಭಕ್ತ ಸಮೂಹ ಪುಳಕಿತಗೊಂಡಿತು.

ಬೆಳ್ತಂಗಡಿ: ಎರಡೇ ತಾಸಿನಲ್ಲಿ ಗಡಾಯಿಕಲ್ಲು ಏರಿ ದಾಖಲೆ ನಿರ್ಮಿಸಿದ ಕೋತಿರಾಜ್

ಬೆಳ್ತಂಗಡಿ: ಜ್ಯೋತಿರಾಜ್ ಯಾನೆ ಕೋತಿ ರಾಜ್ ಎಂದೇ ಖ್ಯಾತಿಯಾಗಿರುವ ಮಂಕಿ ಮ್ಯಾನ್ ಎರಡೇ ತಾಸಿನಲ್ಲಿ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಬಂಡೆ ಏರಿ ದಾಖಲೆ ನಿರ್ಮಿಸಿದ್ದಾರೆ. ಕೈ ಮೂಲಕ ಸಮುದ್ರ ಮಟ್ಟದಿಂದ 1700 ಅಡಿಯಿರುವ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಏರುವ ಮೂಲಕ ದಿ ಮಂಕಿ ಮ್ಯಾನ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರವಿವಾರ ಬೆಳಗ್ಗೆ ಇಲ್ಲಿನ ಚಂದ್ರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದನೂತನ ಶಾಖೆ ಶುಭಾರಂಭ

ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 10 ನೇ ಕಾವಳಮುಡೂರು – ಎನ್. ಸಿ.ರೋಡು ಶಾಖೆ ಕಾವಳಮೂಡೂರು ಗ್ರಾಮದ ಎನ್.ಸಿ. ರೋಡಿನಲ್ಲಿರುವ ತೌಹೀದ್ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.ನೂತನ ಶಾಖೆಯನ್ನು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರಿಗೆ ಆರ್ಥಿಕ ವ್ಯವಹಾರವನ್ನು ಒದಗಿಸುವ ಕಾರ್ಯವನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮಾಡಿಕೊಂಡು

ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸ್ನೇಹಿತೆಯರ ಅಂಗಡಿ ಆಕಸ್ಮಿಕವಾಗಿ ಬೆಂಕಿಗಾಹುತಿ 

ಉಳ್ಳಾಲ: ಅಗ್ನಿ ಆಕಸ್ಮಿಕ ನಡೆದ ಪರಿಣಾಮ ಫಾಸ್ಟ್ ಫುಡ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ. ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ. ಕುಂಪಲ ಆಶ್ರಯ ಕಾಲನಿಯ ನಿವಾಸಿಗಳು ಸ್ನೇಹಿತೆಯರಾದ ಮೋಹಿನಿ ಮತ್ತು ದೀಕ್ಷಿತ ಜತೆಯಾಗಿ ಸಾಲ ಮಾಡಿ ಸಂಜೆ ಹೊತ್ತಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದರು.ಫಾಸ್ಟ್ ಫುಡ್ ವ್ಯಾಪಾರದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸ್ನೇಹಿತೆಯರೀಗ