ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ; ಎಣ್ಣೆ ತೆಗೆಯುತ್ತಾರೆ.

ಟರ್ಕಿ ದೇಶವು ಪ್ರತಿ ವರುಷ 30,000 ಟನ್ ಗಸಗಸೆ ಬೆಳೆಯುತ್ತದೆ. ಜಾಗತಿಕ ರಫ್ತು ಮಾರುಕಟ್ಟೆಯ 33 ಶೇಕಡಾ ಈ ದೇಶದ್ದಾಗಿದೆ. ಜಜ್ಜಿ ಚೆಕ್ಕೆ, ಹುರಿದು ಪೊಟ್ಟಣ ಮಾಡಿ ರಫ್ತುಮಾಡುತ್ತಾರೆ. ಉಳಿದ ರಫ್ತು ದೇಶಗಳು ಮತ್ತು ಉತ್ಪಾದನೆ ಇಂತಿವೆ.ಜೆಕ್ ರಿಪಬ್ಲಿಕ್ 11,000 ಟನ್, ಭಾರತ 10,000 ಟನ್, ಹಂಗೆರಿ 7,000 ಟನ್, ಸ್ಲೊವೇಕಿಯಾ 3,5000 ಟನ್, ಪೋಲೆಂಡ್ 2,5000 ಟನ್. ಇತರ ಗಸಗಸೆ ಬೆಳೆಯುವ ದೇಶಗಳೆಂದರೆ ಅಫಘಾನಿಸ್ತಾನ, ಅಸ್ಟೇಲಿಯಾ, ಚೀನಾ ಮೊದಲಾದವು.
