ಉಡುಪಿ :ಪೂರೈಕೆ ಸ್ಥಗಿತಗೊಳಿಸಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಪ್ರತಿಭಟನೆ
ತಮ್ಮ ಸಮಸ್ಯೆಗಳನ್ನು ಬಗೆಹರಿಸದಿರುವ ಉಡುಪಿಯ ಸ್ವಿಗ್ಗಿ ಮೆನೇಜರ್ ವಿರುದ್ದ ಸ್ವಿಗ್ಗಿ ಬಾಯ್ಸ್ ಸಿಡಿದೆದ್ದಿದ್ದಾರೆ .ಉಡುಪಿ ಮಣಿಪಾಲದಲ್ಲಿ ಡೆಲಿವೆರಿ ಮಾಡುತ್ತಿದ್ದ ನೂರಾರು ಡೆಲಿವೆರಿ ಬಾಯ್ಸ್ ಡೆಲಿವೆರಿ ಸ್ಥಗಿತಗೊಳಿಸುವುದರ ಮೂಲಕ ಪ್ರತಿಭಟನೆ ನಡೆಸಿದ್ದಾರೆ.ಕಳೆದ ಮೂರು ವರುಷಗಳಿಂದ ಡೆಲಿವೆರಿ ಬಾಯ್ಸ್ ಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಬ್ಬ ಅಧಿಕಾರಿಯಿಲ್ಲ.ಉಡುಪಿಗೊಂದು ಕಚೇರಿಯಿಲ್ಲ .ಮೆನೇಜರ್ ಎನ್ನುವ ಒರ್ವ ವ್ಯಕ್ತಿಯಿದ್ದು ,ಫೋನ್ ಮೂಲಕ ಮಾತ್ರ ಸಂಪರ್ಕದಲ್ಲಿದ್ದಾರೆ,ಇವರ ಬಳಿ ಸಮೆಸ್ಯೆಗಳನ್ನು ಹೇಳಿಕೊಂಡರು ಯಾವುದೇ ಪ್ರಯೋಜನವಿಲ್ಲ .ಅಷ್ಟೇ ಅಲ್ಲದೇ ಈಗಿರುವ ಮೆನೇಜರ್ ಡೆಲಿವೆರಿ ಬಾಯ್ಸ್ ಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅರೋಪಿಸಿ ಪ್ರತಿಭಟನೆ ನಡೆಸಿದರು.
ಸದ್ಯ ಸ್ವಿಗ್ಗಿಯಲ್ಲಿ ದುಡಿಯುವ ಯಾವುದೇ ಡೆಲಿವೆರಿ ಬಾಯ್ಸ್ ಗಳಿಗೆ ಯಾವುದೇ ರಕ್ಷಣೆ ಇಲ್ಲ.ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದರೂ ಸ್ವಿಗ್ಗಿ ಡೆಲಿವೆರ್ ರೇಟ್ ಕಾರ್ಡ್ ಜಾಸ್ತಿ ಮಾಡುತ್ತಿಲ್ಲ .ಥರ್ಡ್ ಪಾರ್ಟಿ ಅಪ್ ಗಳಿಗೆ ಅರ್ಡರ್ ನೀಡುವುತ್ತಿರುವುದರಿಂದ ಇಲ್ಲಿ ದುಡಿಯುತ್ತಿರುವವರಿಗೆ ಅನ್ಯಾಯವಾಗುತ್ತಿದೆ.ಅಷ್ಟೇ ಅಲ್ಲದೇ ಇವರೆಗೂ ಒಂದೇ ಒಂದು ರೂಪಾಯಿ ಬೋನಸ್ ಗಳನ್ನು ನೀಡಿಲ್ಲ,ಇವುಗಳನ್ನು ಈಗಿರುವ ಮೆನೇಜರ್ ಬಳಿ ಕೇಳಿದಾಗ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ.ಅಷ್ಟೇ ಅಲ್ಲದೇ ಪ್ರಶ್ನೆ ಮಾಡಿದವರನ್ನು ಬೆದರಿಸುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರ ಅರೋಪವಾಗಿದೆ.ಹೀಗಾಗಿ ಸದ್ಯ ಇರುವ ಮೆನೇಜರ್ ನ್ನು ತಕ್ಷಣ ಬದಲಾಯಿಸುವಂತೆ ಡೆಲಿವೆರಿ ಬಾಯ್ಸ್ ಅಗ್ರಹವಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಉಡುಪಿ ಹಾಗೂ ಮಣಿಪಾಲದಲ್ಲಿ ಸ್ವಿಗ್ಗಿ ಡೆಲಿವೆರಿ ಸ್ಥಗಿತರಗೊಂಡಿದೆ.ಈ ವರೆಗೂ ಕಾರ್ಮಿಕರ ಜೊತೆ ಸಂಸ್ಥೆಯ ಯಾವುದೇ ಮೇಲಾಧಿಕರಿಗಳು ಮಾತುಕತೆಗೆ ಬಂದಿಲ್ಲ.ಸ್ವಿಗ್ಗಿ ಡೆಲಿವೆರಿ ಬಾಯ್ಸ್ ಸಮಸ್ಯೆಗಳನ್ನ ಮನಗಂಡು ಉಡುಪಿ ತುಳುನಾಡು ರಕ್ಷಣಾ ವೇದಿಕೆ ಡೆಲಿವೆರಿ ಬಾಯ್ಸ್ ಬೆಂಬಲಕ್ಕೆ ನಿಂತಿದೆ.ಡೆಲಿವೆರಿ ಬಾಯ್ಸ್ ಸಮಸ್ಯೆಗಳನ್ನು ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ .ಅದರೆ ಸಂಸ್ಥೆ ಮಾತ್ರ ಈವರೆಗೂ ಡೆಲಿವೆರಿ ಬಾಯ್ಸ್ ಸಮಸ್ಯೆಗಳನ್ನ ಬಗೆ ಹರಿಸಲು ಮುಂದಾಗಿಲ್ಲ ಎನ್ನುವುದು ತಿಳಿದು ಬಂದಿದೆ .



















