ವಿಶ್ವಬ್ರಾಹ್ಮಣ ಯುವ ಸಂಘಟನೆ (ರಿ.)ಚತುರ್ಥ ಬಾರಿಯ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ
ಕಾಪು: ಕಟಪಾಡಿ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ವಿಶ್ವ ಬ್ರಾಹ್ಮಣ ಸಂಘಟನೆಯ ದಶಮಾನೋತ್ಸವ ಸಂಭ್ರಮ ಹಾಗೂ ಚತುರ್ಥ ಬಾರಿಯ ಸಾಮೂಹಿಕ ವಿವಾಹದಲ್ಲಿ ಡಿ 10 ವಿಶ್ವಕರ್ಮ ಸಮಾಜದ 12 ಜೋಡಿಗಳು ಹಸೆಮನೆ ಏರಲಿದ್ದಾರೆ. ಕಳೆದ 3 ಬಾರಿ ಸಾಮೂಹಿಕ ಮದುವೆಯಲ್ಲಿ 36 ಜೋಡಿ ಹಸೆಮನೆ ಏರಿದ್ದಾರೆ. ವಧುವರರ ಅನ್ವೇಷಣೆ ಮೂಲಕ 600ಕ್ಕೂ ಹೆಚ್ಚು ವಧುಗಳಿಗೆ ಸೂಕ್ತ ವರನನ್ನು ಹೊಂದಾಣಿಕೆ ಮಾಡುವಲ್ಲಿ ಸಹಕಾರಿಯಾಗಿದೆ. ಬಡಹೆಣ್ಣು ಮಕ್ಕಳಿಗೆ ಪೂರಕವಾದ ಈ ಕಾರ್ಯಕ್ರಮದ ನೋಂದಣಿ ವೆಚ್ಚ ರೂ. 1000/- ಹೊರತು ಪಡಿಸಿ ಉಳಿದ ವಿವಾಹದ ಖರ್ಚುಗಳು ಸಂಪೂರ್ಣ ಉಚಿತವಾಗಿದೆ.
ವಧುವಿಗೆ ಸೀರೆ, ಚಿನ್ನದ ತಾಳಿಗುಂಡು, ಬೆಳ್ಳಿಯ ಕರಿಮಣಿ, ಕಾಲುಂಗುರ, ವರನಿಗೆ ಪಂಚೆ, ಶಾಲು, ಪೇಟ, ಬಾಸಿಂಗ, ಪ್ರತ್ಯೇಕ ಮಂಟಪ, ಪ್ರತಿ ಮಂಟಪಕ್ಕೆ ಪ್ರತ್ಯೇಕ ಪುರೋಹಿತರು, ಸುಮಾರು 5000 ಜನರ ನಿರೀಕ್ಷೆ, 15 ಲಕ್ಷ ಅಂದಾಜು ಖರ್ಚು, ದಾನಿಗಳ ಸಹಕಾರ ಸಂಘಟನೆಯ ಪರಿಶ್ರಮದಿಂದ ನೇರವೇರಲಿದ್ದು, ಸಭಾಕಾರ್ಯಕ್ರಮದ ಉದ್ಘಾಟನೆ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಕುತ್ಯಾರು, ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹಾಸನರವರು ನೇರವೇರಿಸಲಿದ್ದು, ಸಭಾ ಅಧ್ಯಕ್ಷತೆ ಸಂಘಟನೆ ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು ವಹಿಸಲಿದ್ದಾರೆ. ಮಹಾನ್ ದಾನಿಗಳಾದ ಶ್ರೀ ಕೃಷ್ಣ ವಿ. ಆಚಾರ್ಯ ಮುಂಬಯಿ, ಶ್ರೀ ಧನಂಜಯ ಪಾಲ್ಕೆ, ಶ್ರೀ ವಿಶ್ವನಾಥ್ ರಾವ್, ಕತಾರ್. ಶ್ರೀ ಡಾ.ಬಿ.ಆರ್. ಶ್ರೀನಿವಾಸ ರಾವ್ ಇವರುಗಳು ಗೌರವ ಸನ್ಮಾನಿತರಾಗಿ ಉಪಸ್ಥಿತರಿದ್ದು, ಮುಖ್ಯ ಅಥಿತಿಗಳಾಗಿ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ಜನತಾದಳ ಜಿಲ್ಲಾಧ್ಯಕ್ಷರಾದ ಶ್ರೀ ಯೋಗೀಶ ವಿ ಶೆಟ್ಟಿ, ಶ್ರೀ ಮುರಹರಿ ಕೆ ಆಚಾರ್ಯ-ಆಡಳಿತ ಮೊಕೇಸರರು ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ, ಶ್ರೀ ಗಣೇಶ ಆಚಾರ್ಯ-ಆಡಳಿತ ಮೊಕ್ತಸರರು ಕಾಳಿಕಾಂಬ ದೇವಸ್ಥಾನ ಕಾಪು, ಶ್ರೀ ಶ್ರೀಧರ ಆಚಾರ್ಯ ವಡೇರ ಹೋಬಳಿ ಅಧ್ಯಕ್ಷರು ಆನೆಗುಂದಿ ಪ್ರತಿಷ್ಠಾನ(ರಿ), ಶ್ರೀ ಮಧು ಆಚಾರ್ಯ ಮುಲ್ಕಿ-ದ.ಕ. ಒಕ್ಕೂಟ ಅಧ್ಯಕ್ಷರು, ಗೌರವ ಅಧ್ಯಕ್ಷರಾದ ಶ್ರೀ ಸದಾಶಿವ ಆಚಾರ್ಯ ಕುತ್ಯಾರು, ಮಹಾಪೋಷಕರಾದ ಶ್ರೀ ಯೋಗೀಶ ಆಚಾರ್ಯ ಅಲೆವೂರು, ಶ್ರೀ ವಿಶ್ವನಾಥ ಆಚಾರ್ಯ ಕರಂಬಳ್ಳಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸಂಸ್ಥೆಯು ಹತ್ತು ವರುಷಗಳಲ್ಲಿ ಆರೋಗ್ಯ ಸಮಸ್ಯೆ, ಅಶಕ್ತರಿಗೆ, ಬಡವಿದ್ಯಾರ್ಥಿಗಳಿಗೆ, ಮನೆರಚನೆಗಳಿಗೆ ಸಹಾಯಧನ, ಕೌಟುಂಬಿಕ ಕಲಹಗಳ ತೀರ್ಮಾನ, ಪ್ರತಿಭಾವಂತರಿಗೆ, ಸಾಧಕರಿಗೆ, ಕಲಾವಿದರಿಗೆ, ಹಿರಿಯರಿಗೆ ಸನ್ಮಾನ, ಹೀಗೆ ಸಮಾಜದ ನೊಂದ ಮನಸ್ಸುಗಳಿಗೆ ಆಸರೆಯಾಗಿ ಆಧಾರವಾಗಿದ್ದು ಮಾರ್ಗದರ್ಶಿಯಾಗಿ ಸೇವೆ ಮಾಡುತ್ತಿದೆ ಎಂದು ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ವಿಜಯ ಆಚಾರ್ಯ ಪಡುಬಿದ್ರಿ, ರಾಜೇಶ್ ಆಚಾರ್ಯ ಮುಂಚಕಲ್ಲು,ಯಜ್ಞನಾಥ ಆಚಾರ್ಯ ಬಾಳ್ಕಟ್ಟ, ಹರೀಶ್ ಆಚಾರ್ಯ ಕಳತ್ತೂರು, ಸತೀಶ್ ಆಚಾರ್ಯ ಪಡುಬಿದ್ರಿ, ರತ್ನಾಕರ ಕುರ್ಕಾಲು, ಗಣೇಶ್ ಆಚಾರ್ಯ ಹೆಜಮಾಡಿ, ರಾಜೇಶ್ ಆಚಾರ್ಯ ಬಿಳಿಯೂರು,ಸುಂದರ ಆಚಾರ್ಯ ಕಟಪಾಡಿ,ರವಿ ಪುರೋಹಿತರು ಬಂಟಕಲ್ಲು, ಯೋಗೀಶ್ ಆಚಾರ್ಯ ಹಿರಿಯಡ್ಕ ಹಾಗೂ ಸಂತೋಷ್ ಪುರೋಹಿತ್ ಕಳತ್ತೂರು ಮತ್ತು ಸುಧೀಶ್ ಆಚಾರ್ಯ ಕಾಪು, ಪ್ರಸಾದ್ ಆಚಾರ್ಯ ಅವರಾಲು ಉಪಸ್ಥಿತರಿದ್ದರು.


















