ಭಾರತದ ಅತಿ ಹಳೆಯ ಬ್ಯಾಂಕು ಯಾವುದು?

ಮದ್ರಾಸ್ ಬ್ಯಾಂಕ್ ಭಾರತದ ಅತಿ ಹಳೆಯ ಬ್ಯಾಂಕಾಗಿದೆ. ಅತಿ ಹಳೆಯ ಬ್ಯಾಂಕುಗಳಲ್ಲಿ ದಿವಾಳಿ ಆದುದು ಬ್ಯಾಂಕ್ ಆಫ್ ಹಿಂದೂಸ್ತಾನ್.1683ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು ಬ್ರಿಟಿಷ್ ವ್ಯಾಪಾರಿಗಳಿಗಾಗಿ ಮದ್ರಾಸ್ ಬ್ಯಾಂಕ್ ಸ್ಥಾಪಿಸಿದರು. ಇದು 1843 ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಆಗಿ, ಅನಂತರ ಇಂಪೀರಿಯಲ್ ಬ್ಯಾಂಕ್ ಆಗಿ, ಬ್ರಿಟಿಷರ ಬಳಿಕ ಎಸ್‌ಬಿಐ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿತು.ಭಾರತದ ಇತರ ಹಳೆಯ ಬ್ಯಾಂಕುಗಳು. ಬ್ಯಾಂಕ್ ಆಫ್ ಬಾಂಬೆ 1720ರಲ್ಲಿ ತೊಡಗಿ 1770 ರಲ್ಲಿ ಮುಚ್ಚಿತು. 1770 ರಲ್ಲಿ ಆರಂಭವಾದ ಬ್ಯಾಂಕ್ ಆಫ್ ಹಿಂದೂಸ್ತಾನ್ 1832 ರಲ್ಲಿ ದಿವಾಳಿ ಆಯಿತು. ದಿವಾಳಿ ಆದ ಭಾರತದ ಅತಿ ಹಳೆಯ ಬ್ಯಾಂಕ್ ಇದು.

ಜನರಲ್ ಬ್ಯಾಂಕ್ ಆಫ್ ಬೆಂಗಾಲ್ ಆಂಡ್ ಬಿಹಾರ್ 1773 ರಲ್ಲಿ ತೆರೆದುದು, 1791 ರಲ್ಲಿ ಮುಚ್ಚುಗಡೆ ಆಯಿತು. ಜನರಲ್ ಬ್ಯಾಂಕ್ ಆಫ್ ಇಂಡಿಯಾ 1786 ರಲ್ಲಿ ಮೊದಲ್ಗೊಂಡು 1791ರಲ್ಲಿ ಕ್ಲೋಸಾಯಿತು. 1788ರಲ್ಲಿ ಆರಂಭವಾದುದು ಕರ್ನಾಟಿಕ್ ಬ್ಯಾಂಕ್. ಮುಂದೆ ಬ್ಯಾಂಕ್ ಆಫ್ ಮದ್ರಾಸ್‌ನಲ್ಲಿ ವಿಲೀನವಾದ ಇದು ಅಂತಿಮವಾಗಿ ಎಸ್‌ಬಿಐ ಆಯಿತು. ಬ್ರಿಟಿಷ್ ಬ್ಯಾಂಕ್ ಆಫ್ ಮದ್ರಾಸ್ 1795ರಲ್ಲಿ, ದ ಏಶಿಯಾಟಿಕ್ ಬ್ಯಾಂಕ್ 1804ರಲ್ಲಿ ತೆರೆಯಲ್ಪಟ್ಟವುಗಳು. ಇವು ಎರಡೂ ಕರ್ನಾಟಿಕ್ ಬ್ಯಾಂಕ್ ಮಾದರಿಯಲ್ಲೇ ಎಸ್‌ಬಿಐ ಒಳ ಹೋಗಿವೆ.ಬ್ಯಾಂಕ್ ಆಫ್ ಕಲ್ಕತ್ತಾ 1806ರಲ್ಲಿ ತೆರೆದುದು. ಮುಂದೆ ಇಂಪೀರಿಯಲ್ ಬ್ಯಾಂಕ್ ಭಾಗವಾಗಿ, ಬ್ರಿಟಿಷರು ಹೋದ ಬಳಿಕ ಎಸ್‌ಬಿಐ ಪಾಲಾಯಿತು.
