ಯುವ ವಾಹಿನಿ ಪಡುಬಿದ್ರಿ ಘಟಕ ಬಿಲ್ಲವ “ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್” ಪೋಸ್ಟರ್ ಬಿಡುಗಡೆ

ಪಡುಬಿದ್ರಿ:ಯುವ ವಾಹಿನಿ ಪಡುಬಿದ್ರಿ ಘಟಕದ ಸಾರಥ್ಯದಲ್ಲಿ 2026ರ ಜನವರಿ 31ಹಾಗೂ ಫೆಬ್ರವರಿ 01ನೇ ತಾರೀಕು ಅಂತರ್ ರಾಷ್ಟ್ರೀಯ ಮಟ್ಟದ ಬಿಲ್ಲವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಹೆಜಮಾಡಿಯ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅದರ ಪೂರ್ವಬಾವಿಯಾಗಿ ಅದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪಡುಬಿದ್ರಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ರಿಕೆಟ್ ತರಬೇತುದಾರರಾದ ವೈ.ಉದಯ ಕುಮಾರ್ ಕಟಪಾಡಿ ಅವರು ಅಂತರ್ ರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾಕೂಟ ನಡೆಸುವಷ್ಟು ಬಲಾಡ್ಯ ಹೊಂದಿರುವ ಪಡುಬಿದ್ರಿ ಯುವ ವಾಹಿನಿ ಘಟಕಕ್ಕೆ ಶುಭ ಹಾರೈಸಿ, ಈ ಪಂದ್ಯಾಕೂಟದಲ್ಲಿ ಭಾಗವಹಿಸುವ ಕ್ರಿಕೆಟ್ ಪಟುಗಳು ಕೇವಲ ಟೆನ್ನಿಸ್ ಬಾಲ್ ಗೆ ಮಾತ್ರ ಸೀಮಿತವಾಗದೆ ಲೆದರ್ ಬಾಲ್ ನಲ್ಲೂ ಅಭ್ಯಾಸ ನಡೆಸುವ ಮೂಲಕ ನಮ್ಮ ದೇಶದ ತಂಡದಲ್ಲೂ ಆಡುವಂತಾಗಬೇಕು. ಈ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತುದಾರರಿಂದ ತರಬೇತಿ ನೀಡುವ ಅಗತ್ಯವಿದೆ ಎಂದರು.

ಮತ್ತೊರ್ವ ಅತಿಥಿ ಶರತ್ ಶೆಟ್ಟಿ ಮಾತನಾಡಿ, ಅಂತರ್ ರಾಷ್ಟ್ರೀಯ ಸಂಸ್ಥೆಗಳಾದ ಜೇಸಿ, ರೋಟರಿ, ಲಯನ್ಸ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಎಲ್ಲಾ ಮಜಲುಗಳಲ್ಲಿ ಮಿಂಚುವ ಪ್ರತಿಭೆಗಳು ಈ ಪಡುಬಿದ್ರಿ ಯುವ ವಾಹಿನಿ ಸಂಸ್ಥೆಯವರು ಎಂಬುದು ಸಂತೋಷದ ವಿಚಾರವೆಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಧಿತಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ. ನಮ್ಮ ಜಾತಿ ವ್ಯವಸ್ಥೆಗಳು ಕೇವಲ ನಮ್ಮ ನಮ್ಮ ಮನೆಗೆ ಮೀಸಲಾಗಿರ ಬೇಕು, ಉಳಿದಂತೆ ಬ್ರಹ್ಮಶ್ರೀ ನಾರಾಯಗುರುಗಳ ವಾಕ್ಯದಂತೆ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬಂತ್ತಿರ ಬೇಕು ಎಂದರು.

ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳ ಉಪಸ್ಥಿತಿಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾಕೂಟದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿ ಘಟಕದ ಅಧ್ಯಕ್ಷ ವಿಧಿತ್ ಕರ್ನಿರೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಲಕ್ಷ್ಮಣ್ ಪೂಜಾರಿ, ರವಿ ಕೆ. ಸಾಲ್ಯಾನ್, ಡಾ.ಎನ್.ಟಿ.ಅಂಚನ್, ಶ್ರವಣ್ ಕುಮಾರ್ ಉಪಸ್ಥಿತರಿದ್ದು, ಸುಜೀತ್ ಕುಮಾರ್ ಸ್ವಾಗತಿಸಿ, ವಂದಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ್ ಕೆರೆಮನೆ ಹಾಗೂ ಯಶೋಧ ಪಡುಬಿದ್ರಿ ನಿರ್ವಹಿಸಿದರು.

Related Posts

Leave a Reply

Your email address will not be published.