ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಜೂನ್ 18 ಮತ್ತು 19ರಂದು ಅಂತರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್
ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫರ್ಮೇಶನ್ ಸೈನ್ಸ್ನ ವತಿಯಿಂದ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಕಂಪ್ಯೂಟರ್ ಸಯನ್ಸ್ ಮತ್ತು ಇನ್ಫರ್ಮೇಶನ್ ಸಯನ್ಸ್” ಎಂಬ ವಿಷಯದ ಕುರಿತು ಅಂತರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್ವು ಜೂನ್ 18 ಮತ್ತು 19ರಂದು ನಡೆಯಲಿದೆ.
ಈ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಜೂನ್ 18ರಂದು ಆನ್ಲೈನ್ ಮುಖಾಂತರ ನಡೆಸಲಾಗುವುದು.
ಯು.ಎಸ್.ಎ.ಯ ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೊರಿಡಾದ ಪೋಸ್ಟ್ ಡಾಕ್ಟೊರಲ್ ರಿಸರ್ಚರ್ ಡಾ. ಸ್ಟೀವನ್ ಫೆರ್ನಾಂಡಿಸ್, ಆಸ್ಟ್ರೇಲಿಯಾದ ಸದರ್ನ್ ಕ್ರಾಸ್ ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಡಾ. ಅಲ್ ರೆಝಾ ಅಲೈ ಇವರು ಹಾಗೂ ಮಲೇಷಿಯಾದ ಮಲಯಾ ವಿಶ್ವವಿದ್ಯಾನಿಲಯದ ಗಣಕ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಶಿವ ಕುಮಾರ್ ಇವರು ಈ ಸಂದರ್ಭದಲ್ಲಿ ಮಾಹಿತಿ ನೀಡಲಿರುವರು.
ಡಾ. ಅಲ್ ರೆಝಾ ಅಲೈರವರು “ಕೃತಕ ಬುದ್ಧಿಮತ್ತೆ ಹಾಗೂ ಬಿಗ್ ಡೇಟಾ ಅನಾಲಿಸಿಸ್ ಮುಖಾಂತರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾನವನ ಸಂತೃಪ್ತಿಯನ್ನು ಅಳೆಯುವುದು” ಎಂಬ ವಿಷುದ ಕುರಿತಾಗಿ ಹಾಗೂ ಡಾ. ಶಿವ ಕುಮಾರ್ ರವರು “ ಫೋರ್ಜ್ಡ್ ಟೆಕ್ಸ್ಟ್ ಡಿಟೆಕ್ಷನ್” ಹಾಗೂ ಒಮಾನ್ ನ ಮಿಡಲ್ ಈಸ್ ಕಾಲೇಜಿನ ಫ್ಯಾಕಲ್ಟಿ ಪ್ರೋಗ್ರಾಮ್ ಮ್ಯಾನೇಜರ್ ಡಾ. ಪ್ರಕಾಶ್ ಕುಮಾರ್ ಉಡುಪಿ ಇವರು “ಲೀನ್ ಐಟಿ ಆ್ಯಂಡ್ ಎಫ್ ಒ ಎಸ್ ಎಸ್” ಎಂಬ ವಿಷಯದ ಕುರಿತಾಗಿ ಉಪನ್ಯಾಸಗಳನ್ನು ನೀಡಲಿರುವರು.
ಸಮ್ಮೇಳನದಲ್ಲಿ ವಿವಿಧ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಂದ ಸುಮಾರು 60 ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಲಾಗುವುದು.
ಡಾ. ಅರುಣ್ ಕುಮಾರ್ ಬಿ. ಆರ್., ಡಾ. ನಾಗೇಶ್ ಹೆಚ್. ಆರ್., ಡಾ. ಕರುಣಾ ಪಂಡಿತ್, ಡಾ. ಮಂಜುಳಾ ಸಂಜಯ್, ಡಾ. ಹಂಸವತ್ ಭಾರದ್ವಾಜ್, ಡಾ. ಶೈಲಶ್ರೀ ಇವರುಗಳು ಸಂಶೋಧನ ಪ್ರಬಂಧಮಂಡನಾ ಕಾರ್ಯಕ್ರಮವನ್ನು ನಡೆಸಲಿರುವರು.
ಜೂನ್ 19ರ ಶನಿವಾರದಂದು ವಿಚಾರ ಸಂಕಿರಣದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ “ಭಾರತೀಯ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಆಧಾರದ ಮೇಲೆ ವಿದ್ಯಾರ್ಥಿ ಕೇಂದ್ರಿತ ಅಧ್ಯಾಪಕ-ಕೇಂದ್ರಿತ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ನಿರೀಕ್ಷಿತ ಬೆಳವಣಿಗೆಗಳು” ಎಂಬ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿರುವರು.
ಡಾ. ಸ್ಟೀವನ್ ಫೆರ್ನಾಂಡಿಸ್, ಪೋಸ್ಟ್ ಡಾಕ್ಟೊರಲ್ ರಿಸರ್ಚರ್, ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೊರಿಡಾ, ಯು.ಎಸ್.ಎ. ಇವರಿಂದ “ಡೀಪ್ ಲರ್ನಿಂಗ್ ಆ್ಯಂಡ್ ಕಂಪ್ಯೂಟರ್ ವಿಶನ್” ಎಂಬ ವಿಷಯದ ಕುರಿತಾಗಿಯೂ, ಡಾ. ಅಲ್ವಿನ್ ಸಂಬುಲ್, ಪ್ರಾಧ್ಯಾಪಕರು, ಸಾಮ್ ರತುಲಂಗಿ ವಿಶ್ವವಿದ್ಯಾನಿಲಯ, ಇಂಡೋನೇ಼ಷಿಯಾ ಇವರಿಂದ “ಇನ್ಸ್ಟ್ರಕ್ಷನಲ್ ಎಂಫಸಿಸ್ ಆನ್ ಲರ್ನಿಂಗ್ ಔಟ್ ಕಮ್” ಎಂಬ ವಿಷಯದ ಕುರಿತಾಗಿ ಉಪನ್ಯಾಸ ನಡೆಯಲಿರುವುದು.
ಹೆಚ್ಚಿನ ವಿವರಗಳಿಗಾಗಿ ಕಾನ್ಫರೆನ್ಸ್ ವೆಬ್ ಸೈಟ್https://icetcst.com/ನ ಸಹಾಯವನ್ನು ಪಡೆಯಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


















