Home 2022 December (Page 5)

ಶಬರಿಮಲೆ ಯಾತ್ರೆ : ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಲು ಖಾದರ್ ಮನವಿ

ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಮತ್ತು ಮರಳಿ ಬರುವ ಅಯ್ಯಪ್ಪ ಮಾಲಾಧಾರಿಗಳಿರುವ ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಬೇಕು ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ಮನವಿ ಮಾಡಿದ್ದಾರೆ. ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪಮಾಲಾಧಾರಿಗಳ ವಾಹನಗಳಿಗೆ ಕರ್ನಾಟಕ ಮತ್ತು ಕೇರಳದ ಎರಡೂ ರಾಜ್ಯಗಳ ತೆರಿಗೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕಡಬ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಸಚಿವರು ಆರಂಭದಲ್ಲಿ ಸಂಕಲ್ಪ ನೆರವೇರಿಸಿದರು. ಬಳಿಕ ಶ್ರೀ ದೇವರ ದರುಶನ ಪಡೆದು ಪಂಚಾಮೃತ ಮಹಾಭಿಷೇಕ ಸೇವೆಯನ್ನು ಸಮರ್ಪಿಸಿದರು. ನಂತರ

ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಕಾರು ಢಿಕ್ಕಿ , ಬಾಲಕ ಸ್ಥಳದಲ್ಲೇ ಸಾವು

ರಸ್ತೆ ಬದಿ ನಿಂತಿದ್ದ ಎಂಟನೇ ತರಗತಿ ವಿದ್ಯಾರ್ಥಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.ಬೋಳಿಯಾರು ಭಟ್ರಬೈಲು ನಿವಾಸಿ ಹರಿಶ್ಚಂದ್ರ -ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ. ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನು. ಶಾಲೆ ಬಿಟ್ಟು ಮನೆಗೆ ತೆರಳಲು

ಕಾಟಿಪಳ್ಳದ ಜಲೀಲ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣದಲ್ಲಿ ಪೆÇಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕಾಟಿಪಳ್ಳ ನಾಲ್ಕನೇ ಬ್ಲಾಕ್ ಕೃಷ್ಣಾಪುರ ನಿವಾಸಿ ಲಕ್ಷ್ಮೀಶ ದೇವಾಡಿಗ(28) ಬಂಧಿತ. ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಶೈಲೇಶ್ ಪೂಜಾರಿ, ಸವಿನ್ ಕಾಂಚನ್ ಮತ್ತು ಪವನ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಮೂಡುಬಿದಿರೆ : ಹಿಂದೂ ದೇವರುಗಳನ್ನು ಅವಮಾನಿಸಿ ಮಕ್ಕಳನ್ನು ಬಲತ್ಕಾರದ ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ವಿದ್ಯಾಗಿರಿಯಲ್ಲಿ ಬಂಧಿಸಿದ್ದಾರೆ. ಮೈಸೂರಿನ ನಿವಾಸಿ ಬೆಂಜಮಿನ್ ವಾಸ್ ಎಂಬಾತ ಬಂಧಿಸಲ್ಪಟ್ಟ ವ್ಯಕ್ತಿ. ವಿದ್ಯಾಗಿರಿಯಲ್ಲಿ ನಡೆಯುತ್ತಿದ್ದ ಸ್ಕೌಟ್ಸ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ

ಬೆಳ್ತಂಗಡಿಯ ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣ : ಆರೋಪಿಗಳ ಬಂಧನಕ್ಕೆ ಒತ್ತಾಯ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಕುರುಂಜಿ ಗ್ರಾಮದ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಗೈದಿರುವ ಆರೋಪಿಗಳ ಮೇಲೆ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ದಾಖಲಾದರೂ ರಾಜಕೀಯ ಒತ್ತಡಕ್ಕೆ ಒಳಗಾದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೆ ರಕ್ಷಣೆಗೆ ಮುಂದಾಗಿರುವ ಘಟನೆ ನಡೆದಿದೆ.

ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಜಾರಿಯಾಗಬೇಕು : ಆಟೋರಿಕ್ಷಾ ಚಾಲಕ ಮಾಲಕ ಸಂಘದ ವಿಷ್ಣುಮೂರ್ತಿ ಭಟ್ ಆಗ್ರಹ

ಮಂಗಳೂರು ನಗರ ಮತ್ತು ಗ್ರಾಮಾಂತರ ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಕೂಡಲೇ ಜಾರಿಯಾಗಬೇಕು. ರಿಕ್ಷಾ ಪಾರ್ಕ್‍ಗಳ ನೋಂದಾವಣಿಗೆ ವಿಳಂಬ ಮಾಡುತ್ತಿರುವುದು ಯಾಕೆ ಮತ್ತು ನಗರದೊಳಗೆ ಗ್ರಾಮಾಂತರ ರಿಕ್ಷಾಗಳ ಅಕ್ರಮ ಸಂಚಾರ ಮಾಡಿ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘಟಗಳ ಒಕ್ಕೂಟದ ಗೌರವಾಧ್ಯಕ್ಷರಾದ

ಜಲೀಲ್ ಕುಟುಂಬಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಂದ ಸಾಂತ್ವನ.

ಮತಾಂಧ ಕ್ರಿಮಿನಲ್ ಗಳಿಂದ ಕೊಲೆಗೀಡಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು. ಯಾರ ತಂಟೆತಕರಾರಿಗೂ

ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದಲ್ಲಿ ಕ್ರಿಸ್ಮಸ್ ಸಹಮಿಲನ

ಮಂಜೇಶ್ವರ : ಯೇಸು ಕ್ರಿಸ್ತರ ಬೋಧನೆಗಳಾದ ಪರಸ್ಪರ ಕ್ಷೇಮ ಪ್ರೀತಿ ಕರುಣೆ ದಯೆ ಸಹನೆ ಸೇವೆಯಿಂದ ಬಾಳುವ ಮೂಲಕ ಶಾಂತಿ ಸೌಹಾರ್ದತೆ ಬಂಧುತ್ವ ಸಮಾಜದಲ್ಲಿ ನೆಲೆಗೊಳ್ಳಲಿ. ಪ್ರಮುಖವಾಗಿ ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ ಮಾತ್ರವಲ್ಲದೆ ಇದುವೇ ಕ್ರಿಸ್ಮಸ್ ಸಂದೇಶವಾಗಿದೆ ಎಂದು ಮಂಜೇಶ್ವರ ಮರ್ಸಿ ಅಮ್ಮನ ದೇವಾಲಯದ ಧರ್ಮಗುರು ಎಡ್ವಿನ್ ಪಿಂಟೋ

ಮೂಡುಬಿದಿರೆಯಲ್ಲಿ 20 ಅಕ್ರಮ ಕಸಾಯಿಖಾನೆಗಳು….!!ಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಿಂಜಾವೇ ಎಚ್ಚರಿಕೆ

ಮೂಡುಬಿದಿರೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಅಕ್ರಮ ಕಸಾಯಿಖಾನೆಗಳಿದ್ದು, ಪೊಲೀಸರು ಈ ಅಕ್ರಮ ಕಸಾಯಿಖಾನೆಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರಗಿಸದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರವನ್ನು ನೀಡುತ್ತಿದ್ದು ಈ ಬಗ್ಗೆ ಉಗ್ರ ಹೋರಾಟವನ್ನು ಮಾಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಸಮಿತ್