Home 2023 May (Page 10)

ಪುತ್ತೂರು ಬ್ಯಾನರ್ ಪ್ರಕರಣ : ಗಾಯಾಳುಗಳ ಆರೋಗ್ಯ ವಿಚಾರಿಸಿದ ನಟಿ ಹರ್ಷಿಕಾ ಪೂನಚ್ಚ | Harshika Poonacha

ಪುತ್ತೂರಿನಲ್ಲಿ ಪೋಲಿಸ್ ದೌರ್ಜನ್ಯದಿಂದ ಗಾಯಗೊಂಡಿರುವ ಹಿಂದೂ ಕಾರ್ಯಕರ್ತರನ್ನು ನಟಿ ಹರ್ಷಿಕಾ ಪೂನಚ್ಚ ಭೇಟಿ ಮಾಡಿದರು.ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ನಟಿ ಹರ್ಷಿಕಾ ಪೂನಚ್ಚ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.ಗಾಯಾಳು ಯುವಕರಿಗೆ ಸಾಂತ್ವನ ಹೇಳಿದ ನಟಿ

ಮಾನ್ಸೂನ್ ಪರಿಣಾಮಗಳನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಸೂಚನೆ

ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳಲ್ಲಿ ಜೀವ ಹಾನಿ, ಆಸ್ತಿ ಹಾನಿ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇ 23, 2023 ರ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ದಿ ಕೇರಳ ಸ್ಟೋರಿ’ : ಉಡುಪಿಯಲ್ಲಿ ಮಹಿಳೆಯರಿಗೆ ಉಚಿತ ಪ್ರದರ್ಶನ

ದಿ ಕೇರಳ ಸ್ಟೋರಿ, ರಾಷ್ಟ್ರಾದ್ಯಂತ ಹೊಸ ಸಂಚಲನ ಮೂಡಿಸಿರುವ ಈ ಸಿನಿಮಾದ ಉಚಿತ ಪ್ರದರ್ಶನ ಉಡುಪಿ ಜಿಲ್ಲೆಯ ಅಲ್ಲಲ್ಲಿ ಏರ್ಪಟ್ಟಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪರ್ಕಳ, ಉಡುಪಿ ಸಂಘಟಕರು ಜಂಟಿಯಾಗಿ ಮೇ 23 ರಂದು ಮಣಿಪಾಲದ ಐನಾಕ್ಸ್ ಸಿನಿಮಾಸ್ ಮತ್ತು ಕೆನರಾ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಉಚಿತವಾಗಿ

ಮೂಡುಬಿದಿರೆ: ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ  ಕ್ರಮ

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವ, ಹೆಲ್ಮೆಟ್ ಧರಿಸದ, ಚಾಲನ ಅನುಜ್ಞಾ ಪತ್ರವಿಲ್ಲದೆ ಚಾಲನೆಯನ್ನು ಮಾಡುತ್ತಿರುವವರ ವಿರುದ್ಧ ಮೂಡುಬಿದಿರೆ ಪೊಲೀಸರು  ಕ್ರಮಕೈಗೊಂಡರು.

ಮೇ.26ರಂದು ಪಿರ್ಕಿಲು ತುಳು ಸಿನಿಮಾ ತೆರೆಗೆ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ ಮತ್ತು ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ.26ರಂದು ಕರಾವಳಿ ಜಿಲ್ಲೆಯಾದ್ಯಂತ ತೆರಕಾಣಲಿದೆ ಎಂದು ನಿರ್ದೇಶಕ ಹೆಚ್.ಡಿ ಆರ್ಯ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂದರ

ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಮಹಾಸಭಾ ಕಿಡಿ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಹಿಂದೂ ಮಹಾಸಭಾ ಕಿಡಿಕಾರಿದೆ. ನಳಿನ್ ಕುಮಾರ್ ಕಟೀಲ್ ಅವರು ತಾಕತ್ತಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ, ಅರುಣ್ ಕುಮಾರ್ ಪುತ್ತಿಲ ಅವರು ಪಡೆದ ಮತಗಳ 10 ಶೇಖಡಾ ಮತಗಳನ್ನು ಪಡೆದು ತೋರಿಸಲಿ ಎಂದು ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ

ಧಾರ್ಮಿಕ ಕ್ಷೇತ್ರದಿಂದ ಧರ್ಮದ ಜಾಗೃತಿ ನಡೆಯಲಿ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಧಾರ್ಮಿಕ ಕ್ಷೇತ್ರಗಳ ಮೂಲಕ ಧರ್ಮದ ಜಾಗೃತಿ ನಡೆಯಬೇಕು, ಭಕ್ತಿಯ ಆಲಯಗಳಲ್ಲಿ ಭಕ್ತರ ನಿಸ್ವಾರ್ಥ ಸೇವಾ ಸಂಪನ್ನತೆ ಹೆಚ್ಚಾದಾಗ ಕ್ಷೇತ್ರ ಬೆಳಗುತ್ತದೆ. ನಮ್ಮ ಹಿಂದೂ ಸಂಸ್ಕೃತಿ ಪ್ರತೀ ಮನೆಯಿಂದ ಬೆಳಗಿದಲ್ಲಿ ಅದು ಜಗತ್ತಿಗೆ ಬೆಳಕಾಗುತ್ತದೆ ಎಂದು ಉಡುಪಿ ಅಧೋಕ್ಷಜ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ

ನೂತನ ಸರ್ಕಾರದಲ್ಲಿ ಬಿಲ್ಲವ ಮುಖಂಡರಿಗೆ ಸಚಿವ ಸ್ಥಾನ ನೀಡಿ : ಸತ್ಯಜಿತ್ ಸುರತ್ಕಲ್

ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಎರಡು ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಒಳಗೊಂಡು ಐದು ಜನ

ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ನೇಮಕ

ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರ ಸೇವೆಯನ್ನು ಗುರುತಿಸಿ ರಾಜ್ಯ ಸಭಾ ಸದಸ್ಯರು ಹಾಗೂ ಇತರ ನಾಯಕರ ಶಿಫಾರಸ್ಸಿನಂತೆ ಭಾರತ ಸರ್ಕಾರವು ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜೇಶ್ ಪುದುಶೇರಿ ಅವರು

ಡಿಜಿ-ಐಜಿಪಿಯಾಗಿ ಆಲೋಕ್‌ ಮೋಹನ್‌ ಅಧಿಕಾರ ಸ್ವೀಕಾರ

ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಆಲೋಕ್‌ ಮೋಹನ್‌ ಸೋಮವಾರ ಅಧಿಕಾರ ಸ್ವೀಕರಿಸಿದರು. ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಪ್ರವೀಣ್‌ ಸೂದ್‌ ಅವರು ಆಲೋಕ್‌ ಮೋಹನ್‌ ಅವರಿಗೆ ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.