Home 2024 March (Page 5)

ಬಣ್ಣವು ತೋರುವ ಧರ್ಮಸೆರೆ

ಎಲೆ ಭಾನುವಾರ ದಾಟಿದ್ದೇವೆ, ಬಣ್ಣದ ಅಲೆಯ ಹೋಳಿ ಗಮನಿಸುತ್ತಿದ್ದೇವೆ. ಪಾಮ್ ಸಂಡೇ ಎಂಬುದು ಕ್ರಿಶ್ಚಿಯನರ ಆಚರಣೆಗಳಲ್ಲಿ ಒಂದು. ಪಾಮ್ ಎಂದರೆ ತಾಳೆ. ನಮ್ಮ ತೆಂಗು ಕಂಗಿನ ಸಮೇತ ಜಗತ್ತಿನಲ್ಲಿ 2,600 ಜಾತಿಯ ತಾಳೆ ಜಾತಿಯ ಮರಗಳು ಇವೆ. ಅತಿ ದೊಡ್ಡ ಕಾಯಿಯ ಡಬಲ್ ಕೋಕನಟ್ ಎಂಬುದು ಸಿಶೆಲಸ್ ದ್ವೀಪದಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಅದರ ಆಕಾರದಿಂದಾಗಿ ಲವ್

“ಬಾಲವಿಕಾಸದಲ್ಲಿ ಲಿಟ್ಲ್ ಪರ್ಲ್ಸ್ ಫೆಸ್ಟ್ – 2023-24”

ವಿಟ್ಲ :ಮಾರ್ಚ್ 23: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಲಿಟ್ಲ್ ಪರ್ಲ್ಸ್ ಫೆಸ್ಟ್- 2023-24 ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ ,

ಬಣ್ಣಗಳ ಹಬ್ಬ ಹೋಳಿ

ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರಿ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು

ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಇದು: ರವಿಶಂಕರ ಮಿಜಾರು

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಆಲಿ ಅವರು 25 ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ರಾಜ್ಯದ ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದ್ದಾರೆ. ಜಿಲ್ಲಾ ಬಿಜೆಪಿಯ ಲೋಕಸಭಾ

ಮುದ್ದಣ ಸಾಹಿತ್ಯೋತ್ಸವ-2024:  ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತೋತ್ಸವ ವಿವಿಧ ಸಾಹಿತ್ಯ ಚಟುವಟಿಕೆಗಳೊಂದಿಗೆ ನಡೆಯಿತು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಕವಿ ಡಾ.ಲಕ್ಷ್ಮಣ. ವಿ.ಎ.ಅವರಿಗೆ ಮುದ್ದಣ

ಮಾರ್ಚ್ 25ರಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಒಟ್ಟು 2,750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ.

ರಾಜಕೀಯ ಶುದ್ಧೀಕರಣಕ್ಕೆ ಬರುವುದಾದರೆ ಎಲ್ಲರಿಗೂ ಸ್ವಾಗತ: ಡಿವಿಎಸ್

ರಾಜಕೀಯ ಶುದ್ಧೀಕರಣದ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ನನ್ನಿಂದ ಸಾಧ್ಯ, ಆದರೆ, ಸಮಾನ ಮನಸ್ಕರಾಗಿ ನನ್ನೊಂದಿಗೆ ಕೈಜೋಡಿಸಲು ಯಾರಾದರೂ ಬರುವುದಾದರೆ ಎಲ್ಲರಿಗೂ ಸ್ವಾಗತ ಎಂದು ಸಂಸದ, ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಹೇಳಿದರು. ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಕ್ಕೆ

ಲೋಕಸಭಾ ಚುನಾವಣೆ : ತಿರುವಳ್ಳೂರು ಕ್ಷೇತ್ರದಿಂದ ಸಸಿಕಾಂತ್ ಸೆಂಥಿಲ್ ಸ್ಪರ್ಧೆ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಾಲ್ಕನೇ ಪಟ್ಟಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 46 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೂ ಟಿಕೆಟ್ ನೀಡಿದ್ದು, ತಿರುವಳ್ಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಸಿಕಾಂತ್ ಸೆಂಥಿಲ್ ಅವರು ಕರ್ನಾಟಕದ ದಕ್ಷಿಣ ಕನ್ನಡದಲ್ಲಿ

ಪುತ್ತೂರು : ಅಂತರ್ ರಾಜ್ಯ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಕಳೆದ ಒಂದೂವರೆ ತಿಂಗಳ ಹಿಂದೆ ಚಿನ್ನಾಭರಣ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಅಂತರ್ ರಾಜ್ಯ ಕಳ್ಳತನ ಪ್ರಕರಣವನ್ನು ಭೇದಿಸಿದ ಪುತ್ತೂರು ನಗರ ಪೊಲೀಸರು ತಮಿಳುನಾಡಿನ ಮಹಿಳೆಯನ್ನು ಬಂಧಿಸಿ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಫೆ.12ರಂದು ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎನ್ ಎಂಬವರ

ಮಾಸ್ಕೋದಲ್ಲಿ ಉಗ್ರ ದಾಳಿ : ಸಾವಿನ ಸಂಖ್ಯೆ 115ಕ್ಕೆ ಏರಿಕೆ

ರಶಿಯಾದ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲಿನಲ್ಲಿ ನಾಲ್ವರು ಬಂದೂಕು ಹಿಡಿದವರು ನುಗ್ಗಿ ಹಲವು ಸ್ಫೋಟ ನಡೆಸಿ, ಮನ ಬಂದಂತೆ ಗುಂಡು ಹಾರಿಸಿದ್ದರಿಂದ ಸತ್ತವರ ಸಂಖ್ಯೆಯು 115ಕ್ಕೆ ಏರಿಕೆಯಾಗಿದೆ. ನಾಲ್ವರು ಗನ್‌ಮ್ಯಾನ್ ಸಹಿತ 11 ಜನರನ್ನು ಬಂಧಿಸಲಾಗಿದೆ. 145ಕ್ಕೂ ಹೆಚ್ಚು ಜನರು ಗಾಯಗೊಂಡರು. ಭಾರೀ ಹೊಗೆ ಆವರಿಸಿಕೊಂಡುದು ಮತ್ತು ಜನರ ಕಂಡತ್ತ ಓಡತೊಡಗಿದ್ದರಿಂದ