Home 2024 June (Page 8)

ಎಂ.ಸಿ.ಸಿ. ಬ್ಯಾಂಕ್ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಬ್ಯಾಂಕಿನ 2023-24ನೇ ವರ್ಷದ ಸಿಬ್ಬಂದಿ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಸಮೀಕ್ಷೆಯು ಆಲ್ಡ್ರಿನ್ ಡಿಸೋಜ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಂಗಳೂರು ಧರ್ಮಪ್ರಾಂತ್ಯದ ಮಾಜಿ ಪ್ರೊಕ್ಯುರೇಟರ್ ರೆ| ಫಾ| ಜಾನ್ ವಾಸ್

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಪಾರದರ್ಶಕತೆಯ ಕೊರತೆ: 7 ವರ್ಷಗಳ ಸೇವೆಯನ್ನು ಕಡೆಗಣಿಸಿದ ಮೇಲಾಧಿಕಾರಿಗಳು

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ದಿನೇ ದಿನೇ ಕಗ್ಗಂಟಾಗಿ ಪರಿವರ್ತನೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಕೆಳಮಟ್ಟದ ಪೊಲೀಸ್ ಕಾನ್ಸ್ ಸ್ಟೇಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವರ ಒಪ್ಪಿಗೆಯಿದ್ದರೂ ಇಲಾಖಾ ಮೇಲಾಧಿಕಾರಿಗಳು ಸಮ್ಮತಿ ಸೂಚಿಸದೇ ಪದೇ ಪದೇ ವಿಳಂಭ ನೀತಿ ಅನುಸರಿಸುತ್ತಿರುವುದು ಪೊಲೀಸರ ಗೋಳು ಕೇಳೋರ್‍ಯಾರು ಎಂಬಂತಹ ಪರಿಸ್ಥಿತಿಗೆ ಬಂದು

ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ – ಗುಣಮಟ್ಟದ ಡಿಪ್ಲೊಮಾ ಎಂಜಿನಿಯರಿಂಗ್ ಶಿಕ್ಷಣ

ಎಂಜಿನಿಯರಿಂಗ ಪದವಿಯ ಕನಸು ಹೊತ್ತ ಆಸಕ್ತ ವಿದ್ಯಾರ್ಥಿಗಳಿಗೆ ನೇರವಾಗಿ 10ನೇ ತರಗತಿಯ ಅನಂತರ 3 ವರ್ಷಗಳ ಡಿಪ್ಲೋಮಾ ಪೂರೈಸಿ ಯಾವುದೇ ಪ್ರವೇಶ ಪರೀಕ್ಷೆಯ ಒತ್ತಡವಿಲ್ಲದೆ ಲ್ಯಾಟರಲ್ ಎಂಟ್ರಿ ಸೌಲಭ್ಯದೊಂದಿಗೆ ಆಯ್ಕೆಯ ಎಂಜಿನಿಯರಿಂಗ್ ಪದವಿಯ ದ್ವಿತೀಯ ವರ್ಷಕ್ಕೆ ಎಂಐಟಿ ಮಣಿಪಾಲದಲ್ಲಿ ನೇರ ಪ್ರವೇಶಕ್ಕೆ ಸಂಸ್ಥೆಯ ಮೂಲಕ ಸದಾವಕಾಶ ಕಲ್ಪಿಸಲಾಗಿದೆ. ಸಂಸ್ಥೆಯ ಲ್ಯಾಟರಲ್

ಬಹರೈನ್ ಕನ್ನಡ ಸಂಘದಲ್ಲಿ ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಶ್ರೀ ಶನೀಶ್ವರ ಮಹಾತ್ಮೆ

ಬಹರೈನ್‌ನ ಕನ್ನಡ ಸಂಘವು ಕನ್ನಡ ಭವನದ ಸಭಾಂಗಣದಲ್ಲಿ ಜೂನ್ 14ರಂದು ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಸಂಜೆ ಮೂರು ಗಂಟೆಗೆ ಸರಿಯಾಗಿ ಮಂಗಳೂರಿನ ಪ್ರಸಿದ್ಧ ಕದ್ರಿ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ಶನಿ ಪೂಜೆ ಹಾಗು ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗಲಿದೆ. ಸಂಜೆ

ಸುಳ್ಯ : ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ- ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಂಸದರು

ಮಂಗಳೂರು : ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪರಿಹಾರದ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿ ಚರ್ಚಿಸಿದರು. ಸುಳ್ಯ ತಾಲೂಕಿನ

ಪುತ್ತೂರು: ಶಾಂತಿಗೋಡಿನ ಪಂಜಿಗ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಗೆ ಹಾನಿ

ಪುತ್ತೂರು: ಕಳೆದ ಎರಡು ದಿನಗಳಿಂದ ಬೆಳ್ಳಿಪ್ಪಾಡಿ ಗ್ರಾಮ ಮತ್ತು ಶಾಂತಿಗೋಡು ಗ್ರಾಮದ ನಡುವೆ ಸುತ್ತಾಡುತ್ತಿರುವ ಕಾಡಾನೆಗಳೆರಡು ಇದೀಗ ಶಾಂತಿಗೋಡು / ಚಿಕ್ಕಮುಡ್ನೂರು ಗ್ರಾಮದ ನಡುವೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಿಗೋಡು ಗ್ರಾಮದ ಪಂಜಿಗದಲ್ಲಿ ಆನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳ್ಳಿಪ್ಪಾಡಿ ಕೊಡಿಮರದಿಂದ ಹೊಳೆ ದಾಟಿದ ಆನೆ ಅಲ್ಲಿಂದ ಬೆದ್ರಾಳ

ಅರುಣಾಚಲ ಪ್ರದೇಶ ಸಿಎಂ ಆಗಿ ಬಿಜೆಪಿ ನಾಯಕ ಪೇಮಾ ಖಂಡು ಪ್ರಮಾಣವಚನ ಸ್ವೀಕಾರ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಪೇಮಾ ಖಂಡು ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ಪೇಮಾ ಖಂಡು ಅವರು ಅರುಣಾಚಲಕ್ಕೆ ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದರು.ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಕೆ.ಟಿ.ಪರ್ನಾಯಕ್ ಅವರು ಪ್ರಮಾಣವಚನ ಬೋದಿಸಿದರು. ಇವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಿಜೆಪಿ ಸತತ ಮೂರನೇ

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 49 ಭಾರತೀಯರು ಮೃತಪಟ್ಟಿದ್ದು, ಮೃತರಲ್ಲಿ ಹೆಚ್ಚಿನವರು ಕೇರಳದಿಂದ ಹೋದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ಹೋದ 14 ಜನರು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಮೃತದೇಹಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು

ಇನ್ನಾದಲ್ಲಿ ವಿದ್ಯುತ್ ಟವರ್ ವಿರುದ್ಧ ಬೃಹತ್ ಪ್ರತಿಭಟನೆ

ನಂದಿಕೂರಿನಿಂದ ಇನ್ನ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದ ಕೃಷಿ ಭೂಮಿಯ ಮೇಲಿಂದ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ 400 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ಪೀಡರ್ ಟವರ್ ಅಳವಡಿಕೆಯ ಯೋಜನೆಯ ಬಗ್ಗೆ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಇನ್ನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಕಾರ್ಕಳ ಶಾಸಕ

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್:ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಉಳ್ಳಾಲ, ತೊಕ್ಕೋಟ್ಟು, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆಸುಪಾಸಿನ ಸಾವಿರಾರು ಜನತೆ ತೀರಾ ಸಂಕಷ್ಟಕ್ಕೊಳಗಾಗಿ ದಿನನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಕೆಳಸೇತುವೆ ನಿರ್ಮಾಣ ಕಾರ್ಯವನ್ನು ಆದಷ್ಟು