ದಕ್ಷಿಣ ಭಾರತ ವಲಯ ಅಂತರ್ ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾಟ: ಕಣಚೂರು ತಂಡಕ್ಕೆ ಪ್ರಶಸ್ತಿ

ದಕ್ಷಿಣ ಭಾರತ ವಲಯ ಮಟ್ಟದ ಅಂತರ್ ಕಾಲೇಜು ಫುಟ್ಬಾಲ್ ’ಅಸ್ಟ್ರಾ -2024’ ಪಂದ್ಯಾಟವು ಇತ್ತೀಚೆಗೆ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಮೈದಾನದಲ್ಲಿ ನಡೆದಿದ್ದು, ಪಂದ್ಯಾಟಲ್ಲಿ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈಯನ್ಸಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಒಟ್ಟು12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಪೈನಲ್ ನಲ್ಲಿ ಕಣಚೂರು ತಂಡವು 1:0 ಅಂತರದಿಂದ ಎದುರಾಳಿ ತಂಡವನ್ನು ಮಣಿಸಿ ಗೆಲುವನ್ನು ಸಾಧಿಸಿತು.
ತಂಡದಲ್ಲಿ ಮಹಮ್ಮದ್ ಅಷ್ಪಾಕ್, ಹದಿ ರಹಮಾನ್, ಅಹ್ಮದ್ ಫಯಾಝ್, ಇಬ್ರಾಹಿಂ ಖಾಲಿದ್, ವಿತುಲ್ ಪಿ, ಮಹಮ್ಮದ್ ಸಫಿಯಾನ್, ಮಹಮ್ಮದ್ ಸವಾದ್, ಉಮ್ಮರ್ ಶಹಝಾದ್, ಮಹಮ್ಮದ್ ಶಫೀಕ್ ಯುನ್ನಿಯಾಸ್, ಮಹಮ್ಮದ್ ಆಶಿಕ್ ನಿಸಮ್, ಪವಾಝ್ ಟಿ ಕೆ, ಮಹಮ್ಮದ್ ರಯೀದ್, ಮಹಮ್ಮದ್ ಅನಸ್, ನುಹ್ಮಾನ್ ನಿಸಾರ್, ಆಶಿಕ್, ಆಶ್ಕಾರ್, ಅಬ್ದುಲ್ ವಜೀದ್, ಸಫ್ವಾನ್, ಅನ್ವರ್ ಮುಹೀನ್ ಅವರು ಕ್ರೀಡಾಪಟುಗಳಾಗಿ ಭಾಗವಹಿಸಿದ್ದರು. ಮಹಮ್ಮದ್ ಮುನ್ನಾವೆರ್ ಅವರು ಟೀಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ವಿಜಯಿ ತಂಡಕ್ಕೆ ಕಣಚೂರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.