Home Articles posted by v4team (Page 154)

ಕಾಸರಗೋಡು: ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ, ಸಾಮೂಹಿಕ ಅಶ್ವತ್ಥನಾರಾಯಣ ಪೂಜೆ

ಕಾಸರಗೋಡಿನ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ಹಾಗೂ ಹೊಸಂಗಡಿಯ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ ಮತ್ತು ಸಾಮೂಹಿಕ ಅಶ್ವತ್ಥನಾರಾಯಣ ಪೂಜೆಯು ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು. ಸಕಲ ದೇವತೆಗಳು ನೆಲೆಸಿರುವ ದೇವ ಸ್ವರೂಪದ ಮರವೆಂದೇ ಪೂಜಿಸಲ್ಪಡುವ ಸರ್ವ ದೋಷಗಳನ್ನೂ ಸಕಲ ರೋಗಗಳನ್ನೂ

ಪಡುಬಿದ್ರಿ: ಆನ್‍ಲೈನ್ ವಂಚನೆಯಿಂದ ಮೂರು ಲಕ್ಷ ಕಳೆದುಕೊಂಡ ಎರ್ಮಾಳು ನಿವಾಸಿ

ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಕನ್ನಡ ಬಾಷೆಯಲ್ಲಿ ಪರಿಚಯಿಸಿ ಕೆವೈಸಿ ಲಿಂಕ್ ಆಗಿಲ್ಲ ಒಟಿಪಿ ನೀಡಿ ಎಂದು ಹೇಳಿ, ಒಟಿಪಿ ನೀಡುತ್ತಿದಂತೆ ಮೂರು ಬಾರಿ ಖಾತೆಯಿಂದ ಹಣ ಡ್ರಾ ಆಗಿದ್ದು ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ತೆಂಕ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳು ತೆಂಕ ಕಿನಾರ ಶಾಲೆಯ ಬಳಿಯ ನಿವಾಸಿ ಶಂಕರ್ ಎಂಬವರೇ ಹಣ ಕಳೆದುಕೊಂಡವರು. ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಇವರು ರಾತ್ರಿ ಹಗಲೆನ್ನದೆ, ಬಿಸಿಲು ಮಳೆಗೆ ಮೀನುಗಾರಿಕೆ ನಡೆಸಿ ಕೂಡಿಟ್ಟ ಹಣ

ಗಣೇಶ ಚತುರ್ಥಿಯ ಪ್ರಯುಕ್ತ ಉಡುಪಿಯ ಮಧುರಂ ರೆಸ್ಟೋರೆಂಟ್‌ನಲ್ಲಿ ಗಣೇಶ ವಿವಿಧ ಬಗೆಯ ಮೋದಕಗಳ ತಯಾರಿ

ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಸಡಗರದಿಂದ ನಡೆಯುತ್ತಿದ್ದರೆ ಉಡುಪಿಯ ವೈಟ್ ಲೊಟಸ್‌ನ ಮಧುರಂ ರೆಸ್ಟೋರೆಂಟ್‌ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಗ್ರಾಹಕರಿಗಾಗಿ ವಿವಿಧ ಬಗೆಯ ಮೋದಕ ಮತ್ತು ಸಿಹಿ ತಿಂಡಿಗಳನ್ನು ತಯಾರಿಸಲಾಗಿತ್ತು. ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿರುವ ವೈಟ್ ಲೋಟಸ್‌ನ ಮಧುರಂ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಹಲವಾರು ಬಗೆಯ ಗಣೇಶನ ಪ್ರಿಯವಾದ ಸಿಹಿತಿಂಡಿಗಳನ್ನು ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಉಪ್ಪಳ: ಮುಳಿಂಜ ಶಿವತೀರ್ಥಪದವಿನಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಉಪ್ಪಳ ಮುಳಿಂಜ ಶಿವತೀರ್ಥಪದವಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಸಿದ್ದಿವಿನಾಯಕ ಸಾರ್ವಜನಿಕ ಸಂಸ್ಥೆಯ ಆಶ್ರಯದಲ್ಲಿ ೪೪ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದೆ. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ವಿವಿಧ ವೈದಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.

ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ

ವಿಟ್ಲ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ ಸಮಿತಿ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಉದ್ಘಾಟನೆಗೊಂಡಿತು. ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಭಕ್ತರ ಸತ್ಸಂಕಲ್ಪಕ್ಕೆ ದೇವರ ಅನುಗ್ರಹ ಸದಾ ಇದೆ. ಧಾರ್ಮಿಕ ಕಾರ್ಯಕ್ರಮಗಳು ಬದುಕಿನ ಸಂಸ್ಕಾರ – ಸಂಸ್ಕೃತಿಯ ಉದ್ದೀಪನಕ್ಕೆ ಪೂರಕವಾಗಿದೆ.

ಮಂಜೇಶ್ವರ: ಕುಳೂರು ಸಂತಡ್ಕದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಸಂಭ್ರಮ

ಮಂಜೇಶ್ವರ ಕುಳೂರು ಸಂತಡ್ಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ಪರಿಸರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಗಣಪತಿಯ ಪ್ರತಿಷ್ಠಾಪನೆಗೊಂಡು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮೆರವಣಿಗೆ ವಾದ್ಯ ಘೋಷಣೆ ಭಜನಾ ತಂಡಗಳ ಪ್ರದರ್ಶನದೊಂದಿಗೆ ಹೊರಟ ವಿಸರ್ಜನಾ ಮೆರವಣಿಗೆಯು ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರ ಸಂತಡ್ಕ ಬೇಳದ ಮೂಲಕ

ಮಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಬಗ್ಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹುಕ್ಕಾ ಬಾರ್‍ಗಳಿಂದ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಆನಾರೋಗ್ಯ ಕಾಡುತ್ತಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧದ ಬಗ್ಗೆ ಚಿಂತನೆ ನಡೆಸಲಾಗಿದೆ. ಹುಕ್ಕಾ ಬಾರ್‍ಗಳಿಂದ ಬೇರೆ ಬೇರೆ ದುಷ್ಪಾರಿಣಾಮಗಳು ಉಂಟಾಗುತ್ತಿದೆ. ಸಾರ್ವಜನಿಕ

ಮೂಡುಬಿದಿರೆ: ಕಂಬಳ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ

ಮೂಡುಬಿದಿರೆ : ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಮೂಡುಬಿದಿರೆಯ ಕಡಲಕೆರೆ ಬಳಿಯಿರುವ ಸೃಷ್ಠಿ ಗಾರ್ಡನ್‍ನಲ್ಲಿ ಕಂಬಳದ ಈ ಋತುವಿನ ಸಮಾಲೋಚನಾ ಸಭೆ ನಡೆಯಿತು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಣದ ಯಜಮಾನರುಗಳಿಗೆ, ವ್ಯವಸ್ಥಾಪಕರಿಗೆ ಹಾಗೂ ತೀರ್ಪುಗಾರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಮಾತನಾಡಿದ ಡಾ.ದೇವಿಪ್ರಸಾದ್ ಶೆಟ್ಟಿ

ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಬಿಗಿ ಬಂದೋಬಸ್ತ್‍ನಲ್ಲಿ ಗಣೇಶೋತ್ಸವ ಆಚರಣೆ

ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ಕೇಳಿಬಂದ ಅಪಸ್ವರಗಳ ನಡುವೆಯೂ ಅದೇ ಸ್ಥಳದಲ್ಲಿ ಉಪಕುಲಪತಿಗಳ ಸಮಕ್ಷಮದಲ್ಲಿ ಪರಿಸರಪೂರಕ ಗಣೇಶನ ವಿಗ್ರಹವನ್ನಿಟ್ಟು ಗಣೇಶೋತ್ಸವ ಆಚರಣೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಕೊಣಾಜೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ನಸುಕಿನ ಜಾವ ಬಂದೋಬಸ್ತ್ ನಡುವೆ ಗಣೇಶನ ವಿಗ್ರಹವನ್ನು ಮಂಗಳ ಸಭಾಂಗಣಕ್ಕೆ ತರಲಾಯಿತು. ಪರಿಸರ