Home Articles posted by v4team (Page 153)

ನಿಮ್ಮನ್ನು ನೀವು ಅಡಗಿಸಿಕೊಳ್ಳಬೇಡಿ, ತೊಡಗಿಸಿಕೊಳ್ಳಿ: ಡಾ. ಟಿ. ಕೃಷ್ಣಮೂರ್ತಿ 

ಉಜಿರೆ, ಸೆ.26: “ನಾನು ಇಂದು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಮುಖ್ಯ ಕಾರಣ ಎನ್.ಎಸ್.ಎಸ್. ಹಾಕಿಕೊಟ್ಟ ಭದ್ರ ಬುನಾದಿ. ಎನ್.ಎಸ್.ಎಸ್. ಬಹಳಷ್ಟು ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಸ್ವಯಂಸೇವಕರು ನಿಷ್ಠೆಯಿಂದ ನಿಮ್ಮನ್ನು ನೀವು ಸೇವೆಯಲ್ಲಿ ತೊಡಗಿಸಿಕೊಳ್ಳಿ. ಆಗ ಮಾತ್ರ ನಿಮ್ಮಲ್ಲಿ ಧೈರ್ಯ, ಛಲ, ನಾಯಕತ್ವದ ಗುಣ

ಮಂಗಳೂರು: ವಿ ಕೇರ್ ಮಂಗಳೂರು ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನಲ್ಲಿ ಉದ್ಯೋಗಾವಕಾಶ

ನಗರದ ಕಂಕನಾಡಿಯಲ್ಲಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ನೂತನ ವಿ ಕೇರ್ ಮಂಗಳೂರು ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನಲ್ಲಿ ಕೆಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸೆ.23ರಿಂದ ನೇರ ಸಂದರ್ಶನ ಪ್ರಾರಂಭವಾಗಿದೆ. ಬ್ರಾಂಚ್ ಮ್ಯಾನೇಜರ್ ( ಯಾವುದೇ ಪದವಿ ಮತ್ತು ಸೇಲ್ಸ್ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅನುಭವ), ವೈದ್ಯರು (ಬಿಡಿಎಸ್, ಬಿಎಎಂಎಸ್, ಬಿಎಚ್‍ಎಂಎಸ್, ಬಿಎನ್‍ವೈಎಸ್ ಮತ್ತು ಫಾರ್ಮಾ ಡಿ), ಫ್ರಂನ್ಟ್ ಆಫೀಸ್

ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ “ವೃದ್ಧಿ” ಯೋಜನೆ

ಮಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಹಿರಿಯರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಭರವಸೆ ಮೂಡಿಸುವ ನಿಟ್ಟಿನಲ್ಲಿ “ವೃದ್ಧಿ” – ಹಿರಿಯರ ಅಭಿವೃದ್ಧಿ ಯೋಜನೆಯ ಉದ್ಘಾಟನೆಯನ್ನು ಅಕ್ಟೋಬರ್ 03ರಂದು ಬೆಳಿಗ್ಗೆ 10 ಗಂಟೆಗೆ, ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‍ನಲ್ಲಿ ಹಮ್ಮಿಕೊಂಡಿದೆ. ವಯೋವೃದ್ಧರ (60 ವರ್ಷ ಮೇಲ್ಪಟ್ಟ) ಆರೈಕೆ, ಅವರ ಆರೋಗ್ಯದ ಬಗ್ಗೆ ಜಾಗೃತಿ, ಅವರ ಜೀವನಕ್ಕೆ ಸಂತೋಷದಾಯಕ

ಉಳ್ಳಾಲ: ಸೆ.29ಕ್ಕೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ-2023

ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.29ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ವೈ ನಾಯಕ್ ಅವರು ಹೇಳಿದರು. ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲ್ಲೂಕು ಪಂಚಾಯತ್ ಉಳ್ಳಾಲ , ಉಳ್ಳಾಲ

ಮೂಡುಬಿದಿರೆ: ಭೂಮಿ ಹಕ್ಕಿಗೆ ಒತ್ತಾಯಿಸಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ವಾಪಾಸ್

ಮೂಡುಬಿದಿರೆ: ಭೂಮಿ ಹಕ್ಕಿಗೆ ಒತ್ತಾಯಿಸಿ ಭೂಮಿ ಹೋರಾಟ ಸಮಿತಿಯು ಆಡಳಿತ ಸೌಧದ ಮುಂಭಾಗ ಸೋಮವಾರ ಕೈಗೊಂಡಿದ್ದ ಅಹೋರಾತ್ರಿ ಧರಣಿಯು ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರ ಮನವೊಲಿಕೆಯಿಂದಾಗಿ ವಾಪಾಸ್ ಪಡೆದುಕೊಂಡಿದೆ. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಅವರು ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಇರುವೈಲು, ತೋಡಾರು, ಪುತ್ತಿಗೆ, ಬೆಳುವಾಯಿ, ಶಿರ್ತಾಡಿ, ಪಾಲಡ್ಕ ಇನ್ನಿತರ

ಮಂಜೇಶ್ವರ: ಆಟೋ ರಿಕ್ಷಾಗೆ ಶಾಲಾ ಬಸ್ಸು ಡಿಕ್ಕಿ : ಐದು ಮಂದಿ ದಾರುಣ ಸಾವು

ಮಂಜೇಶ್ವರ : ಬದಿಯಡ್ಕ ಪಳ್ಳತ್ತಡ್ಕದಲ್ಲಿ ಆಟೋ ರಿಕ್ಷಾವೊಂದಕ್ಕೆ ಶಾಲಾ ಬಸ್‌ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿದ್ದ ಮೊಗ್ರಾಲ್ ಮೂಲದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೊಗ್ರಾಲ್ ಪುತ್ತೂರು ಕಡವತ್ತ್ ನಿವಾಸಿಗಳಾದ ಆಟೋ ಚಾಲಕ ಅಬ್ದುಲ್ ರವೂಫ್, ಬೀಫಾತಿಮಾ, ನಬೀಸಾ, ಬೀಫಾತಿಮಾ ಮೊಗರ್ ಮತ್ತು ಉಮ್ಮಾಲಿಮಾ ಸಾವನ್ನಪ್ಪಿದ ದುರ್ದೈವಿಗಳು. ವಿದ್ಯಾರ್ಥಿಗಳನ್ನು ಇಳಿಸಿ ಹಿಂತಿರುಗುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿದೆ.ಮೂವರು

ಮಂಗಳೂರು : ಶಕ್ತಿನಗರದ ವೈದ್ಯನಾಥ ಶಾಖೆಯ ವತಿಯಿಂದ 3ನೇ ವರ್ಷದ ಚಿತ್ರಕಲಾ ಸ್ಪರ್ಧೆ

ಮಂಗಳೂರು : ಗಣೇಶೋತ್ಸವದ ಪ್ರಯುಕ್ತ ಶಕ್ತಿನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವೈದ್ಯನಾಥ ಶಾಖೆಯ ವತಿಯಿಂದ 3ನೇ ವರ್ಷದ ಚಿತ್ರಕಲಾ ಸ್ಪರ್ಧೆಯು ದಿನಾಂಕ ಸೆಪ್ಟೆಂಬರ್ 24 ರಂದು ನಡೆಯಿತು. ಅಂಗನವಾಡಿಯಿಂದ ಹಿಡಿದು 12ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಿತು. ಬಾಲ ಸಂಸ್ಕಾರದ ಮಕ್ಕಳು ದೀಪಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮ ಹಾಗೂ ಸ್ಪರ್ಧೆಯನ್ನು ಪ್ರಾರಂಭಿಸಲಾಯಿತು. ಸುಮಾರು ಒಂದೂವರೆ ಗಂಟೆಯ

ಉಡುಪಿ: ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ

ಭಾರತೀಯ ಸೇನೆಗೆ ಸೇರಬಯಸುವ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ ಉಡುಪಿಯಲ್ಲಿ ಆಯೋಜಿಸಲಾಗಿದೆ. ಉಡುಪಿ ಸಮೀಪದ ಉದ್ಯಾವರದ ಹಿನ್ನೀರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸೀ ಸೈಲಿಂಗ್ ತರಬೇತಿ ಕಾರ್ಯಾಗಾರದಲ್ಲಿ ಹೊರರಾಜ್ಯದ ಕೆಡೆಟ್ ಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ನೂತನ ಕೆಡೆಟ್ಗಳ ನೌಕಯಾನದ ಎಕ್ಸ್ಪೀರಿಯನ್ಸ್ ಹೇಗಿತ್ತು ಅಂತೀರಾ… ಈ ಸ್ಟೋರಿ ನೋಡಿ ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‍ಸಿಸಿ ಕೆಡೆಟ್‍ಗಳು

ಬಂದ್ಯೋಡ್ : ವೀರನಗರ ಜನನಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆ

ಬಂದ್ಯೋಡ್ ನ ಅಡ್ಕ ವೀರನಗರ ಜನನಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಚತುರ್ಥಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆದವು. ಹಗ್ಗ ಜಗ್ಗಾಟ ದಲ್ಲಿ ಶಿವ ಶಕ್ತಿ ಶಿರಿಯ ಈ ತಂಡಕ್ಕೆ ಪ್ರಥಮ ಬಹುಮಾನ ಹಾಗೂ ಪಿ ಎಫ್ ಸಿ ಪರಂಕಿಲ ತಂಡಕ್ಕೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ ವೀರನಗರ ಅಡ್ಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿ

ಪೌರಕಾರ್ಮಿಕರ ದಿನದಂದು ಹಗಲು ರಾತ್ರಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ಮೂಡುಬಿದಿರೆಯ ಪೌರಕಾರ್ಮಿಕರು

ಮೂಡುಬಿದಿರೆ: ಪೌರಕಾರ್ಮಿಕರ ದಿನದಂದು ಪುರಸಭೆಯು ಪೌರಕಾರ್ಮಿಕರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಅವರ ಮನಸನ್ನು ಒಂದು ದಿನದ ಮಟ್ಟಿಗೆ ರಿಲಾಕ್ಸ್ ಆಗುವಂತೆ ನೋಡಬೇಕಾಗಿತ್ತು ಆದರೆ ಮೂಡುಬಿದಿರೆ ಪುರಸಭೆಯ ಪೌರಕಾರ್ಮಿಕರು ಮಾತ್ರ ಈ ದಿನದಂದು ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಗಮನ ಸೆಳೆದಿದ್ದಾರೆ. ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ ಪೂಜಿಸಲ್ಪಟ್ಟ ವಜೃ ಮಹೋತ್ಸವದ ಗಣೇಶನ ವಿಸರ್ಜನಾ ಸಮಾರಂಭವು ಸಂಜೆ ವೇಳೆಗೆ ಆರಂಭಗೊಂಡಿತು. ಸಂದರ್ಭದಲ್ಲಿ