ಉಡುಪಿ ಜಿಲ್ಲೆಯಲ್ಲಿ ಆಯುಷ್ ಹಬ್ಬ 2026 ರ ಜನಜಾಗೃತಿ ಅಭಿಯಾನಕ್ಕೆ ಚಾಲನೆ

ಪಡುಬಿದ್ರಿ:ಮಂಗಳೂರು ನಗರದ ಟಿ ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಜನವರಿ 31 ಮತ್ತು ಫೆಬ್ರವರಿ1 ರಂದು ಜರುಗಲಿರುವ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ- ಆಯುಷ್ ಹಬ್ಬದ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನಕ್ಕೆ ಭಾನುವಾರದಂದು ಚಾಲನೆ ನೀಡಲಾಯಿತು.

ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಆಯುಷ್ ವೃತ್ತಿನಿರತ ವೈದ್ಯರ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎ.ಎಫ್.ಐ ಅಧ್ಯಕ್ಷರು ಮತ್ತು ಆಯುಷ್ ಹಬ್ಬ 2026 ರ ಸಂಯೋಜಕರಾದ ಡಾ.ಎನ್ .ಟಿ.ಅಂಚನ್ ಪಡುಬಿದ್ರಿ ವಹಿಸಿದ್ದರು.

ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷರಾದ ಡಾ.ಆಶಾ ಜ್ಯೋತಿ ರೈ ಮಾಲಾಡಿ ಇವರು ಈ ಕಾರ್ಯಕ್ರಮದ ಮೂಲ ಉದ್ದೇಶ ಹಾಗೂ ಸಂಪದ್ಭರಿತವಾದ ಆಯುಷ್ ವೈದ್ಯ ಪದ್ಧತಿಗಳ ಪ್ರಯೋಜನ ಎಲ್ಲಾ ವರ್ಗದ ಜನರಿಗೆ ತಲಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಆಯುಷ್ ವೈದ್ಯರುಗಳು ಗ್ರಾಮಾಂತರ ಜಿಲ್ಲೆಗಳ ಕುಗ್ರಾಮಗಳಲ್ಲೂ ಸೇವಾ ನಿರತರಾಗಿದ್ದು ಆಯುಷ್ ವೈದ್ಯ ಪದ್ಧತಿಗಳ ಮೂಲಕ ಜನರ ಸ್ವಾಸ್ಥ್ಯ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಯುಷ್ ವೈದ್ಯ ಪದ್ಧತಿಗಳಲ್ಲಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಲ್ಲ ಆವಿಷ್ಕಾರಗಳ ಪರಿಚಯ ಈ ಆಯುಷ್ ಹಬ್ಬದ ಮೂಲಕ ವೈದ್ಯರಿಗೂ ದೊರೆಯಲಿದೆ,ಅಲ್ಲದೆ ಜನಸಾಮಾನ್ಯರ ಮನಸ್ಸಿನಲ್ಲಿ ಆಯುಷ್ ವೈದ್ಯ ಪದ್ಧತಿಗಳ ಪ್ರಯೋಜನ ಪಡೆಯಲು ಸಹಕಾರಿಯಾಗಬಲ್ಲ ಉಪಯುಕ್ತ ಮಾಹಿತಿಯನ್ನು ಪಡೆಯಲು ಇದೊಂದು ಸುವರ್ಣ ಅವಕಾಶವೂ ಹೌದು..ಎಲ್ಲಾ ವೈದ್ಯರು ತಮ್ಮ ಗ್ರಾಮದ ಜನತೆಗೆ ಈ ಹಬ್ಬದ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಇದರ ಪ್ರಯೋಜನ ಪಡೆಯಲು ಸಹಕರಿಸಬೇಕಾಗಿ ಮನವಿ ಮಾಡಿದರು ಮತ್ತು ಎಲ್ಲರನ್ನೂ ಕಾರ್ಯಕ್ರಮಕ್ಕೆ ಬರುವಂತೆ ಆಮಂತ್ರಿದರು.ಎಲ್ಲರಿಗೂ ಉಚಿತ ಹಾಗೂ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದರು.

ಆಯುಷ್ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ ಸಚಿನ್ ನಡ್ಕ ಇವರು ಆಯುಷ್ ಹಬ್ಬದಲ್ಲಿ ಇರುವ ವಿವಿಧ ವೈಶಿಷ್ಟ್ಯಗಳ ಮಾಹಿತಿಯನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಗಳ ಎಲ್ಲಾ ಆಯುಷ್ ಕಾಲೇಜುಗಳು ಭಾಗವಹಿಸಲಿದ್ದು ಆಯುಷ್ ಪದ್ಧತಿಗಳ ಉನ್ನತ ಮಟ್ಟದ ಚಿಕಿತ್ಸಾ ವಿಧಾನಗಳ ಪರಿಚಯ ಹಾಗೂ ನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಅಳವಡಿಸಿ ಜನರ ಆರೋಗ್ಯ ಸೇವೆಯನ್ನು ಉನ್ನತೀಕರಣಗೊಳಿಸಬಲ್ಲ ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.
ಇದರಲ್ಲಿ ಆರೋಗ್ಯಪೂರ್ಣ ಹೃದಯಕ್ಕಾಗಿ ಆಯುಷ್, ಮಹಿಳಾ ಹಬ್ಬ, ಸಾವಯವ ಸಂತೆಯಲ್ಲಿ ಸುಮಾರು 70 ಮಳಿಗೆಗಳು ರಾಸಾಯನಿಕ ರಹಿತ ಆಹಾರ ಪದ್ಧತಿಗಳ ಮಾಹಿತಿ, ಮಾರಾಟ ಲಭ್ಯವಾಗಲಿದೆ. 50 ಪ್ರದರ್ಶನ ಮಳಿಗೆಗಳಲ್ಲಿ ಆಯುಷ್ ಬಗ್ಗೆ ಪರಿಚಯ ನೀಡಬಲ್ಲ ಹೊಸ ಚಿಕಿತ್ಸಾ ಕ್ರಮಗಳು, ಔಷಧ ಮಳಿಗೆಗಳು ಇತ್ಯಾದಿ ಬಹುವೈವಿಧ್ಯತೆ ಹೊಂದಿದೆ.
ಉಭಯ ಜಿಲ್ಲೆಗಳ ಖ್ಯಾತ ಆಯುಷ್ ವೈದ್ಯರುಗಳಿಂದ ಉಚಿತ ತಪಾಸಣೆ ಹಾಗೂ ಸಲಹೆ ಪಡೆಯುವ ಸುವರ್ಣಾವಕಾಶ ಕಲ್ಪಿಸಲಾಗಿದೆ.ಇದಕ್ಕೆ ಮುಂಚಿತವಾಗಿ ನೋಂದಣಿ ಮಾಡುವ2000 ಜನರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.10 ವರ್ಷಗಳ ಬಳಿಕ ನಡೆಯುತ್ತಿರುವ ಈ ಆಯುಷ್ ಹಬ್ಬದ ಪ್ರಯೋಜನ ಪಡೆಯುವಂತೆ ಕರೆಯಿತ್ತರು.
ವೇದಿಕೆಯಲ್ಲಿ ಆಯುಷ್ ಹಬ್ಬ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಡಾ.ದೇವದಾಸ್ ಪುತ್ರನ್,ಡಾ.ಸುಭೋದ್ ಭಂಡಾರಿ,ಡಾ.ಗುರುಪ್ರಸಾದ್ ನಾವುಡಾ,ಡಾ.ಅಭಿಷೇಕ್ , ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಆಯುಷ್ ಹಬ್ಬ 2026 ರ ಸಹ ಸಂಯೋಜಕರಾದ ಡಾ. ಸಂದೀಪ್ ಸನಿಲ್, ಡಾ. ಸತೀಶ್ ರಾವ್, ಜಿಲ್ಲಾ ಕಾರ್ಯದರ್ಶಿಗಳು; ಡಾ. ಮನೋಜ್ ಶೆಟ್ಟಿ, ಉಡುಪಿ ತಾಲ್ಲೂಕು ಅಧ್ಯಕ್ಷರು; ಡಾ. ವಸಂತ್, ಕಾರ್ಕಳ ಅಧ್ಯಕ್ಷರು; ಡಾ. ರವೀಂದ್ರ, ಕುಂದಾಪುರ ಅಧ್ಯಕ್ಷರು; ಡಾ. ವಿಜಯ ನೆಗ್ಲೂರು; ಡಾ. ಲೋಕೆಶ್ ಶೆಟ್ಟಿ , ಎಲ್ಲಾ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಉಡುಪಿಜಿಲ್ಲೆಯ ಆಯುಷ್ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.