ಬ್ರಹ್ಮಾವರ; ಸಾಲಿಕೇರಿ ಯುವಕರ ತಂಡ ಗಣೇಶೋತ್ಸವದಲ್ಲಿ ವೇಷ ತೊಟ್ಟು ಮಗುವಿನ ಹೃದಯದ ಚಿಕಿತ್ಸೆಗೆ ಆರ್ಥಿಕ ಸಂಗ್ರಹ

ಸನಾತನ ಧರ್ಮ ಆಚರಣೆಯ ಪೂಜೆ ಉತ್ಸವಗಳು ಪರೋಕ್ಷವಾಗಿ ನೂರಾರು ಕೈಗಳಿಗೆ ಉದ್ಯೋಗ ಆರ್ಥಿಕ ಸ್ವಾವಲಂಭನೆಯಾಗಿದೆ. ಬ್ರಹ್ಮಾವರ ಬಳಿಯ ಸಾಲಿಕೇರಿಯ ಯುವಕರ ಒಂದು ತಂಡ ಫ್ರೇಂಡ್ಸ್ ಕ್ಲಬ್ ಹೆಸರಿನಲ್ಲಿ ಗಣೇಶ ಚೌತಿಯ ಸಂದರ್ಬದಲ್ಲಿ ನಾನಾ ವೇಷ ಧರಿಸಿ ಬಂದ ಹಣದಿಂದ ಮಹತ್ತರ ಕಾರ್ಯಕ್ಕೆ ಮುಂದಾಗಿದೆ.

1.5 ತಿಂಗಳ ಮುದ್ದು ಶಿಶುವಿಗೆ ತುರ್ತು ಹೃದಯಚಿಕಿತ್ಸೆಗೆ ಹಣ ಸಂಗ್ರಹ ಮಾಡಿ ತೀರಾ ಬಡಕುಟುಂಬದ ಮಗುವಿನ ಪೋಷಕರೀಗೆ ನೀಡುವ ಘನ ಉದ್ದೇಶದಿಂದ ಗುರುವಾರ ಬೆಳಿಗ್ಗೆ ಯುವಕರ ತಂಡ ಟೆಂಪೋ ಒಂದರ ಮೂಲಕ ವಿಚಿತ್ರ ವೇಷ ದೊಂದಿಗೆ ಅವರ ಪರಿಚಯ ಇರುವ ವ್ಯಕ್ತಿಗಳ ಅಂಗಡಿ ಮನೆಗಳಿಗೆ ಹೋಗಿ ಆರ್ಥಿಕ ಸಹಾಯಯಾಚನೆ ಮಾಡುತ್ತಿದ್ದಾರೆ.ಶಿಕ್ಷಣವಂತರು ಇಂಜಿನಿಯರ್ ಸೇರಿದಂತೆ ಉನ್ನತ ಉದ್ಯೋಗವಂತರ 50 ಯುವ ಜನರ ತಂಡ ರಜೆಯಲ್ಲಿ ಊರಿಗೆ ಬಂದು 1 ಲಕ್ಷಕ್ಕಿಂತ ಹೆಚ್ಚು ಹಣ ಸಂಗ್ರಹಿಸುವ ಗುರಿಹೊಂದಿದ ಇವರ ತಂಡ ಬೆಳಗಿನಿಂದ ಹಣ ಸಂಗ್ರಹದಲ್ಲಿ ತೊಡಗಿಸಿಕೊಂಡು ಮುಂದಿನ೪ ದಿನದಲ್ಲಿ ಮಗುವಿನ ಪೋಷಕರೀಗೆ ನೀಡಲಿದ್ದು, ದಾನಿಗಳು ಮಗುವಿನ ತಾಯಿ ಉಷಾರವರ ಬ್ಯಾಂಕ್ ಖಾತೆಯ ಕ್ಯೂ ಆರ್ ಕೋಡ್ಗೇ ನೀಡಿದಲ್ಲಿ ಮಗುವಿನ ಚಿಕಿತ್ಸೆಗೆ ನೆರವಾಗಬಹುದು.
