ಬ್ರಹ್ಮಾವರ : ಅಗ್ನಿ ಸುರಕ್ಷತೆ ಮತ್ತು ಆರೋಗ್ಯ ಸುರಕ್ಷತೆ ವಿಪತ್ತು ನಿರ್ವಹಣೆ ಕಾರ್ಯಾಗಾರ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎವಿಯೇಷನ್ ವಿಭಾಗದ ವತಿಯಿಂದ ಅಗ್ನಿ ಸುರಕ್ಷತೆ ಮತ್ತು ಆರೋಗ್ಯ ಸುರಕ್ಷತೆ ವಿಪತ್ತು ನಿರ್ವಹಣೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ ಸತ್ಯರಾಜ್ ಅಗ್ನಿ ಸುರಕ್ಷತೆ ಆರೋಗ್ಯ ಸುರಕ್ಷತೆ ವಿಪತ್ತು ನಿರ್ವಹಣೆ ವಿಭಾಗ ಮಂಗಳೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಆರೋಗ್ಯ ಸುರಕ್ಷತೆಯ ಕುರಿತು ಮಾಹಿತಿ ಅಗ್ನಿ ಅವಘಡ ಸಂಭವಿಸಿದಾಗ ಹೇಗೆ ತುರ್ತು ಕ್ರಮ ಕೈಗೊಳ್ಳಬೇಕು ಸೂಕ್ತ ಮಾಹಿತಿ ಪ್ರತ್ಯಕ್ಷತೆಯ ಪ್ರದರ್ಶನ ನೀಡಿದರು.


ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆ ವಿಪತ್ತು ನಿರ್ವಹಣೆ ಈ ಪ್ರಮಾಣ ಪತ್ರ ಅತಿ ಮುಖ್ಯವಾದದ್ದು ಅಗ್ನಿ ಅವಘಡ ಸಂಭವಿಸಿದಾಗ ಸೂಕ್ತ ತುರ್ತು ಕ್ರಮ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ತಿಳಿಸಿದರು. ನಿರ್ದೇಶಕಿಯಾದ ಶ್ರೀಮತಿ ಮಮತಾ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ, ಎವಿಯೇಷನ್ ಉಪನ್ಯಾಸಕಿ ಸವಿತಾ ಮತ್ತು ಸಂಸ್ಥೆಯ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಶ್ರೀಮತಿ ಅನುಪಮಾ ಭಟ್ ನಿರೂಪಿಸಿದರು .

kattemar kolothsava

Related Posts

Leave a Reply

Your email address will not be published.