Home ಕರಾವಳಿ Archive by category ಮೂಡಬಿದರೆ (Page 18)

ಮೂಡುಬಿದರೆ : ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣಾ ಅಭಿಯಾನ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ ಘಟಕ, ಇಂಟರಾಕ್ಟ್ ಕ್ಲಬ್, ಶಾಲಾ ಸಂಸತ್ತು ಹಾಗೂ ಮೂಡುಬಿದಿರೆ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣಾ ಅಭಿಯಾನ ಮೂಡುಬಿದಿರೆ ಮಾರುಕಟ್ಟೆ ಸಮೀಪ ನಡೆಯಿತು. ಪುರಸಭಾ ಮುಖ್ಯಾಧಿಕಾರಿ ಶಿವ ನಾಯಕ್ ಅಭಿಯಾನಕ್ಕೆ ಚಾಲನೆ ನೀಡಿ ಪ್ಲಾಸ್ಟಿಕ್ ನ ದುಷ್ಪರಿಣಾಮಗಳ ಬಗ್ಗೆ

ಪಿಂಗಾರ ಕಲಾವಿದೆರ್ ಬೆದ್ರ- ನೂತನ ನಾಟಕದ ಶೀರ್ಷಿಕೆ ಬಿಡುಗಡೆ

ಪಿಂಗಾರ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ `ಕದಂಬ’ ಇದರ ಶೀರ್ಷಿಕೆಯನ್ನು ಭಾನುವಾರ ಕೋಟೆ ಬಾಗಿಲು ಮಹಾಮ್ಮಾಯಿ ದೇವಸ್ಥಾನದ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ದೇವಳದ ಆಡಳಿತ ಮೋಕ್ತೇಸರ ನಾರಂಪ್ಪಾಡಿಗುತ್ತು ಸೇಸಪ್ಪ ಹೆಗ್ಡೆ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು.ತಂಡದ ಮುಖ್ಯಸ್ಥ ಮಣಿಕೋಟೆಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ, ಕದಂಬ ನಾಟಕವು ತುಳು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನವಾಗಿದ್ದು, ವಿನೂತನ ಶೈಲಿಯ ರಂಗ ವಿನ್ಯಾಸವನ್ನು ಹೊಂದಿದೆ. ಈ

ವಿದ್ಯಾಗಿರಿಯಲ್ಲಿ ವೈವಿಧ್ಯಮಯ ಹಣ್ಣುಗಳ ಮೇಳ ಸಮಾಪನ

ಮೂಡುಬಿದಿರೆ: ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಹಲಸು ಮತ್ತು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ `ಸಮೃದ್ಧಿ’ಯು ಸಮಾಪನಗೊಂಡಿತ್ತು. ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ

ಶಿರ್ತಾಡಿ : ಸಂಜೀವಿನಿ ಕಟ್ಟಡಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಶಿರ್ತಾಡಿಯ ಪೇಟೆ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಂಜೀವಿನಿ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿತು. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಶಿಲಾನ್ಯಾಸಗೈದು ಮಾತನಾಡಿ ಸಂಜೀವಿನಿ ಸ್ವಸಹಾಯ ಗುಂಪುಗಳಿಗೆ ಸುಮಾರು ರೂ. 26ಲಕ್ಷ ಅನುದಾನವನ್ನು ಉದ್ಯೋಗ, ಸ್ವ ಉದ್ಯೋಗಕ್ಕಾಗಿ ನೀಡಲಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಸಂಜೀವಿನಿಯ ಕಾರ್ಯಕ್ರಮಗಳು

ಮೂಡುಬಿದರೆ : ಜೈನ ಮುನಿಯ ಹತ್ಯೆ ಪ್ರಕರಣ, ಜೈನ ಸಮುದಾಯದಿಂದ ಪ್ರತಿಭಟನೆ

ಬೆಳಗಾಂ ಜಿಲ್ಲೆಯ ಚಿಕ್ಕೋಡಿ ಹಿರೇಕೊಡಿಯ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮೂಡುಬಿದಿರೆಯ ಸಮಸ್ತ ಜೈನ ಸಮುದಾಯದ ಬಾಂಧವರು ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಸಾವಿರ ಕಂಬದ ಬಸದಿಯಲ್ಲಿ ಖಂಡನಾ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ

ಹಲಸು-ವಿಧ್ಯಮಯ ಹಣ್ಣುಗಳ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿ ಸಜ್ಜು

ಮೂಡುಬಿದಿರೆ: ಕೃಷಿ ಋಷಿ ಡಾ.ಎಲ್.ಸಿ.ಸೋನ್ಸ್ ಸ್ಮರಣಾರ್ಥ ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಭವನವು ಸಿಂಗರಿಸಿಕೊಂಡು ಸಜ್ಜಾಗಿದೆ. ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ”ಹಲಸು

ಮೂಡುಬಿದಿರೆ : ಲೋಕಾಯುಕ್ತ ಜನಸಂಪರ್ಕ ಸಭೆ – ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮೂಡುಬಿದಿರೆ ಆಡಳಿತ ಸೌಧದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತದಿಂದ ಜನ ಸಂಪರ್ಕ ಸಭೆ ನಡೆಯಿತು. ಎಸ್‍ಪಿ ಸೈಮನ್ ಸಿ.ಎ ಹಾಗೂ ಅಧಿಕಾರಗಳ ತಂಡವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10 ಅಹವಾಲುಗಳನ್ನು ಸ್ವೀಕರಿಸಿದರು. ಸರ್ವೆ(2), ಕಂದಾಯ (5) ಪಂಚಾಯತ್ (1) ಪುರಸಭೆ (1) ಕೇಂದ್ರ ಲೋಕಾಯುಕ್ತ(1) ಸಹಿತ ಒಟ್ಟು 10 ದೂರುಗಳು ಬಂದಿದ್ದು ಈ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ದೂರುಗಳು

ಮೂಡುಬಿದರೆ : ಅಕ್ಷರದಾಸೋಹ ನೌಕರರ ಪ್ರತಿಭಟನೆ

ಮೂಡುಬಿದಿರೆ : ಸರಕಾರಿ ಮತ್ತು ಅನುದಾನ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು ಎಂದು ಆಗ್ರಹಿಸಿ, ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕಿನ ಕ.ರಾ. ಅಕ್ಷರ ದಾಸೋಹ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು. ಮೂಡುಬಿದಿರೆ ಸಿಐಟಿಯುನ ಮಾಜಿ ಅಧ್ಯಕ್ಷೆ ರಮಣಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದಿನಕ್ಕೆ ಆರು ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿರುವ ರಾಜ್ಯದ

ಮೂಡುಬಿದರೆ ಆಳ್ವಾಸ್ ನಲ್ಲಿ ಜುಲೈ 14 ರಿಂದ 16ರವರೆಗೆ ಹಲಸು ವೈವಿಧ್ಯಮಯ ಹಣ್ಣುಗಳ ಮೇಳ

ಮೂಡುಬಿದಿರೆ : ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ” ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳ ಜುಲೈ 14 ರಿಂದ 16 ರವರೆಗೆ ವಿದ್ಯಾಗಿರಿಯ ಕೆ ಅಮರನಾಥಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು

ಮೂಡುಬಿದರೆ: ಯುವಕ ನೇಣಿಗೆ ಶರಣು

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಹೌದಾಲ್ ಸಮೀಪದ ಮರಿಯಾಡಿಯ ಯುವಕ ಪಾರಿಸ್ (20) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದ ಪಾರಿಸ್‍ನ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.