Home Archive by category ಕರಾವಳಿ (Page 130)

ಪಡುಬಿದ್ರಿ: ಬೃಹತ್ತಾಕಾರದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ನಾಗಬನ ಮತ್ತು ಮನೆಯ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ. ಬಿಹಾರ -ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ. ಕರಂದಾಡಿ ದೇವಸ್ಥಾನದ ಬಳಿ ಬೃಹತ್ ಗೋಳಿ

ಬೆಳ್ತಂಗಡಿ : ಒಕ್ಕಣ್ಣನ ವರ್ಣ ಉಳ್ಳಿಂಜದಲ್ಲಿ ಒಂದೇ ಅಡಿಕೆಯಲ್ಲಿ ಚತುರ್ಥ (ನಾಲ್ಕು) ಅಡಿಕೆ ಗಿಡ (ಪೂಗಸಿರಿ)

ಕರಾವಳಿಯ ಮುಖ್ಯ ಬೆಳೆ ಅಡಿಕೆ ಅದರಲ್ಲೂ ಒಕ್ಕಣ್ಣ ಇದನ್ನು ನಂಬಬಾರದು ಎಂದು ನಮ್ಮ ಹಿರಿಯರ ಮಾತು ಅಕ್ಷರಶಃ ಸತ್ಯ. ಇದರಲ್ಲಿ ಏರಿಳಿತಗಳು ಸಾಮಾನ್ಯ ಹಾಗೆ ಪ್ರಕೃತಿ ವೈಪರೀತ್ಯಗಳು ಇನ್ನೊಂದೆಡೆ ಮಹಾಮಾರಿ ಕೊಳೆರೋಗ ಹಳದಿ ರೋಗ ಎಲೆ ಚುಕ್ಕೆ ರೋಗಗಳು ಅಲ್ಲದೆ ಅಡಿಕೆಯಲ್ಲಿರುವ ಔಷಧೀಯ ಗುಣಗಳು ಹಾಗೆ ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಆನೆ ,ಕಾಡೆಮ್ಮೆ ,ಹಂದಿ, ಮಂಗ ಮುಂತಾದವುಗಳು ಕೃಷಿಕರನ್ನು ಬೆಚ್ಚಿ ಬೀಳಿಸುತ್ತದೆ ಪ್ರಯೋಗಗಳು ಬಹಳಷ್ಟು ನಡೆದರು ಪ್ರಕೃತಿಯ ಮುಂದೆ ನಾವು

ಕಡಬ: ಬಾಲಕಿ ಬರೆದ ಪತ್ರಕ್ಕೆ ಸಿಎಂ ಪ್ರತಿಕ್ರಿಯೆ: ಟ್ವಿಟ್ಟರ್(x)ನಲ್ಲಿ ಸಂತಸ ಹಂಚಿಕೊಂಡ ಸಿದ್ದರಾಮಯ್ಯ

ಶಾಲೆಯ ಪಕ್ಕದ ಅಂಗಡಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ತಡೆಯಿರಿ ಎಂಬ ಬಾಲಕಿಯ ಮನವಿಗೆ ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಸ್ಪಂದಿಸಿದ್ದೂ,ಇದೀಗ ತನ್ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಸಾರ್ವಜನಿಕ ವಲಯದಿಂದ ಬರುತ್ತಿರುವ ಕೆಲವು ವಿಶೇಷ ವಿಚಾರಗಳಿಗೆ ತ್ವರಿತವಾಗಿ ಸ್ಪಂದಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಕೈಕಂಬದ ಸರ್ಕಾರಿ ಶಾಲೆಯಲ್ಲಿ

ಶಾಸ್ತ್ರೀ ಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ : ಡಾ|| ಚೂಂತಾರು

ದಿನಾಂಕ 02-10-2023ನೇ ಸೋಮವಾರದಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನಗರದ ಮೇರಿಹಿಲ್‍ನಲ್ಲಿ ಇರುವ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿಯಲ್ಲಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ

ನೋಡುಗರ ಕಣ್ ಮನಸೆಳೆದ ಮೀಟರ್ ನುಗ್ಗೆಕಾಯಿ..!!

ಬಂಟ್ವಾಳ : ನುಗ್ಗೆಕಾಯಿ ಎಂಬ ಕ್ಷಣ ನಮಗೆ ಅದರ ಔಷಧೀಯ ಗುಣಗಳು ನೆನಪಿಗೆ ಬರುತ್ತದೆ ಹಾಗೆ ನುಗ್ಗೆ ಸೊಪ್ಪಿನಲ್ಲಿ ರಕ್ತಹೀನತೆಗೆ ಒಳ್ಳೆಯ ಔಷಧಿ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಇ ಪೊಟ್ಯಾಷಿಯಂ ಲೈಂಗಿಕ ಕಾಯಿಲೆಗಳಿಗೆ ನುಗ್ಗೇಕಾಯಿ ರಾಮಬಾಣ ನುಗ್ಗೆಕಾಯಿಯನ್ನು ತಿನ್ನುವುದರಿಂದ ಸಿಡುಬು ಬರುವುದಿಲ್ಲ ಮೂಳೆಗಳ ಬಲ ಹೆಚ್ಚುತ್ತದೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಮದುಮೇಹಿಗಳಿಗೆ ಉತ್ತಮಚೋಟುದ್ದ ವಿದ್ದ ನುಗ್ಗೆಕಾಯಿ ಫಿಟುದ್ದ ಆಯಿತು ಹೈಬ್ರಿಡ್ ಬಂತು ಆದರೆ

ಬಲಿಪತೋಟ ಶ್ರೀ ದೈವರಾಜ ಬಬ್ಬು ಸ್ವಾಮಿ ದೈವಸ್ಥಾನ : ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ – ಬಹುಮಾನ ವಿತರಣಾ ಕಾರ್ಯಕ್ರಮ

ಶ್ರೀ ದೈವರಾಜ ಬಬ್ಬುಸ್ವಾಮಿ ಶ್ರೀ ಕಲ್ಪವೇದಿಕೆ ಬಲಿಪತೋಟ ಇದರ ವತಿಯಿಂದ 4ನೇ ವರ್ಷದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಭಾರತೀನಗರದ ಬಲಿಪತೋಟ ಶ್ರೀ ದೈವರಾಜ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ನಡೆಯಿತು. ಕೊಡಿಯಾಲ್‍ಗುತ್ತು ಪ್ರಸಾದ್ ಅಸೋಸಿಯೇಟ್ಸ್‍ನ ಪ್ರಸಾದ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಲಿಪತೋಟ ಶ್ರೀ ದೈವರಾಜ ಬಬ್ಬುಸ್ವಾಮಿ ಕ್ಷೇತ್ರದ ಅಧ್ಯಕ್ಷರಾದ ಲೋಕನಾಥ್ ಶೆಟ್ಟಿ

ಕಾರ್ಕಳ: ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ

ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶವು ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅಭಯಚಂದ್ರ ಜೈನ್ ಅವರು, ನಾವಿಂದು ಗಾಂಧಿ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಿದ್ದೇವೆ. ಅದೇ ರೀತಿ ಮಹಾತ್ಮ ಗಾಂಧಿಯವರು ಭಾರತವನ್ನು

ಬ್ರಹ್ಮಾವರ : 7ನೇ ದಿನಕ್ಕೆ ಕಾಲಿಟ್ಟ ಕಟ್ಟಡ ಸಾಮಾಗ್ರಿಗಳ ಸಾಗಾಟ ವಾಹನದ ಮಾಲಕರ ಮುಷ್ಕರ

ಉಡುಪಿ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಸಾಗಾಟ ವಾಹನಗಳ ಮಾಲಕರು ಮತ್ತು ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದು, 7ನೇ ದಿನವೂ ಮುಷ್ಕರವನ್ನು ಮುಂದುವರಿಸಿದ್ದಾರೆ. ಮುಷ್ಕರ ನಿರತರು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕೋಟದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ಮಾತುಕತೆ ನಡೆಸಿದರು. ಟಿಪ್ಪರ್ ಮಾಲಕರ ಸಂಘದ ವಿಜಯ ಕುಮಾರ್,

ಪುತ್ತೂರು: ಮದ್ಯದಂಗಡಿ ತೆರೆಯುವುದು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ, ನಶ್ರೀಯಾ ಬೆಳ್ಳಾರೆ

ಪುತ್ತೂರು: ರಾಜ್ಯ ಸರಕಾರ 1 ಸಾವಿರ ಮದ್ಯಂಗಡಿ ತೆರೆಯುವ ಮೂಲಕ ಗಾಂಧಿ ತತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ ಮತ್ತು ಮದ್ಯದಂಗಡಿ ಹೆಚ್ಚಿಸಿ ಗಾಂಧಿ ಜಯಂತಿ ಆಚರಿಸುತ್ತಿದೆ ಎಂದು ಆರೋಪಿಸಿ ಎಸ್‍ಡಿಪಿಐ ಪುತ್ತೂರು ಕ್ಷೇತ್ರ ಸಮಿತಿಯಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ವುಮೆನ್ಸ್ ಇಂಡಿಯಾ ಮೂವುಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ, ರಾಜ್ಯ ಸರಕಾರ ಗ್ಯಾರೆಂಟಿ ಸರಿದೂಗಿಸಲು ಮದ್ಯಪಾನ

ಉಳ್ಳಾಲ: ಇರಾ ಯುವಕ ಮಂಡಲ ಮತ್ತು ಸುವರ್ಣ ಮಹೋತ್ಸವ ಸಮಿತಿಯಿಂದ ಸ್ವಚ್ಛತೆ

ಸುವರ್ಣ ಮಹೋತ್ಸ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡರು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಇರಾ ಸಂಪಿಲದ ಬಿಲ್ಲವ ಭವನದ ವರೆಗೆ ಪ್ಲಾಸ್ಟಿಕ್, ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಡಿ. ಉಮ್ಮರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ಪಂಚಾಯತ್ ಕಾರ್ಯದರ್ಶಿ ದಿನೇಶ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲ್, ಉಪಾಧ್ಯಕ್ಷರಾದ