ಕಡಬ :ಕೋಡಿಂಬಾಳ ಚರ್ಚಿನಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆ

ಕಡಬ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ಇಲ್ಲಿನ ಎಂಸಿಎ ಘಟಕದ ನೇತೃತ್ವದಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಎಂಸಿಎ ಕೋಡಿಂಬಾಳ ಘಟಕದ ಉಪಾಧ್ಯಕ್ಷ ಚಾಕೋ ವಿ.ಎಂ ಅವರು ಸಭಾಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕೋಡಿಂಬಾಳ ಚರ್ಚ್‌ ಧರ್ಮಗುರುಗಳಾದ ವಂ.ರೆ.ಫಾ. ಜಾರ್ಜ್ ವಡಕೇದಿಲ್, ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಅಧ್ಯಕ್ಷರಾದ ಬೈಜು ಬೆಂಗಳೂರು, ಕಾರ್ಯದರ್ಶಿ ಪ್ರಕಾಶ್ ಕೆ.ವೈ. ನೆಲ್ಯಾಡಿ, ಸಿಸ್ಟರ್ ಕ್ಯಾರೋಲಿನ್ ಡಿ.ಎಂ, ಉಪಸ್ಥಿತರಿದ್ದರು.

ಎಂಸಿಎ ಧ್ವಜಾರೋಹಣ ಮತ್ತು ಪ್ರತಿಜ್ಞಾವಿಧಿಯ ನಂತರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರದಲ್ಲಿ ಚರ್ಚಿನ ಎಲ್ಲಾ ಕುಟುಂಬಗಳಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಕೊಡಮಾಡಿದ ಗಿಡಗಳನ್ನು ವಿತರಿಸಲಾಯಿತು. ಮಾತ್ರವಲ್ಲದೆ ಚರ್ಚ್ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದ.ಕ ವಲಯದ ಎಂಸಿಎ ಕಾರ್ಯದರ್ಶಿಗಳಾದ ಪ್ರಕಾಶ್ ಕೋಡಿಂಬಾಳ, ನೀನಾ ಸಂತೋಷ್,ಕೋಡಿಂಬಾಳ ಘಟಕದ ಪದಾಧಿಕಾರಿಗಳಾದ ಸಂದೀಪ್ ಬಿ.ಜಿ, ಸುನಿಲ್ ಟಿ.ಕೆ, ಸುಜಿತ್ ಬಿ.ಟಿ, ಸುಮಿತಾ ಪ್ರಕಾಶ್, ಸುಸ್ಮಿತಾ ಮನೋಜ್,ಉಪಸ್ಥಿತರಿದ್ದರು.ಚಾಕೋ ವಿ‌.ಎಂ ಸ್ವಾಗತಿಸಿ ಸುಜಿತ್ ಬಿ.ಟಿ ವಂದಿಸಿದರು.ನೀನಾ ಸಂತೋಷ್ ಕಾರ್ಯಕ್ರಮಗಳನ್ನು ನಿರೂಪಿಸಿದರು.

Related Posts

Leave a Reply

Your email address will not be published.