Home Archive by category ಕರಾವಳಿ (Page 3)

ಪುತ್ತೂರು: ನಗರದ ಆರ್ಯಾಪು ಗ್ರಾಮ ಪಂಚಾಯತ್ ನ ಪ್ರಾ.ಕೃ.ಪತ್ತಿನ ಸಹಕಾರ ಸಂಘಕ್ಕೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ ನಿಂದ ಪ್ರಶಸ್ತಿ ಪ್ರದಾನ

ಪುತ್ತೂರು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ .2024-25ನೇ ಸಾಲಿನ ಸಾಧನೆಗಾಗಿ ನೀಡಲ್ಪಡುವ ಪ್ರಶಸ್ತಿಯನ್ನು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು.ಸತತ ಏಳನೇ ಬಾರಿಗೆ ಪ್ರಶಸ್ತಿಗೆ ಭಾಜನರಾಗಿರುವ ಆರ್ಯಾಪು ಸಹಕಾರಿ ಸಂಘಕ್ಕ ಸಹಕಾರಿ ಸಂಘದ ಅಧ್ಯಕ್ಷ ಎಚ್‌. ಮಹಮ್ಮದ್ ಆಲಿ ಹಾಗೂ ಮುಖ್ಯ ಕಾರ್ಯ

ಉಡುಪಿ: ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ: ಧರ್ಮವನ್ನು ಉಳಿಸಿಕೊಂಡು ಮುಂದೆ ಸಾಗೋಣ: ಡಿಸಿಎಂ ಡಿಕೆಶಿ

ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ. ಆಚಾರ, ವಿಚಾರವನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯಬೇಕು.ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನಿಗೆ ನಂಬಿಕೆ ಮುಖ್ಯ. ಹೀಗಾಗಿ ಧರ್ಮವನ್ನು ಉಳಿಸಿಕೊಂಡು ನಾವೆಲ್ಲರೂ ಮುಂದೆ ಸಾಗೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ವತಿಯಿಂದ ಪರ್ಯಾಯ ಪುತ್ತಿಗೆ ಮಠಾ ಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರೋತ್ಸವ ಸಂಭ್ರಮ

ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ನಂದನ ದಿನ”

ಸುಳ್ಯ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ನಂದನ ದಿನ” ಅಗಸ್ಟ್ 30ನೇ ಶನಿವಾರದಂದು ನಡೆಯಿತು. ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಶೈಕ್ಷಣಿಕ ಸಾಧನೆ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ

ಮಂಜೇಶ್ವರ: ರಾಮಯ್ಯ ನಾಯ್ಕ್ ನಿಧನ

ಮಂಜೇಶ್ವರ ಸಮೀಪ ವರ್ಕಾಡಿ ಕೆಳಗಿನ ಪಾಡ ರಾಮಯ್ಯ ನಾಯ್ಕ್ (80)ರವರು ಅಲ್ಪ ಕಾಲೀನ ಅನಾರೋಗ್ಯ ದಿಂದ ಮೃತ ಪಟ್ಟಿರುತ್ತಾರೆ. ಅವರು ಜನಸಂಘ ಕಾಲದಿಂದ ಬಿಜೆಪಿ ಸದಸ್ಯರು ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಮತ್ತು ವರ್ಕಾಡಿ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಗುಡ್ಡೋಡಿ ದೈವಸ್ಥಾನ ದ ಗೌರವಾಧ್ಯಕ್ಷರಾಗಿದ್ದು ಅವರು ಉತ್ತಮ ಸಮಾಜಸೇವಕರಾಗಿದ್ದರು. ಅವರು ಹೆಂಡತಿ, ಮಗಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.

ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಹಳ್ಳಿ ಹುಡುಗಿ

ಸುಳ್ಯ: ದೂರವಾಣಿ ಸಂಪರ್ಕವಿಲ್ಲದ ಗ್ರಾಮೀಣ ಭಾಗದಿಂದ ಸುಮಾರು 10 ಕಿಲೋಮೀಟರ್ ದೂರದ ಹಳ್ಳಿಯ ಪ್ರತಿಭೆ ಇಂದು ತಾಲೂಕಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ. ಹೌದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ದಿ.ನಾಗಪ್ಪ ಎಂ ಎ ಹಾಗೂ ಜಾನಕಿ ದಂಪತಿಗಳ ಹಿರಿಯ ಪುತ್ರಿ ಶುಶ್ಮಿತ ಇದೀಗ ಎಸ್ ಎಸ್ ಸಿ ಜಿ ಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹೆಮ್ಮೆಯಾಗಿದ್ದಾಳೆ. ಈಕೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಲಾಗಿ

ಮಂಗಳೂರು:ಕರಾವಳಿಯಾದ್ಯಂತ ನೆತ್ತೆರೆಕೆರೆ ತುಳು ಸಿನಿಮಾ ಬಿಡುಗಡೆ

ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿದೇರ್ಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿತು. ನಗರದ ಭಾರತ್ ಸಿನಿಮಾಸ್‌ನಲ್ಲಿ ನಟ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆತ್ತೆರೆಕೆರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದರು. ಪತ್ರಕರ್ತರು ಮತ್ತು ಸಿನಿಮಾ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಅವರು

ಮಲ್ಪೆ: ಸಮುದ್ರ ತೀರದ ತೊಟ್ಟಂ:ಸಮುದ್ರದ ರಭಸಕ್ಕೆ ಮಗುಚಿ ಬಿದ್ದ ದೋಣಿ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರು

ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮಗಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ರವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್, ಉದಯ್ ಯವರ ಜೊತೆ ಸೇರಿ ಲೈಫ್ ಜಾಕೇಟ್ ನೀಡಿ ನಾಲ್ಕುರು ಮೀನುಗಾರರ ಜೀವ ಉಳಿಸಲಾಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮಲ್ಪೆಯ

ಪೋಲೆಂಡ್ ;ನೆಲಕ್ಕುರುಳಿದ ವಿಮಾನ ಎಫ್- 16 ಫೈಟರ್ ಜೆಟ್ ಪೈಲಟ್ ಸಾವು

ಮಧ್ಯ ಪೋಲೆಂಡಿನ ರಾಡೊಮ್‌ನಲ್ಲಿ ಏರ್ ಶೋ ನಡೆಸಲು ಮುನ್ ತಾಲೀಮು ನಡೆಸುತ್ತಿದ್ದ ವೇಳೆ ಎಫ್- 16 ಫೈಟರ್ ಜೆಟ್ ವಿಮಾನವು ನೆಲಕ್ಕುರುಳಿದ ಪರಿಣಾಮವಾಗಿ ಪೈಲಟ್ ಸಾವು ಕಂಡರು. ಪೋಲೆಂಡ್ ಸೇನೆಯು ಪ್ರತಿ ವರುಷದಂತೆ ಏರ್ ಶೋ ನಡೆಸಲು ಪೋಲೆಂಡಿನ ರಾಡೊಮ್ ನಗರದಲ್ಲಿ ತಾಲೀಮು ನಡೆಸಿತ್ತು. ಏರ್ ಫೋರ್ಸಿನ ಎಫ್- 16 ಫೈಟರ್ ಜೆಟ್ ವಿಮಾನವು ಹಾರಾಟದ ನಡುವೆ ಕೆಳಕ್ಕುರುಳಿ ಸೇನಾ ಪೈಲಟ್ ಸ್ಥಳದಲ್ಲೇ ಸಾವು ಕಂಡರು. ಇದನ್ನು ವಿಷಾದದಿಂದ ಪೋಲೆಂಡ್ ಉಪ ಪ್ರಧಾನಿ ವ್ಲಾಡೈಸ್ಲಾವ್

ಸ್ವಿಜರ್‌ಲ್ಯಾಂಡ್ : ಜ್ಯೂರಿಚ್‌ ಜಾವೆಲಿನ್ ಎಸೆತ ಬೆಳ್ಳಿಗೆ ತಳ್ಳಲ್ಪಟ್ಟ ನೀರಜ್ ಚೋಪ್ರಾ

ಭಾರತದ ನೀರಜ್ ಚೋಪ್ರಾ ಅವರು ಸ್ವಿಜರ್‌ಲ್ಯಾಂಡಿನ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.ಇದು ಡೈಮಂಡ್ ಲೀಗ್ ಪಂದ್ಯಾವಳಿಯಲ್ಲಿ ನೀರಜ್ ಚೋಪ್ರಾರಿಗೆ ದಕ್ಕಿರುವ ನಾಲ್ಕನೆಯ ಪದಕವಾಗಿದೆ. ಕೊನೆಯ ಮೂರರಲ್ಲಿ ಬೆಳ್ಳಿ ಹಿಡಿದ ಅವರು ರಜತ ಹ್ಯಾಟ್ರಿಕ್ ಗಳಿಸಿದರು. 2022 ರ ಡೈಮಂಡ್ ಲೀಗ್‌ನಲ್ಲಿ ಮಾತ್ರ ಅವರು ಚಿನ್ನ ಗೆದ್ದಿದ್ದರು. 2023, 2024 ಹಾಗೂ ಈ ವರುಷದ ಡೈಮಂಡ್ ಲೀಗ್‌ನಲ್ಲಿ ಅವರು ಈಟಿ ಎಸೆತz ಮೂಲಕ

ಬ್ರಹ್ಮಾವರ; ಸಾಲಿಕೇರಿ ಯುವಕರ ತಂಡ ಗಣೇಶೋತ್ಸವದಲ್ಲಿ ವೇಷ ತೊಟ್ಟು ಮಗುವಿನ ಹೃದಯದ ಚಿಕಿತ್ಸೆಗೆ ಆರ್ಥಿಕ ಸಂಗ್ರಹ

ಸನಾತನ ಧರ್ಮ ಆಚರಣೆಯ ಪೂಜೆ ಉತ್ಸವಗಳು ಪರೋಕ್ಷವಾಗಿ ನೂರಾರು ಕೈಗಳಿಗೆ ಉದ್ಯೋಗ ಆರ್ಥಿಕ ಸ್ವಾವಲಂಭನೆಯಾಗಿದೆ. ಬ್ರಹ್ಮಾವರ ಬಳಿಯ ಸಾಲಿಕೇರಿಯ ಯುವಕರ ಒಂದು ತಂಡ ಫ್ರೇಂಡ್ಸ್ ಕ್ಲಬ್ ಹೆಸರಿನಲ್ಲಿ ಗಣೇಶ ಚೌತಿಯ ಸಂದರ್ಬದಲ್ಲಿ ನಾನಾ ವೇಷ ಧರಿಸಿ ಬಂದ ಹಣದಿಂದ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. 1.5 ತಿಂಗಳ ಮುದ್ದು ಶಿಶುವಿಗೆ ತುರ್ತು ಹೃದಯಚಿಕಿತ್ಸೆಗೆ ಹಣ ಸಂಗ್ರಹ ಮಾಡಿ ತೀರಾ ಬಡಕುಟುಂಬದ ಮಗುವಿನ ಪೋಷಕರೀಗೆ ನೀಡುವ ಘನ ಉದ್ದೇಶದಿಂದ ಗುರುವಾರ ಬೆಳಿಗ್ಗೆ ಯುವಕರ ತಂಡ